Explainer | ಗಣರಾಜ್ಯೋತ್ಸವ ಪರೇಡ್; ಎಲ್ಲ ಎನ್​ಸಿಸಿ ಕೆಡೆಟ್​ಗಳ ಅತಿದೊಡ್ಡ ಕನಸು, ಆರ್​ಡಿ ಪರೇಡ್​ಗೆ ಆಯ್ಕೆಯಾಗುವುದು ಹೇಗೆ?

ಇಡೀ ರಾಷ್ಟ್ರಕ್ಕೆ ಗಣರಾಜ್ಯೋತ್ಸವ ಒಂದು ರೀತಿಯ ಸಂಭ್ರಮವಾದ್ರೆ, NCC ಕೆಡೆಟ್​ಗಳಿಗೆ ಈ ದಿನ ಬಹಳ ಮುಖ್ಯ ಹಾಗೂ ಒಂದು ರೀತಿಯ ವಿಶೇಷ ದಿನ. ಬಹುತೇಕ ಕೆಡೆಟ್​ಗಳು ಈ ದಿನಕ್ಕಾಗಿ ತಮ್ಮ ಸರ್ವಸ್ವವನ್ನೂ ಪಣಕ್ಕೆ ಇಟ್ಟು ಶ್ರಮಿಸ್ತಾರೆ.

Explainer | ಗಣರಾಜ್ಯೋತ್ಸವ ಪರೇಡ್; ಎಲ್ಲ ಎನ್​ಸಿಸಿ ಕೆಡೆಟ್​ಗಳ ಅತಿದೊಡ್ಡ ಕನಸು, ಆರ್​ಡಿ ಪರೇಡ್​ಗೆ ಆಯ್ಕೆಯಾಗುವುದು ಹೇಗೆ?
ಆರ್​ಡಿ ಪರೇಡ್​ಗೆ ಸಿದ್ಧವಾಗುತ್ತಿರುವ ಎನ್​ಸಿಸಿ ಕೆಡೆಟ್​ಗಳು (ಸಂಗ್ರಹ ಚಿತ್ರ)
Follow us
ರಶ್ಮಿ ಕಲ್ಲಕಟ್ಟ
| Updated By: ಆಯೇಷಾ ಬಾನು

Updated on:Jan 26, 2021 | 10:22 AM

ದೇಶ ಇದೀಗ 72ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ಇಡೀ ರಾಷ್ಟ್ರಕ್ಕೆ ಗಣರಾಜ್ಯೋತ್ಸವ ಒಂದು ರೀತಿಯ ಸಂಭ್ರಮವಾದ್ರೆ, NCC ಕೆಡೆಟ್​ಗಳಿಗೆ ಈ ದಿನ ಬಹಳ ಮುಖ್ಯ ಹಾಗೂ ಒಂದು ರೀತಿಯ ವಿಶೇಷ ದಿನ. ಬಹುತೇಕ ಕೆಡೆಟ್​ಗಳು ಈ ದಿನಕ್ಕಾಗಿ ತಮ್ಮ ಸರ್ವಸ್ವವನ್ನೂ ಪಣಕ್ಕೆ ಇಟ್ಟು ಶ್ರಮಿಸ್ತಾರೆ. ಎನ್​ಸಿಸಿ ಸಮವಸ್ತ್ರ ತೊಟ್ಟವರಿಗೆ ಆರ್​ಡಿಸಿ RDC (ರಿಪಬ್ಲಿಕ್ ಡೇ ಕ್ಯಾಂಪ್) ದೊಡ್ಡ ಕನಸು. RDC ಮಾಡಿರುವ ಕೆಡೆಟ್​ಗಳು ಈ ದಿನವನ್ನು ಹೇಗೆ ಸ್ಮರಿಸುತ್ತಾರೆ? RDC ಸೆಲೆಕ್ಷನ್ ಹೇಗಿರುತ್ತೆ ಎಂಬ ಮಾಹಿತಿ ನೀಡಿದ್ದಾರೆ ಕೆಡೆಟ್ ಪ್ರಮೋದ್.

