ಕೊವಿಶೀಲ್ಡ್ ಕೊವಿಡ್ ಲಸಿಕೆಯ ಸಂಪೂರ್ಣ ಅನುಮೋದನೆಗಾಗಿ  ಅರ್ಜಿ ಸಲ್ಲಿಸಿದ ಸೆರಮ್ ಇನ್‌ಸ್ಟಿಟ್ಯೂಟ್ 

ಸೆರಮ್ ಇನ್‌ಸ್ಟಿಟ್ಯೂಟ್ ತನ್ನ ಮಾಸಿಕ ಸಾಮರ್ಥ್ಯವನ್ನು 240 ಮಿಲಿಯನ್ ಡೋಸ್‌ಗಳಿಗೆ ನಾಲ್ಕು ಪಟ್ಟು ಹೆಚ್ಚಿಸಿದೆ ಮತ್ತು ಜನವರಿಯಿಂದ "ದೊಡ್ಡ ಪ್ರಮಾಣದಲ್ಲಿ" ರಫ್ತು ಮಾಡಲು ಸಿದ್ಧವಾಗಿದೆ ಎಂದು ಪೂನಾವಾಲಾ ಅಕ್ಟೋಬರ್‌ನಲ್ಲಿ ಹೇಳಿದ್ದರು

ಕೊವಿಶೀಲ್ಡ್ ಕೊವಿಡ್ ಲಸಿಕೆಯ ಸಂಪೂರ್ಣ ಅನುಮೋದನೆಗಾಗಿ  ಅರ್ಜಿ ಸಲ್ಲಿಸಿದ ಸೆರಮ್ ಇನ್‌ಸ್ಟಿಟ್ಯೂಟ್ 
ಕೊವಿಶೀಲ್ಡ್​ ಲಸಿಕೆ (ಸಾಂಕೇತಿಕ ಚಿತ್ರ)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 31, 2021 | 3:41 PM

ದೆಹಲಿ: ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute Of India) ತನ್ನ ಕೊವಿಡ್ -19 ಲಸಿಕೆ(Covid-19 Vaccine) ಕೊವಿಶೀಲ್ಡ್‌ನ (Covishield( ಸಂಪೂರ್ಣ ಅನುಮೋದನೆಗಾಗಿ ದೇಶದ ಔಷಧ ನಿಯಂತ್ರಕ ಮತ್ತು ಆರೋಗ್ಯ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕರು ಶುಕ್ರವಾರ ತಿಳಿಸಿದ್ದಾರೆ. ಕೊವಿಶೀಲ್ಡ್ ಎಂಬ ಬ್ರಾಂಡ್‌ನಡಿಯಲ್ಲಿ ಅಸ್ಟ್ರಾಜೆನೆಕಾದ ಕೊವಿಡ್-19 ಲಸಿಕೆಯನ್ನು ಉತ್ಪಾದಿಸುವ ಸೆರಮ್  ಇನ್‌ಸ್ಟಿಟ್ಯೂಟ್, ಭಾರತದಲ್ಲಿ 1.25 ಬಿಲಿಯನ್ ಡೋಸ್‌ಗಳ ಲಸಿಕೆ ಅನ್ನು ಪೂರೈಸಿದೆ.  ಸಂಪೂರ್ಣ ಮಾರುಕಟ್ಟೆ ಅಧಿಕಾರವನ್ನು ಪರಿಗಣಿಸಲು ಭಾರತ ಸರ್ಕಾರವು ಈಗ ಸಾಕಷ್ಟು ಡೇಟಾವನ್ನು ಹೊಂದಿದೆ ಎಂದು ಸೆರಮ್ ಇನ್‌ಸ್ಟಿಟ್ಯೂಟ್ ಸಿಇಒ ಅದಾರ್ ಪೂನಾವಾಲಾ(Adar Poonawalla) ಟ್ವೀಟ್ ಮಾಡಿದ್ದಾರೆ. ವಿಶ್ವದ ಅತಿದೊಡ್ಡ ಲಸಿಕೆ ತಯಾರಕರೂ ಆಗಿರುವ ಸೀರಮ್ ಇನ್‌ಸ್ಟಿಟ್ಯೂಟ್‌ಗೆ ವರ್ಷದ ಆರಂಭದಲ್ಲಿ ಭಾರತದಲ್ಲಿ ಕೊವಿಶೀಲ್ಡ್‌ನ ತುರ್ತು ಬಳಕೆಗೆ ಅನುಮೋದನೆ ನೀಡಲಾಯಿತು.  ದೇಶದ ಲಸಿಕೆ ಅಭಿಯಾನದಲ್ಲಿ ಇದುವರೆಗೆ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವಾಕ್ಸಿನ್‌ನಿಂದ ಪ್ರಾಬಲ್ಯ ಸಾಧಿಸಿದೆ.

