ಯುವತಿಯ ಕೊಲೆ ಮಾಡಿ ಮತ್ತೆ ವಾಪಾಸ್ ಬಂದು ಹೆಣದ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದ ಸೀರಿಯಲ್ ಕಿಲ್ಲರ್!

ಗುಜರಾತ್​ನಲ್ಲಿ ಸೆರೆ ಸಿಕ್ಕಿರುವ ಸೀರಿಯಲ್ ಕಿಲ್ಲರ್ ರಾಹುಲ್ ಕರಂವೀರ್ ಜಾಟ್ ಕುರಿತು ಸಾಕಷ್ಟು ಆಘಾತಕಾರಿ ಘಟನೆಗಳು ನಡೆಯುತ್ತಿವೆ. ಈತನ ವಿರುದ್ಧ 6 ರಾಜ್ಯಗಳಲ್ಲಿ ಕೇಸ್ ದಾಖಲಾಗಿದೆ. 2000 ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಯುವತಿಯ ಕೊಲೆ ಆರೋಪದಡಿ ರಾಹುಲ್​ನನ್ನು ಬಂಧಿಸಲಾಗಿದೆ. ಒಂದು ತಿಂಗಳಲ್ಲಿ 5 ಜನರನ್ನು ಕೊಂದ ಈ ಅತ್ಯಾಚಾರ ಆರೋಪಿ ರಾಹುಲ್ ಗುಜರಾತ್‌ನಲ್ಲಿ ಹೇಗೆ ಸಿಕ್ಕಿಬಿದ್ದ? ಎಂಬ ಕುರಿತು ಕುತೂಹಲಕಾರಿ ಘಟನೆ ಇಲ್ಲಿದೆ.

ಯುವತಿಯ ಕೊಲೆ ಮಾಡಿ ಮತ್ತೆ ವಾಪಾಸ್ ಬಂದು ಹೆಣದ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದ ಸೀರಿಯಲ್ ಕಿಲ್ಲರ್!
ರಾಹುಲ್
Follow us
ಸುಷ್ಮಾ ಚಕ್ರೆ
|

Updated on: Nov 29, 2024 | 3:26 PM

ಅಹಮದಾಬಾದ್: ಗುಜರಾತ್‌ನಲ್ಲಿ 19 ವರ್ಷದ ಯುವತಿಯ ಅತ್ಯಾಚಾರ ಮತ್ತು ಹತ್ಯೆಯ ಆರೋಪ ಹೊತ್ತಿರುವ ರಾಹುಲ್ ಕರಮ್‌ವೀರ್ ಜಾಟ್‌ ಕುರಿತು ಆಘಾತಕಾರಿ ಘಟನೆಗಳು ಬೆಳಕಿಗೆ ಬರುತ್ತಿವೆ. ಗುಜರಾತ್ ಪೊಲೀಸ್ ಅಧಿಕಾರಿಗಳು ರಾಹುಲ್ ಜಾಟ್ 5 ಕೊಲೆಗಳನ್ನು ಮಾಡಿ, ಇನ್ನೂ ಇತರ ಅಪರಾಧಗಳೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಹೇಳಿದ್ದಾರೆ. ಮುಖ್ಯವಾಗಿ ಈ ಅಪರಾಧಗಳು ಕೇವಲ 1 ತಿಂಗಳೊಳಗೆ ಅನೇಕ ರಾಜ್ಯಗಳ ರೈಲುಗಳಲ್ಲಿ ಸಂಭವಿಸಿದೆ ಎಂಬುದು ಆಘಾತಕಾರಿ ಸಂಗತಿ. ಈತ ಕೊನೆಯದಾಗಿ ಗುಜರಾತ್​ನಲ್ಲಿ ಮಾಡಿದ ಯುವತಿಯ ಕೊಲೆಯ ವೇಳೆ ಆಕೆಯ ಮೃತದೇಹದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ ಎಂಬ ಶಾಕಿಂಗ್ ವಿಷಯ ಬೆಳಕಿಗೆ ಬಂದಿದೆ.