NCCಗೆ ಸೇರುವ ಪ್ರತಿಯೊಬ್ಬ ಕೆಡೆಟ್​ಗೆ RDC ದೊಡ್ಡ ಕನಸು. ಹಗಲು ರಾತ್ರಿಗಳನ್ನು ಲೆಕ್ಕ ಹಾಕದೆ ಸತತ 6 ತಿಂಗಳ ಕಾಲ ಊಟ, ನಿದ್ರೆಗಳನ್ನು ತ್ಯಜಿಸಿ ಮಾಡು ಇಲ್ಲವೆ ಮಡಿ ಎಂಬಂತೆ ಕಠಿಣ ತರಬೇತಿಯೊಂದಿಗೆ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಂದು ಪ್ರಧಾನಿ ನರೇಂದ್ರ ಮೋದಿಗೆ ಗೌರವ ಸಲ್ಲಿಸುವ ಹಾಗೂ ಇಡೀ ದೇಶವನ್ನು ಪ್ರತಿನಿಧಿಸುವ ಭಾಗ್ಯ RDC ಕೆಡಿಟ್​ಗೆ ಸಿಗುತ್ತೆ. ಇದೊಂದು ಹೆಮ್ಮೆ ಹಾಗೂ ಮೈಪುಳಕಿಸುವ ಸಂದರ್ಭ. ಈ ಅವಕಾಶ ತೀರ ಕಡಿಮೆ ಕೆಡೆಟ್​ಗಳಿಗೆ ಸಿಗುತ್ತೆ. ಈ ಅವಕಾಶವನ್ನು ಪಡೆದುಕೊಳ್ಳಲು ಪ್ರತಿಯೊಬ್ಬ ಕೆಡೆಟ್ ಕಾತರದಿಂದ ಕಾಯುತ್ತಿರುತ್ತಾನೆ ಎಂದು 4 Kar Battalion 2019ರ ಬ್ಯಾಚ್​ನ RDC ಕೆಡೆಟ್ ಪ್ರಮೋದ್ ಹಂಚಿಕೊಂಡಿದ್ದಾರೆ.

NCC-ನ್ಯಾಷನಲ್ ಕೆಡೆಟ್ ಕಾರ್ಪ್ಸ್. ಇದನ್ನು ದೇಶದ ಸೆಕೆಂಡ್ ಲೈನ್ ಆಫ್ ಡಿಫೆನ್ಸ್ ಎಂದೇ ಪರಿಗಣಿಸಲಾಗಿದೆ. 1947ರಲ್ಲಿ ಸ್ವತಂತ್ರ್ಯದ ನಂತರ ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರು ನಮ್ಮ ದೇಶದ ಯುವಜನಾಂಗದ ವ್ಯಕ್ತತ್ವವನ್ನು ರೂಪಿಸುವ, ಅವರನ್ನು ಉತ್ತಮ ಪ್ರಜೆಯನ್ನಾಗಿ ಮಾಡುವ ಒಂದು ಯುವ ಸಂಘಟನೆಯನ್ನು ರೂಪಿಸಲು ನಿರ್ಧರಿಸಿದ್ರು. ಇದಕ್ಕೆ ಆಗಿನ ಶಿಕ್ಷಣ ತಜ್ಞರಾಗಿದ್ದ ಡಾ.H.N.ಕುಂಜ್ರು ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ರು.

