Omicron: ಮಹಾರಾಷ್ಟ್ರದಲ್ಲಿ 17 ಒಮಿಕ್ರಾನ್​ ಪ್ರಕರಣ; ಮುಂಬೈನಲ್ಲಿ 144 ಸೆಕ್ಷನ್​ ಜಾರಿ

| Updated By: Lakshmi Hegde

Updated on: Dec 11, 2021 | 9:16 AM

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಕೊರೊನಾ ಸೋಂಕಿನ ಹೊಸ ತಳಿ ಒಮಿಕ್ರಾನ್ ಸದ್ಯ ಭಾರತ ಸೇರಿ 50ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿದೆ.  ನಮ್ಮ ದೇಶದಲ್ಲೂ 32 ಮಂದಿಯಲ್ಲಿ ಒಮಿಕ್ರಾನ್​ ದೃಢಪಟ್ಟಿದೆ.

Omicron: ಮಹಾರಾಷ್ಟ್ರದಲ್ಲಿ 17 ಒಮಿಕ್ರಾನ್​ ಪ್ರಕರಣ; ಮುಂಬೈನಲ್ಲಿ 144 ಸೆಕ್ಷನ್​ ಜಾರಿ
ಸೆಕ್ಷನ್​ 144
Follow us on

ನೋಡನೋಡುತ್ತಿದ್ದಂತೆ ದೇಶದಲ್ಲಿ ಒಮಿಕ್ರಾನ್​ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ನಿನ್ನೆ ಮತ್ತೆ ಏಳು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ ದೇಶದಲ್ಲಿ 32ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲೇ 17ಕ್ಕೆ ಏರಿಕೆಯಾಗಿದೆ. ಒಮಿಕ್ರಾನ್ ಸೋಂಕು ಹೆಚ್ಚಾದ ಬೆನ್ನಲ್ಲೇ ಮುಂಬೈನಲ್ಲಿ ಇಂದು ಮತ್ತು ನಾಳೆ (ಡಿ.11 ಮತ್ತು 12ರಂದು) ಸೆಕ್ಷನ್​ 144 ಹೇರಲಾಗಿದೆ.  ಅದರ ಅನ್ವಯ ಮುಂಬೈನಲ್ಲಿ ರ್ಯಲಿಗಳು, ಮೆರವಣಿಗೆಗಳು ಮತ್ತಿತರ ರೀತಿಯ ಗುಂಪುಗೂಡುವಿಕೆಯನ್ನು ನಿಷೇಧಿಸಲಾಗಿದ್ದು, ಒಮಿಕ್ರಾನ್​ ಇನ್ನಷ್ಟು ಹರಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ವಿಧಿಸಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಕೊರೊನಾ ಸೋಂಕಿನ ಹೊಸ ತಳಿ ಒಮಿಕ್ರಾನ್ ಸದ್ಯ ಭಾರತ ಸೇರಿ 50ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿದೆ.  ನಮ್ಮ ದೇಶದಲ್ಲೂ 32 ಮಂದಿಯಲ್ಲಿ ಒಮಿಕ್ರಾನ್​ ದೃಢಪಟ್ಟಿದೆ. ಅದರಲ್ಲೂ ಕೂಡ ಮಹಾರಾಷ್ಟ್ರದಲ್ಲೇ ಅತ್ಯಂತ ಹೆಚ್ಚು ಕೇಸ್​​ಗಳಿವೆ. ನಿನ್ನೆ ಮೂರು ವರ್ಷದ ಮಗುವಲ್ಲೂ ಒಮಿಕ್ರಾನ್​ ಸೋಂಕು ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ. ನಿನ್ನೆ ಪತ್ತೆಯಾದ ಏಳು ಕೇಸ್​ಗಳಲ್ಲಿ ಮೂರು ಪ್ರಕರಣಗಳು ಮುಂಬೈನಿಂದ ಮತ್ತು ನಾಲ್ಕು ಕೇಸ್​ಗಳು ಪಿಂಪ್ರಿಯ ಚಿಂಚವಾಡ ಮುನ್ಸಿಪಲ್ ಕಾರ್ಪೋರೇಶನ್​​ನಿಂದ ಎಂದು ಹೇಳಲಾಗಿದೆ. ಮುಂಬೈನಲ್ಲಿ ಸೋಂಕಿಗೆ ಒಳಗಾದವರು ಎಲ್ಲರೂ ಪುರುಷರೇ ಆಗಿದ್ದು, 48, 25 ಮತ್ತು 37ನೇ ವರ್ಷದವರು. ಇವರು ತಾಂಜೇನಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸಾದವರು.  ಏಳು ರೋಗಿಗಳಲ್ಲಿ ನಾಲ್ವರಿಗೆ ಈಗಾಗಲೇ ಕೊರೊನಾ ಲಸಿಕೆ ನೀಡಲಾಗಿದೆ. ಒಬ್ಬ ರೋಗಿಯು ಒಂದೇ ಡೋಸ್ ಲಸಿಕೆಯನ್ನು ಪಡೆದಿದ್ದರೆ ಒಬ್ಬ ರೋಗಿಗೆ ಲಸಿಕೆ ಹಾಕಲಾಗಿಲ್ಲ. ನಾಲ್ವರು ರೋಗಿಗಳಲ್ಲಿ ಯಾವುದೇ ರೋಗಲಕ್ಷಣ ಕಂಡುಬಂದಿಲ್ಲ. ಮೂರು ರೋಗಿಗಳು ಸೌಮ್ಯ ಲಕ್ಷಣಗಳನ್ನು ಹೊಂದಿದ್ದಾರೆ. ಮಹಾರಾಷ್ಟ್ರ ಹೊರತು ಪಡಿಸಿದರೆ ರಾಜಸ್ಥಾನದಲ್ಲಿ 9, ಗುಜರಾತ್​​ನಲ್ಲಿ 3​, ಕರ್ನಾಟಕದಲ್ಲಿ 2 ಮತ್ತು ದೆಹಲಿಯಲ್ಲಿ ಒಂದು ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಕೆಲವೇ ಗಂಟೆಗಳಲ್ಲಿ 8 ಮಿಲಿಯನ್​ ವೀವ್ಸ್​ ಪಡೆದ ಸಮಂತಾ ಸಾಂಗ್​; ಇನ್ನಷ್ಟು ಹೆಚ್ಚಿತು ‘ಪುಷ್ಪ’ ಹವಾ​

Published On - 9:09 am, Sat, 11 December 21