6 ರಾಜ್ಯಗಳ ಅಧಿಕಾರಿಗಳನ್ನು ಒಳಗೊಂಡ ಜಂಟಿ ಪೊಲೀಸ್ ತನಿಖೆ ಮತ್ತು ಗುಜರಾತ್‌ನ ಹಲವು ಜಿಲ್ಲೆಗಳಲ್ಲಿ ಸುಮಾರು 2,000 ಸಿಸಿಟಿವಿ ಕ್ಯಾಮೆರಾಗಳ ವಿಶ್ಲೇಷಣೆಯ ನಂತರ ನವೆಂಬರ್ 24ರಂದು ಗುಜರಾತ್‌ನ ವಲ್ಸಾದ್‌ನ ವಾಪಿ ರೈಲು ನಿಲ್ದಾಣದಲ್ಲಿ ರಾಹುಲ್ ಕರಮ್‌ವೀರ್ ಜಾಟ್​ನನ್ನು ಬಂಧಿಸಲಾಯಿತು.

ಗುಜರಾತ್​ನಲ್ಲಿ ಸರಣಿ ಹಂತಕ ಸಿಕ್ಕಿಬಿದ್ದಿದ್ದು ಹೇಗೆ?:

ಹರಿಯಾಣದ ನಿವಾಸಿ 30 ವರ್ಷದ ರಾಹುಲ್​ನನ್ನು ನವೆಂಬರ್ 24ರಂದು ಬೃಹತ್ ಬಹುರಾಜ್ಯ ಕಾರ್ಯಾಚರಣೆಯ ನಂತರ ಬಂಧಿಸಲಾಯಿತು. ಸರಣಿ ಹಂತಕ ಬಾಂದ್ರಾ-ಭುಜ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ನವೆಂಬರ್ 14ರಂದು ವಲ್ಸಾದ್ ಜಿಲ್ಲೆಯ ಉದ್ವಾಡ ರೈಲು ನಿಲ್ದಾಣದ ಬಳಿ 19 ವರ್ಷದ ಕಾಲೇಜು ವಿದ್ಯಾರ್ಥಿನಿಯ ಕೊಲೆ ಮತ್ತು ಅತ್ಯಾಚಾರ ನಡೆಸಲಾಗಿತ್ತು.

ಇದನ್ನೂ ಓದಿ: ಮಧ್ಯಪ್ರದೇಶ: ಚಲಿಸುತ್ತಿದ್ದ ಆಂಬ್ಯುಲೆನ್ಸ್​ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

2000 ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗಿತ್ತು. ಅತ್ಯಾಚಾರವನ್ನು ದೃಢಪಡಿಸಿದ ಮೃತ ಮಹಿಳೆಯ ವಿಧಿವಿಜ್ಞಾನ ಪರೀಕ್ಷೆಯ ನಂತರ, ಪೊಲೀಸರು ಹಲವಾರು ತನಿಖಾ ತಂಡಗಳನ್ನು ರಚಿಸಿದರು. 2,000ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದರು. ಯುವತಿಯ ಶವ ಪತ್ತೆಯಾದ ಜಾಗದಿಂದ ಸಿಕ್ಕಿದ ಬಟ್ಟೆಯನ್ನೇ ಆರೋಪಿ ಧರಿಸಿರುವುದು ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿತ್ತು. ತನಿಖಾಧಿಕಾರಿಗಳು ವಾಪಿ ರೈಲ್ವೆ ನಿಲ್ದಾಣದಲ್ಲಿ ಆತನ ಕುಂಟುವ ನಡಿಗೆ ಶೈಲಿಯಿಂದ ಆತನನ್ನು ಗುರುತಿಸಿದ್ದರು.

ಸರಣಿ ಹಂತಕ ರಾಹುಲ್ ಕರಂವೀರ್ ಜಾಟ್ 5ನೇ ತರಗತಿ ಡ್ರಾಪ್ಔಟ್ ಎಂದು ಮಾಧ್ಯಮ ವರದಿಗಳು ಸೂಚಿಸಿವೆ. ಆತ ಸರಣಿ ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಕರ್ನಾಟಕದಲ್ಲೂ ಕೊಲೆ:

ಅಕ್ಟೋಬರ್ 25 ರಂದು ಬೆಂಗಳೂರು-ಮುರ್ಡೇಶ್ವರ ರೈಲಿನಲ್ಲಿ ಕರ್ನಾಟಕದಲ್ಲಿ ಆರೋಪಿ ರಾಹುಲ್ ಸಿಗರೇಟ್ ವಿಷಯಕ್ಕೆ ಜಗಳವಾಡಿದ ನಂತರ ಕರ್ನಾಟಕದ ರೈಲಿನಲ್ಲಿ ಸಹ ಪ್ರಯಾಣಿಕರನ್ನು ಕೊಲೆ ಮಾಡಿದ್ದರು. ಪಶ್ಚಿಮ ಬಂಗಾಳದಲ್ಲಿ ಆತ ನವೆಂಬರ್​ನಲ್ಲಿ ಕತಿಹಾರ್ ಎಕ್ಸ್‌ಪ್ರೆಸ್‌ನಲ್ಲಿ 63 ವರ್ಷದ ವ್ಯಕ್ತಿಯನ್ನು ಕೊಂದು ದರೋಡೆ ಮಾಡಿದ್ದ.