ಈ ವೇಳೆ ರಚನೆಯಾದ NCC ಕೇವಲ ಸಂಘಟನೆಯಾಗಲಿಲ್ಲ. ಇದರಲ್ಲಿ ನಮ್ಮ ದೇಶದ ಯುವಕರಿಗೆ ಶಿಸ್ತುಬದ್ಧ ಜೀವನವನ್ನು ರೂಪಿಸಲು ಮತ್ತು ತುರ್ತು ಪರಿಸ್ಥಿತಿಯಲ್ಲಿ ಅವರನ್ನು ಭಾರತೀಯ ಸೈನ್ಯಕ್ಕೆ ಸೇರಲು ಸಾಮರ್ಥ್ಯ ಹೊಂದುವಂತೆ ಸಿದ್ಧ ಮಾಡಲಾಗುತ್ತೆ. ಹೀಗಾಗಿಯೇ NCCಯನ್ನು ದೇಶದ ಸೆಕೆಂಡ್ ಲೈನ್ ಆಫ್ ಡಿಫೆನ್ಸ್ ಎಂದೇ ಪರಿಗಣಿಸಲಾಗಿದೆ. NCC ಸೇರಿದವರು ಹಲವು ಕ್ಯಾಂಪ್​ಗಳನ್ನು ಅಡೆಂಡ್ ಮಾಡಬೇಕಾಗುತ್ತೆ. ಸೇನೆಯ ಸಿಬ್ಬಂದಿಯ ಕಣ್ಗಾವಲಿನಲ್ಲಿ ನಡೆಯುವ ಈ ಕ್ಯಾಂಪ್​ಗಳಲ್ಲಿ ಸೈನಿಕರಿಗೆ ನೀಡುವಂಥ ತರಬೇತಿಗಳನ್ನು ನೀಡುತ್ತಾರೆ. ನಮ್ಮ ದೈಹಿಕ ಸಾಮರ್ಥ್ಯ, ನಡಿಗೆ ಮತ್ತು ಮಾತಿನ ಶೈಲಿಯೂ ಸಾಕಷ್ಟು ಸುಧಾರಿಸುತ್ತೆ.

ಆರ್​ಡಿ ಪರೇಡ್​ಗೆ ಬ್ಯಾಂಡ್​ ಮೆರುಗು

ಇಂಥ ಕ್ಯಾಂಪ್​ಗಳಲ್ಲಿ ಉತ್ತಮ ಸಾಧನೆ ತೋರಿದವರನ್ನು RDCಗೆ (ರಿಪಬ್ಲಿಕ್ ಡೇ ಕ್ಯಾಂಪ್) ಸೆಲೆಕ್ಟ್ ಮಾಡಲಾಗುತ್ತದೆ. ಇದು ಎಲ್ಲಾ ಕೆಡೆಟ್​ಗಳಿಗೂ ಸಿಗುವ ಅವಕಾಶವಲ್ಲ. ಇದರ ಸೆಲೆಕ್ಷನ್ ಬಹಳ ಕಠಿಣವಾಗಿರುತ್ತೆ. ಹೀಗಾಗಿ RDC ಮಾಡಿದವರಿಗೆ ಹೆಚ್ಚಿನ ಗೌರವ ಲಭಿಸುತ್ತೆ. ಈ ಕ್ಯಾಂಪ್ ಮಾಡಲು ಕಠಿಣ ಪರಿಶ್ರಮದ ಅವಶ್ಯಕತೆ ಇರುತ್ತೆ. ಇದರಲ್ಲಿ ಒಟ್ಟು 7+1 ಕ್ಯಾಂಪ್​ಗಳನ್ನು ಪೂರ್ಣಗೊಳಿಸಬೇಕಾಗುತ್ತೆ. ಇದು ಒಂದು ನಿರ್ದೇಶಲಯದಿಂದ ನಿರ್ದೇಶನಾಲಯಕ್ಕೆ ಬದಲಾಗುತ್ತೆ.

RDCಯಲ್ಲಿ ಮುಖ್ಯವಾಗಿ ಬರುವ ಇರುವ ಅಂಶವೇ ಡ್ರಿಲ್. ಇದರ ಜೊತೆಗೆ ಸಾಂಸ್ಕೃತಿಕ, ರಾಷ್ಟ್ರೀಯ ಏಕೀಕರಣ ಜಾಗೃತಿ ಕಾರ್ಯಕ್ರಮಗಳನ್ನೂ ಮಾಡಲಾಗುತ್ತೆ. ಇದು ಸಾಮಾನ್ಯವಾಗಿ ಸೆಪ್ಟೆಂಬರ್ ಮಧ್ಯದಲ್ಲಿ ಅಥವಾ ಅಕ್ಟೋಬರ್ ಆರಂಭದಲ್ಲಿ ಪ್ರಾರಂಭವಾಗುತ್ತದೆ.

