ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವಂತೆ ಕೆಂಪು ಕೋಟೆ ಸುತ್ತ ಬಿಗಿಭದ್ರತೆ, ಎಲ್ಲೆಲ್ಲೂ ಕಂಟೇನರ್​ಗಳು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 08, 2021 | 4:39 PM

ಸ್ವಾತಂತ್ರ್ಯ ದಿನಾಚರಣೆಯಂದು ಯಾವುದೇ ಅವಘಡ ನಡೆಯಬಾರದು ಎಂಬ ಕಾರಣಕ್ಕೆ ದೆಹಲಿ ಪೊಲೀಸರು ಇಂಥ ಕ್ರಮಕ್ಕೆ ಮುಂದಾಗಿದ್ದಾರೆ

ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವಂತೆ ಕೆಂಪು ಕೋಟೆ ಸುತ್ತ ಬಿಗಿಭದ್ರತೆ, ಎಲ್ಲೆಲ್ಲೂ ಕಂಟೇನರ್​ಗಳು
ದೆಹಲಿಯ ಕೆಂಪುಕೋಟೆ ಸುತ್ತಲೂ ಪೊಲೀಸರು ಕಂಟೇನರ್​ಗಳನ್ನು ಪೇರಿಸಿದ್ದಾರೆ.
Follow us on

ದೆಹಲಿ: ಆಗಸ್ಟ್​ 15 ಹತ್ತಿರವಾಗುತ್ತಿದ್ದಂತೆ ದೆಹಲಿಯ ಕೆಂಪು ಕೋಟೆ ಸುತ್ತಲೂ ಶಿಪಿಂಗ್ ಕಂಟೇನರ್​ಗಳನ್ನು ಪೇರಿಸಲಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಯಾವುದೇ ಅವಘಡ ನಡೆಯಬಾರದು ಎಂಬ ಕಾರಣಕ್ಕೆ ದೆಹಲಿ ಪೊಲೀಸರು ಇಂಥ ಕ್ರಮಕ್ಕೆ ಮುಂದಾಗಿದ್ದಾರೆ. ಕಳೆದ ಗಣರಾಜ್ಯೋತ್ಸವ ಸಮಾರಂಭದ ವೇಳೆ ರೈತರು ನಡೆಸಿದ್ದ ಟ್ರ್ಯಾಕ್ಟರ್​ ರ‍್ಯಾಲಿ ಹಿಂಸಾಚಾರದ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಈ ಬಾರಿ ಹಾಗೆ ಆಗಲು ಯಾವುದೇ ಅವಕಾಶ ನೀಡುವುದಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಈ ಕಂಟೇನರ್​ಗಳನ್ನು ಸಿಂಗರಿಸಿ, ಬಣ್ಣ ಬಳಿಯಲಾಗುವುದು ಎಂದು ಹೇಳಿರುದ ದೆಹಲಿ ಪೊಲೀಸರು, ಈಚಿನ ದಿನಗಳಲ್ಲಿ ಡ್ರೋಣ್ ದಾಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಕೆಂಪುಕೋಟೆಯಿಂದ ಪ್ರಧಾನಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಕಳೆದ ವರ್ಷ ಗಣರಾಜ್ಯೋತ್ಸವ ಸಮಾರಂಭದ ನಂತರ ರೈತರ ಟ್ರ್ಯಾಕ್ಟರ್​ ರ‍್ಯಾಲಿ ದೆಹಲಿಯ ಕೆಂಪುಕೋಟೆ ತಲುಪಿತ್ತು. ಈ ವರ್ಷವೂ ಅಂಥ ಘಟನೆಗಳು ನಡೆಯಬಾರದು ಎಂಬ ಕಾರಣಕ್ಕೆ ಪೊಲೀಸರು ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಭಯೋತ್ಪಾದಕ ದಾಳಿಯ ಬೆದರಿಕೆಯೂ ಪೊಲೀಸರ ಈ ಕ್ರಮಕ್ಕೆ ಕಾರಣವಾಗಿದೆ.

(Security Tightened Near New Delhi Before Independence Day Huge Containers Used for Security)

ಇದನ್ನೂ ಓದಿ: Explainer | ಗಣರಾಜ್ಯೋತ್ಸವ ಪರೇಡ್; ಎಲ್ಲ ಎನ್​ಸಿಸಿ ಕೆಡೆಟ್​ಗಳ ಅತಿದೊಡ್ಡ ಕನಸು, ಆರ್​ಡಿ ಪರೇಡ್​ಗೆ ಆಯ್ಕೆಯಾಗುವುದು ಹೇಗೆ?

ಇದನ್ನೂ ಓದಿ: ಗಣರಾಜ್ಯೋತ್ಸವ ಸ್ತಬ್ಧಚಿತ್ರದಲ್ಲಿ ಶಿವಮೊಗ್ಗ ರಂಗಾಯಣ ರೆಪರ್ಟರಿ ಕಲಾವಿದರು