ಇದನ್ನೂ ಓದಿ: ಇನ್ನೊಬ್ಬ ಮಹಿಳೆ ಜೊತೆ ಪ್ಲಾನ್ ಮಾಡಿ ಕೊಲೆ; ಏರ್ ಇಂಡಿಯಾ ಪೈಲಟ್ ಸಾವಿನ ಬಗ್ಗೆ ಕುಟುಂಬಸ್ಥರ ಆರೋಪ

ಆತನ ಬಂಧನಕ್ಕೆ ಕೆಲವು ದಿನಗಳ ಮೊದಲು ನವೆಂಬರ್ 24ರಂದು ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಮಂಗಳೂರು ವಿಶೇಷ ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಯನ್ನು ಕೊಲೆ ಮಾಡಿದ್ದ. ರೈಲಿನಲ್ಲಿಯೇ ಕೊಲೆ ಮಾಡುತ್ತಿದ್ದ ಆತನ ಕೃತ್ಯ ಎಂಥವರನ್ನೂ ಆಘಾತಗೊಳಿಸುವಂತಿದೆ.

ಹರಿಯಾಣ ಮೂಲದ ರಾಹುಲ್ ಜಾಟ್ ಎಂಬಾತನನ್ನು ಗುಜರಾತ್‌ನ ವಾಪಿಯಲ್ಲಿ 19 ವರ್ಷದ ಯುವತಿ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಒಂದು ತಿಂಗಳ ಅವಧಿಯಲ್ಲಿ ಐದು ರಾಜ್ಯಗಳಲ್ಲಿ ರೈಲಿನಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ನಾಲ್ವರನ್ನು ಕೊಂದಿರುವುದಾಗಿಯೂ ಆತ ತಪ್ಪೊಪ್ಪಿಕೊಂಡಿದ್ದಾನೆ.

ಕೊನೆಯ ಕೊಲೆಯ ಬರ್ಬರತೆ:

ನವೆಂಬರ್ 14ರಂದು ಉದ್ವಾಡ ರೈಲು ನಿಲ್ದಾಣದ ಸಮೀಪ ಹಳಿಗಳ ಬಳಿ 19 ವರ್ಷದ ಯುವತಿಯ ಶವ ಪತ್ತೆಯಾದ ನಂತರ ತನಿಖೆಯ ಭಾಗವಾಗಿ ಗುಜರಾತ್‌ನ ವಾಪಿ ರೈಲು ನಿಲ್ದಾಣದಲ್ಲಿ ರಾಹುಲ್ ಜಾಟ್‌ನನ್ನು ಬಂಧಿಸಲಾಗಿತ್ತು. ಆಕೆ ಟ್ಯೂಷನ್‌ನಿಂದ ಮನೆಗೆ ಮರಳುತ್ತಿದ್ದಾಗ ಆಕೆಯನ್ನು ಎಳೆದುಕೊಂಡು ಬಂದು ಅತ್ಯಾಚಾರ ನಡೆಸಿದ್ದ. ಬಳಿಕ ಆಕೆಯನ್ನು ಕೊಲೆ ಮಾಡಿದ್ದ. ನಂತರ ಆಕೆ ಸಾವನ್ನಪ್ಪಿದ ನಂತರ ಶವವನ್ನು ಅಲ್ಲೇ ಬಿಟ್ಟು ಸ್ವಲ್ಪ ದೂರ ಹೋದವನು ಮತ್ತೆ ವಾಪಾಸ್ ಬಂದು ಆಕೆಯ ಶವದ ಮೇಲೂ ಅತ್ಯಾಚಾರ ಮಾಡಿದ್ದ. ಆಕೆ ಸತ್ತ ನಂತರವೂ ಸುಮಾರು ಎರಡು ಗಂಟೆಗಳ ಕಾಲ ಹಲವಾರು ಬಾರಿ ಅತ್ಯಾಚಾರ ಎಸಗಿದ್ದ ಎಂಬುದು ಮರಣೋತ್ತರ ಪರೀಕ್ಷೆ ವೇಳೆ ಪತ್ತೆಯಾಗಿತ್ತು.

