ನವದೆಹಲಿ, ಫೆ.10: ಕನ್ನಡಿಗ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಕೆತ್ತನೆ ಮಾಡಿದ ಬಾಲರಾಮನ ವಿಗ್ರಹವನ್ನು ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ (Ayodhya Ram Mandir) ಪ್ರತಿಷ್ಠಾಪನೆ ಮಾಡಲಾಗಿದೆ. ಆದರೆ, ಮುಗ್ದತೆಯನ್ನು ಒಳಗೊಂಡ ಬಾಲರಾಮನ (Ramlalla) ಕಣ್ಣುಗಳು ಎಲ್ಲರನ್ನು ಅಚ್ಚರಿಗೊಳಿಸಿದ್ದವು. ಅಷ್ಟಕ್ಕೂ ಈ ಕಣ್ಣುಗಳನ್ನು ಬೆಳ್ಳಿ ಸುತ್ತಿಗೆ ಹಾಗೂ ಚಿನ್ನದ ಉಳಿಯ ಮೂಲಕ ಕೆತ್ತನೆ ಮಾಡಿದ್ದರು. ಈ ಬೆಳ್ಳಿ ಸುತ್ತಿಗೆ ಹಾಗೂ ಚಿನ್ನದ ಉಳಿಯ ಫೋಟೋವನ್ನು ಅರುಣ್ ಯೋಗಿರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಫೋಟೋವನ್ನು ಇನ್ಸ್ಟಾಗ್ರಾಮ್ ಹಾಗೂ ಎಕ್ಸ್ನಲ್ಲಿ (ಟ್ವಿಟರ್) ಹಂಚಿಕೊಂಡಿದ್ದಾರೆ. “ಈ ಬೆಳ್ಳಿಯ ಸುತ್ತಿಗೆಯನ್ನು ಚಿನ್ನದ ಉಳಿಯೊಂದಿಗೆ ಹಂಚಿಕೊಳ್ಳಲು ನಾನು ಯೋಚಿಸಿದೆ, ಇದನ್ನು ನಾನು ಅಯೋಧ್ಯೆಯ ರಾಮಲಲ್ಲಾನ ದೈವಿಕ ಕಣ್ಣುಗಳನ್ನು ಕೆತ್ತಿದ್ದೇನೆ ಎಂದು ಎಕ್ಸ್ನಲ್ಲಿ ಅರುಣ್ ಯೋಗಿರಾಜ್ ಬರೆದುಕೊಂಡಿದ್ದಾರೆ.
Thought of sharing this Silver hammer with the golden chisel using which I carved the divine eyes (Netronmilana )of Ram lalla, Ayodhya pic.twitter.com/95HNiU5mVV
— Arun Yogiraj (@yogiraj_arun) February 10, 2024
ಇತ್ತೀಚೆಗೆ, ರಾಮಲಲ್ಲಾನ ಕಣ್ಣುಗಳ ಕೆತ್ತನೆ ಬಗ್ಗೆ ಒಂದಷ್ಟು ಮಾಹಿತಿಯನ್ನು ಅರುಣ್ ಯೋಗಿರಾಜ್ ಅವರು ಹಂಚಿಕೊಂಡಿದ್ದರು. ಈ ವೇಳೆ ಅವರು ಕಣ್ಣುಗಳ ಕೆತ್ತನೆಗೆ ಬೆಳ್ಳಿಯ ಸುತ್ತಿಗೆ ಹಾಗೂ ಚಿನ್ನದ ಉಳಿ ಉಪಯೋಗಿಸಿದ್ದಾಗಿ ಹೇಳಿಕೊಂಡಿದ್ದರು. ಅಲ್ಲದೆ, ಕಣ್ಣುಗಳನ್ನು ಕೆತ್ತನೆ ಮಾಡಲು ತೆಗೆದುಕೊಂಡ ಸಮಯದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದರು.