ಸೆರಮ್ ಇನ್‌ಸ್ಟಿಟ್ಯೂಟ್ ತನ್ನ ಮಾಸಿಕ ಸಾಮರ್ಥ್ಯವನ್ನು 240 ಮಿಲಿಯನ್ ಡೋಸ್‌ಗಳಿಗೆ ನಾಲ್ಕು ಪಟ್ಟು ಹೆಚ್ಚಿಸಿದೆ ಮತ್ತು ಜನವರಿಯಿಂದ “ದೊಡ್ಡ ಪ್ರಮಾಣದಲ್ಲಿ” ರಫ್ತು ಮಾಡಲು ಸಿದ್ಧವಾಗಿದೆ ಎಂದು ಪೂನಾವಾಲಾ ಅಕ್ಟೋಬರ್‌ನಲ್ಲಿ ಹೇಳಿದ್ದರು ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಆದಾಗ್ಯೂ, ಕೇಂದ್ರ ಸರ್ಕಾರದಿಂದ ಕೊವಿಶೀಲ್ಡ್‌ಗೆ ಸಾಕಷ್ಟು ಬೇಡಿಕೆಗಳಿಲ್ಲದ ಕಾರಣ, ಸೆರಮ್ ಇನ್‌ಸ್ಟಿಟ್ಯೂಟ್ ಲಸಿಕೆಗಳ ಮಾಸಿಕ ಉತ್ಪಾದನೆಯನ್ನು ಕನಿಷ್ಠ 50 ಪ್ರತಿಶತದಷ್ಟು ಕಡಿತಗೊಳಿಸಲು ನೋಡುತ್ತಿದೆ ಎಂದು ಪೂನಾವಾಲಾ ಈ ತಿಂಗಳ ಆರಂಭದಲ್ಲಿ ಹೇಳಿದ್ದರು.

“ನಾನು ಊಹಿಸಿರದಂತಹ ಸಂದಿಗ್ಧತೆಯಲ್ಲಿದ್ದೇನೆ. ನಾವು ತಿಂಗಳಿಗೆ 250 ಮಿಲಿಯನ್ ಡೋಸ್‌ಗಳನ್ನು ಉತ್ಪಾದಿಸುತ್ತಿದ್ದೇವೆ ಆದರೆ ಒಳ್ಳೆಯ ಸುದ್ದಿ ಏನೆಂದರೆ ಭಾರತವು ತನ್ನ ಜನಸಂಖ್ಯೆಯ ಹೆಚ್ಚಿನ ಭಾಗವನ್ನು ಆವರಿಸಿದೆ. ನಾವು ಒಂದು ವಾರದಲ್ಲಿ ಆರೋಗ್ಯ ಸಚಿವಾಲಯಕ್ಕೆ ನಮ್ಮ ಎಲ್ಲಾ ಆರ್ಡರ್ ಗಳನ್ನು ಪೂರ್ಣಗೊಳಿಸಿದ್ದೇವೆ. ” ಎಂದು ಸಿಎನ್‌ಬಿಸಿ-ಟಿವಿ 18 ಗೆ ನೀಡಿದ ಸಂದರ್ಶನದಲ್ಲಿ ಪೂನಾವಾಲಾ ಹೇಳಿದರು. ಅವರ ಭವಿಷ್ಯದ ಉತ್ಪಾದನಾ ಕಾರ್ಯತಂತ್ರದ ಕುರಿತು ಮಾತನಾಡಿದ ಅವರು “ಕೈಯಲ್ಲಿ ಬೇರೆ ಯಾವುದೇ ಆರ್ಡರ್‌ಗಳಿಲ್ಲದ ಕಾರಣ ನಾನು ಉತ್ಪಾದನೆಯನ್ನು ಕನಿಷ್ಠ 50 ಪ್ರತಿಶತದಷ್ಟು ಕಡಿಮೆ ಮಾಡಲಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: CM Basavaraj Bommai: ಒಮಿಕ್ರಾನ್​ ಬಗ್ಗೆ ಮಾತನಾಡುವಾಗಲೇ ಕೆಮ್ಮಿದ ಸಿಎಂ ಬೊಮ್ಮಾಯಿ!

ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