ಅಷ್ಟರ ವೇಳೆಗೆ ಆತನಿಗೆ ಹಸಿವಾಗಿತ್ತು. ಹತ್ತಿರದ ಅಂಗಡಿಗೆ ಹೋಗಿ ತಿಂಡಿ ತಿಂದು, ನೀರಿನ ಬಾಟಲಿ ಮತ್ತು ಜ್ಯೂಸ್ ಖರೀದಿಸಿ ಆ ಶವವಿದ್ದ ಜಾಗಕ್ಕೆ ಮತ್ತೆ ಬಂದು ಅತ್ಯಾಚಾರ ನಡೆಸಲು ಪ್ಲಾನ್ ಮಾಡಿದ್ದ. ಆದರೆ, ಅಷ್ಟರಲ್ಲಾಗಲೇ ಆ ಶವದ ಸುತ್ತ ಜನ ಸೇರಿದ್ದರು. ಆ ಶವದ ಪಕ್ಕದಲ್ಲೇ ಆತ ತನ್ನ ಬ್ಯಾಗ್ ಬಿಟ್ಟು ಹೋಗಿದ್ದ. ಆ ಬ್ಯಾಗ್ ತೆಗೆದುಕೊಳ್ಳಲು ಕೂಡ ಸಾಧ್ಯವಾಗದೆ ಅವನು ಓಡಿಹೋಗಿದ್ದ.

ಆ ಜಾಗದಲ್ಲಿ ರಾಹುಲ್ ಬಿಟ್ಟು ಹೋಗಿದ್ದ ಟಿ-ಶರ್ಟ್ ಮತ್ತು ಬ್ಯಾಗ್ ಪೊಲೀಸರಿಗೆ ಪ್ರಮುಖ ಸುಳಿವುಗಳನ್ನು ನೀಡಿತ್ತು. ಆದರೆ, ಆತ ಪದೇಪದೆ ಸ್ಥಳಗಳನ್ನು ಬದಲಾಯಿಸುವುದರಿಂದ ಆತನನ್ನು ಹಿಡಿಯುವುದು ಪೊಲೀಸರಿಗೆ ಕಷ್ಟಕರವಾಗಿತ್ತು. ಬಳಿಕ ಭಾನುವಾರ ರಾತ್ರಿ ಸ್ಥಳೀಯ ಮತ್ತು ರೈಲ್ವೆ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ವಲ್ಸಾದ್‌ನ ವಾಪಿ ರೈಲು ನಿಲ್ದಾಣದ ಪಾರ್ಕಿಂಗ್ ಸ್ಥಳದಿಂದ ರಾಹುಲ್ ಜಾಟ್‌ನನ್ನು ಬಂಧಿಸಲಾಗಿತ್ತು.

ಹರಿಯಾಣ, ರಾಜಸ್ಥಾನ ಮತ್ತು ಕರ್ನಾಟಕದ ಪೊಲೀಸ್ ಘಟಕಗಳನ್ನು ಒಳಗೊಂಡ ಬೃಹತ್ ಶೋಧ ಕಾರ್ಯಾಚರಣೆಯ ನಂತರ ಮತ್ತು ವಾಪಿ, ವಲ್ಸಾದ್, ಸೂರತ್ ಮತ್ತು ಉದ್ವಾಡದಲ್ಲಿ 2000 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಅವರನ್ನು ಬಂಧಿಸಲಾಯಿತು. ರಾಹುಲ್ ಯಾರಾದರೂ ಒಂಟಿಯಾಗಿ ಕಂಡುಬಂದಾಗಲೆಲ್ಲಾ ಜನರನ್ನು ಲೂಟಿ ಮಾಡುತ್ತಿದ್ದ, ಮಹಿಳೆಯರ ಮೇಲೆ ಅತ್ಯಾಚಾರವೆಸಗುತ್ತಿದ್ದ. ವಿಶೇಷವಾಗಿ ವಿಕಲಚೇತನ ಪ್ರಯಾಣಿಕರಿಗಾಗಿ ಇದ್ದ ಬೋಗಿಗಳಲ್ಲಿ ಅತ್ಯಾಚಾರವೆಸಗುತ್ತಿದ್ದ. ಅವನು ಚಲಿಸುತ್ತಲೇ ಇದ್ದುದರಿಂದ ಮತ್ತು ಹೆಚ್ಚಾಗಿ ರೈಲು ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಮಲಗುತ್ತಿರುತ್ತಿದ್ದುದರಿಂದ ಅವನನ್ನು ಹಿಡಿಯುವುದು ಕಷ್ಟಕರವಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