ಆರ್​ಡಿ ಪರೇಡ್​ ಸಾಧಕರಿಗೆ ರೈಫಲ್ ಡ್ರಿಲ್​ ಅತಿಮುಖ್ಯ. ಡ್ರಿಲ್ ನಡುವಿನ ವಿರಾಮ ಅಪರೂಪ

RDC ಸೆಲೆಕ್ಸನ್ ಮೊದಲಿಗೆ,. RDC ಕ್ಯಾಂಪ್ ಆಯೋಜನೆ ಮಾಡುವ ಮಾಹಿತಿಯನ್ನು ಎಲ್ಲಾ ಬೆಟಾಲಿಯನ್​ಗಳಿಗೆ ರವಾನಿಸಲಾಗುತ್ತದೆ. ಬಳಿಕ ಅಲ್ಲಿಂದ ಇದರ ಒಳಗೆ ಬರುವ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಿಗೆ ರವಾನಿಸಲಾಗುತ್ತೆ.

ಆಸಕ್ತಿಯುಳ್ಳ ಕೆಡೆಟ್​ಗಳು ಹಾಗೂ ಈ ಮೊದಲೇ ಈ ಕ್ಯಾಂಪ್​ ಮಾಡಬೇಕು ಅಂದುಕೊಂಡವರು ತಮ್ಮ ಹೆಸರನ್ನು ನೊಂದಾಯಿಸುತ್ತಾರೆ. ಬೆಟಾಲಿಯನ್ ಅಧಿಕಾರಿ ಕ್ಯಾಂಪ್​ನಲ್ಲಿ ಪಾಲ್ಗೊಳ್ಳಲು ಸಮರ್ಥರಿರುವವರನ್ನು ಗುರುತಿಸಿ, ಆಯ್ಕೆ ಮಾಡುತ್ತಾರೆ. ಈ ಆಯ್ಕೆ ಪ್ರಕ್ರಿಯೆಯಲ್ಲಿಯೂ ಡ್ರಿಲ್ ಮತ್ತು ರೈಫಲ್ ಡ್ರಿಲ್ ಅತಿ ಮುಖ್ಯ.

RDCಯಲ್ಲಿ ಒಟ್ಟು 7+1 ಕ್ಯಾಂಪ್ ಇರುತ್ತೆ. ಅದರಲ್ಲಿ ಮೊದಲ ಮೂರು ಕ್ಯಾಂಪ್​ಗಳನ್ನು CATC (Combined Annual Training Camp) ಎನ್ನಲಾಗುತ್ತೆ. ಇದಾದ ಬಳಿಕ IGC (Inter-Group Competition), Pre-RDC-1, pre-RDC-2, Pre-RDC-3 (Kitting Camp), ಹಾಗೂ ಫೈನಲ್ RDC ಕ್ಯಾಂಪ್ ಇರುತ್ತೆ. ದೇಶದ ವಿವಿಧೆಡೆ ಇರುವ 17 ಎನ್​ಸಿಸಿ ನಿರ್ದೇಶನಾಲಯಗಳ (ಡೈರೆಕ್ಟರೇಟ್) ಮೂಲಕ ಒಟ್ಟು 250 ಕೆಡೆಟ್​ಗಳನ್ನು ಮೊದಲೇ ಕ್ಯಾಂಪ್​ಗೆ ಆಯ್ಕೆ ಮಾಡಲಾಗುತ್ತದೆ. ಪ್ರತಿ ಕ್ಯಾಂಪ್​ಗಳ ಅವಧಿ ತಲಾ ದಿನಗಳು. ಕೊನೆಯ ಕ್ಯಾಂಪ್ ಮಾತ್ರ 30 ದಿನದ್ದು. ದೆಹಲಿಯಲ್ಲಿ ಸಂಪೂರ್ಣ ತರಬೇತಿ ನೀಡಿ, ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತೆ.