ಇದನ್ನೂ ಓದಿ: ಅಯೋಧ್ಯೆಯ ರಾಮ ಮಂದಿರಕ್ಕೆ ತೆರಳಿ ದುಬಾರಿ ಜ್ಯುವೆಲರಿ ನೀಡಿದ ಅಮಿತಾಭ್ ಬಚ್ಚನ್
ವಿಗ್ರಹದ ಮುಖ ಕೆತ್ತನೆಗೆ ಅರುಣ್ ಯೋಗಿರಾಜ್ ಅವರು ಎರಡು ತಿಂಗಳು ಯೋಚನೆ ಮಾಡಿದ್ದರಂತೆ. ಮಗುವಿನ ನಗುಮುಖದ ಆಲೋಚನೆ ಬರುತ್ತಿದ್ದಂತೆ ರಾಮಲಲ್ಲಾನ ಮುಖದ ಕೆತ್ತನೆ ಆರಂಭಿಸಿದ್ದೆ ಎಂದು ಹೇಳಿದ್ದರು, ಕಣ್ಣುಗಳ ಕೆತ್ತನೆಯನ್ನು ಶುಭಮುಹೂರ್ತ ನೋಡಿ ಕೆತ್ತಲಾಗುತ್ತದೆ. ರಾಮಲಲ್ಲಾನ ಕಣ್ಣುಗಳ ಕೆತ್ತನೆಗೆ 20 ನಿಮಿಷಗಳ ಶುಭಮುಹೂರ್ತ ನೀಡಲಾಗಿತ್ತು. ಕೆತ್ತನೆಯನ್ನು ಬೆಳ್ಳಿ ಸುತ್ತಿಗೆ ಹಾಗೂ ಚಿನ್ನದ ಉಳಿಯಲ್ಲಿ ಮಾತ್ರ ಕೆತ್ತನೆ ಮಾಡಬೇಕು. ಹೀಗಾಗಿ ಬೆಳ್ಳಿ ಸುತ್ತಿಗೆ ಹಾಗೂ ಚಿನ್ನದ ಉಳಿ ನನಗೆ ಪೂರೈಸಿದ್ದರು ಎಂದು ಮಾಹಿತಿ ಹಂಚಿಕೊಂಡಿದ್ದರು.
ಅಲ್ಲದೆ, ರಾಮಲಲ್ಲಾನ ಕಣ್ಣುಗಳ ಕೆತ್ತನೆಗೂ ಮುನ್ನ ಅರುಣ್ ಯೋಗಿರಾಜ್ ಅವರು ಸರಯು ನದಿಯಲ್ಲಿ ಸ್ನಾನ ಮಾಡಿದ್ದರು. ಹನುಮಾನ್ ಗರ್ಹಿ ಮತ್ತು ಕನಕ ಭವನದಲ್ಲಿ ಪೂಜೆ ಸಲ್ಲಿಸಿದ್ದರು.
ರಾಮಲಲ್ಲಾನ ವಿಗ್ರಹದ ಕೆತ್ತನೆಗೆ ಬಳಸಿರುವ ಕಲ್ಲನ್ನು ಕೃಷ್ಣ ಶಿಲೆ ಎಂದು ಕರೆಯಲಾಗುತ್ತೆ. ಆಸಿಡ್, ವಾಟರ್, ಫೈರ್, ರಸ್ಟ್ ಪ್ರೊಫ್ ನಿಂದ ಕೂಡಿರುವ ಕಲ್ಲೆ ಕೃಷ್ಣ ಶಿಲೆ. ಕಬ್ಬಿಣ 850 ಡಿಗ್ರಿಯಲ್ಲಿ ಕಾಯಿಸಿದರೆ ಕರಗಿ ಹೋಗುತ್ತದೆ. ಆದರೆ ಕೃಷ್ಣ ಶಿಲೆ ಕರಗುವುದಿಲ್ಲ, ಸಿಡಿಯುವುದಿಲ್ಲ, ಆಸಿಡ್ ಹಾಕಿದರೆ ಏನೂ ಆಗಲ್ಲ. ಮಳೆ, ಗಾಳಿ, ಬಿಸಿಲಿಗೂ ಏನು ಆಗಲ್ಲ. ಕೃಷ್ಣ ಶೀಲೆ ಸಾಕಷ್ಟು ಗಟ್ಟಿಯಾದ ಕಲ್ಲು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