ಸೇನಾ ಮುಖ್ಯಸ್ಥರೊಂದಿಗೆ ಗ್ರೂಪ್​ ಫೋಟೊ. ಎನ್​ಸಿಸಿ ಕೆಡೆಡ್ ಜೀವನದಲ್ಲಿ ಧನ್ಯ ಕ್ಷಣ. (ಸಂಗ್ರಹ ಚಿತ್ರ)

RDCಗೆ ಕೆಡೆಟ್​ಗಳನ್ನು ಆಯ್ಕೆ ಮಾಡುವವರು ಕಂಟಿಂಜೆಂಟ್ ಕಮಾಂಡರ್. ಇವರಿಗೆ ಐಎಂಎ (IMA – Indian Military Academy) ಅಥವಾ ಒಟಿಎ (OTA – Officers Training Academy) ತರಬೇತುದಾರರು ಸಹಾಯ ಮಾಡುತ್ತಾರೆ. ಅಂದ್ರೆ ಭಾರತೀಯ ಸೇನೆಯ ಅಧಿಕಾರಿಗಳಿಗೆ ತರಬೇತಿ ನೀಡುವವರು ನಮಗೂ ತರಬೇತಿ ನೀಡುತ್ತಾರೆ. ನಮ್ಮ ಕಾರ್ಯಕ್ಷಮತೆ, ಕಲಿಕೆ ತೃಪ್ತಿಕರ ಎನಿಸಿದರೆ ನಮ್ಮನ್ನು ಪರೇಡ್​ಗೆ ಆಯ್ಕೆ ಮಾಡುತ್ತಾರೆ.

ಮೊದಲನೇ ಕ್ಯಾಂಪ್​ನಲ್ಲಿ ಕೆಡೆಟ್​ಗಳಿಗೆ flag area (ಧ್ವಜದ ಚೌಕದಲ್ಲಿ ಚಿತ್ರಕಲೆ), ಸಂಸ್ಕೃತಿ (ನೃತ್ಯ, ಹಾಡುಗಾರಿಕೆ ಇತ್ಯಾದಿ) ವಿಭಾಗಗಳಲ್ಲೂ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶ ನೀಡಲಾಗುತ್ತದೆ.

Pre-RDC-1 ಕ್ಯಾಂಪ್​ ಮುಕ್ತಾಯಗೊಂಡ ನಂತರ ಕೆಡೆಟ್​ಗಳನ್ನು ಎ, ಬಿ, ಸಿ ಸ್ಕ್ವಾಡ್​ಗಳಾಗಿ ವಿಂಗಡಿಸಲಾಗುತ್ತದೆ. ಈ ವಿಂಗಡನೆಯ ಅರ್ಥ; ಎ ಗುಂಪಿನಲ್ಲಿರುವವರು Pre-RDC-2 ಕ್ಯಾಂಪ್​ಗೆ ಸಿದ್ಧರಾಗಿದ್ದಾರೆ. ಬಿ ಸ್ಕ್ವಾಡ್​ನಲ್ಲಿರುವವರು ಸಾಧಾರಣ ಕಾರ್ಯಕ್ಷಮತೆ ಹೊಂದಿದ್ದಾರೆ. ಸಿ ಸ್ಕ್ವಾಡ್ ಎಂದರೆ ಇಂಥವರು ಬಹುತೇಕ ಆರ್​ಡಿಸಿಯಿಂದ ಹೊರಗಿದ್ದಂತೆ.

ಆರ್​ಡಿ ಪರೇಡ್​ನಿಂದ ಬಂದವರಿಗೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ. ರಾಜ್ಯಪಾಲರು, ಸೇನಾಧಿಕಾರಿಗಳೊಂದಿಗೆ ಗ್ರೂಪ್​ಫೋಟೊ (ಸಂಗ್ರಹ ಚಿತ್ರ)

ಪ್ರತಿ Pre-RDC ಕ್ಯಾಂಪ್​ಗಳ ನಂತರ ಕೆಡೆಟ್​ಗಳ ಸಂಖ್ಯೆ ಕ್ಷೀಣಿಸುತ್ತಲೇ ಇರುತ್ತದೆ. ಕೊನೆಯ ಹಂತದಲ್ಲಿ 105ರಿಂದ 110 ಕೆಡೆಟ್​ಗಳು ಇರುತ್ತಾರೆ. ಈ ಹಂತ ತಲುಪಿದವರಿಗೆ  ತಗುಪಿದವರಿಗೆ ಗೋಲ್ಡ್ ರ‍್ಯಾಂಕ್ ಸಿಗುತ್ತೆ. ಇದರಲ್ಲಿ SW (Senior Wing) ಹುಡುಗರು ಮತ್ತು ಹುಡುಗಿಯರು, JW (Junior Wing) ಹುಡುಗರು ಮತ್ತು ಹುಡುಗಿಯರು ಇರುತ್ತಾರೆ.

7 ಕ್ಯಾಂಪ್​ಗಳ ತರಬೇತಿ ರೂಢಿಸಿಕೊಂಡು, ಡ್ರಿಲ್​ನಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿ ದೆಹಲಿಗೆ ಬಂದ ಕೆಡೆಟ್​ಗಳನ್ನು ಮೂರು ತಂಡಗಳಾಗಿ ವಿಂಗಡಿಸಲಾಗುತ್ತದೆ. ಅವೆಂದರೆ ರಜಪೂತ್ ಕಂಟಿಜೆಂಟ್ ( Rajpath contingent), ಪಿಎಂ ರ‍್ಯಾಲಿ (Annual Prime minister’s NCC Rally) ಮತ್ತು ಗಾರ್ಡ್ ಆಫ್ ಹಾನರ್ (guard of honour).

ಇದರಲ್ಲಿ ರಜ್​ಪೂತ್ ಕಂಟಿಜೆಂಟ್ ಕೆಡೆಟ್​ಗಳು ಜನವರಿ 26ರ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್​ವರೆಗೆ ಪರೇಡ್ ನಡೆಸುತ್ತಾರೆ. ಉಳಿದ ಎರಡು ತಂಡಗಳು ಜನವರಿ 28ರಂದು ಪರೇಡ್ ನಡೆಸುತ್ತವೆ. ಇದಾದ ನಂತರ RDC ಕ್ಯಾಂಪ್ ಮುಕ್ತಾಯವಾದಂತೆ.

ದೆಹಲಿಯಲ್ಲಿ ನಡೆಯುವ 30 ದಿನಗಳ DGNCC ಕ್ಯಾಂಪ್ ಕೆಡೆಟ್​ಗಳ ಪಾಲಿಗೆ ಜೀವಮಾನದ ನೆನಪಾಗಿ, ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಅತ್ಯುತ್ತಮ ನೆನಪಾಗಿ ಉಳಿಯುತ್ತದೆ.

ಆರ್​ಡಿ ಪರೇಡ್ ತಾಲೀಮು

ಟೀ ಪಾರ್ಟಿ ಸತತ ಐದಾರು ತಿಂಗಳು ಬೆವರು ಸುರಿಸಿ, ನಿದ್ದೆಯನ್ನು ತ್ಯಾಗ ಮಾಡಿ, ರೈಫಲ್​ ಅನ್ನೇ ಜೀವದ ಗೆಳೆಯ/ಗೆಳತಿ ಎಂದು ಭಾವಿಸಿ ಡ್ರಿಲ್ ಮಾಡಿ ಮೈ ಕೈ ನೋವು ಮಾಡಿಕೊಂಡು, PI (Permanent Instructional) ಸ್ಟಾಫ್​ಗಳಿಂದ ‘ರಗಡಾ’ ಅನುಭವಿಸಿದ ಕೆಡೆಟ್​ಗಳಿಗೆ ಚಿಕ್ಕದೊಂದು ಔತಣಕೂಟ ಏರ್ಪಡಿಸಲಾಗುತ್ತೆ. ಇದರಲ್ಲಿ ಪ್ರಧಾನಿ, ರಾಷ್ಟ್ರಪತಿ, ಸೇನಾ ಮುಖ್ಯಸ್ಥರು ಪಾಲ್ಗೊಳ್ಳುತ್ತಾರೆ. ಗಣ್ಯರೊಂದಿಗೆ ಫೋಟೋ ಶೋಟ್ ಮಾಡಿಸಿ, ಬಹುಮಾನಗಳನ್ನು ನೀಡಲಾಗುತ್ತೆ.

ಕೊನೆಗೆ ತಮ್ಮ ತಮ್ಮ ರಾಜ್ಯಗಳಗೆ ಹಿಂತಿರುಗಿದ ಬಳಿಕ ದೆಹಲಿಯಿಂದ ಮರಳಿದ ಕೆಡೆಟ್​ಗಳನ್ನು ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಗುತ್ತೆ. ತಮಟೆ ಸದ್ದು, ಹೂವಿನ ಹಾರಗಳನ್ನು ಹಾಕಿ. ಸಿಹಿ ತಿನ್ನಿಸಿ.. ಕ್ರಿಕೆಟ್ ಟೀಂ ವಿಜಯದ ಬಳಿಕ ಸ್ವಾಗತಿಸುವ ಮಾದರಿ ಸ್ವಾಗತ ಈ NCC ಕೆಡೆಟ್​ಗಳಿಗೂ ನೀಡಲಾಗುತ್ತೆ.

ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಟೀ ಪಾರ್ಟಿ ಆಯೋಜಿಸಲಾಗುತ್ತೆ. ಇಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು ಮುಖ್ಯ ಅತಿಥಿಗಳಾಗಿರುತ್ತಾರೆ.

ಆರ್​ಡಿಸಿ ಪರೇಡ್​ನಲ್ಲಿ ಪಾಲ್ಗೊಂಡವರಿಗೆ ಅವರ ಮುಂದಿನ ಬದುಕಿನ ಇಡೀ ಆಯಸ್ಸಿಗೆ ಅದೊಂದು ಮಧುರ ನೆನಪಾಗಿ ಉಳಿದುಕೊಳ್ಳುತ್ತೆ. ಇಂಥವರು ಹಂಚಿಕೊಳ್ಳುವ ಅನುಭವಗಳು ಹೊಸ ತಲೆಮಾರಿನ ಹುಡುಗ-ಹುಡುಗಿಯರಿಗೆ ಎನ್​ಸಿಸಿ ಸೇರಲು, ಹೆಚ್ಚು ಪರಿಶ್ರಮಪಡಲು, ಉತ್ಸಾಹದಿಂದ ಡ್ರಿಲ್ ಕಲಿಯಲು ಸ್ಫೂರ್ತಿ ನೀಡುತ್ತೆ.

ಗಣರಾಜ್ಯೋತ್ಸವ ವಿಶೇಷ | ವಿಜಯ್ ಚೌಕ್​ನಲ್ಲಿ ನಡೆಯುವ ಬೀಟಿಂಗ್ ರಿಟ್ರೀಟ್​ಗೆ ಇದೆ ಶತಮಾನಗಳ ಇತಿಹಾಸ

ಗಣರಾಜ್ಯೋತ್ಸವ ವಿಶೇಷ | ಸಂವಿಧಾನ ಪ್ರತಿಯ ಮೆರುಗು ಹೆಚ್ಚಿಸಿದ ಶಾಂತಿನಿಕೇತನ ಕಲಾವಿದರ ಚಿತ್ರಕಲೆ

ಗಣರಾಜ್ಯೋತ್ಸವ ವಿಶೇಷ | ಸಂವಿಧಾನದ ಮೊದಲ ಪ್ರತಿ ಮುದ್ರಿಸಿದ್ದ ಮೆಷಿನ್​ಗಳು ಗುಜರಿ ಪಾಲು

Published On - 9:56 am, Tue, 26 January 21

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