ಇನ್ನು ನಾಲ್ಕೇ ತಿಂಗಳಲ್ಲಿ ಭಾರತಕ್ಕೆ ಬರಲಿದೆ ಕೋವಿಡ್ ಲಸಿಕೆ: ಇದರ ಬೆಲೆ ಎಷ್ಟು?
ನವದೆಹಲಿ: ಆಕ್ಸ್ಫರ್ಡ್ ಯುನಿವರ್ಸಿಟಿ ಅಭಿವೃದ್ಧಿಪಡಿಸುತ್ತಿರುವ ಕೋವಿಡ್-19 ಲಸಿಕೆಯನ್ನು, ಭಾರತೀಯ ಲಸಿಕೆ ತಯಾರಕ ಸೆರಮ್ ಕಂಪನಿ, 500ರಿಂದ 600 ರೂಪಾಯಿಗಳಿಗೆ ಮಾರಾಟ ಮಾಡುವುದಾಗಿ ತಿಳಿಸಿದೆ. ಸರ್ಕಾರಕ್ಕೆ ಅಂದಾಜು 220 ರೂಪಾಯಿಗಳಿಗೆ ಲಸಿಕೆ ಲಭಿಸಲಿದ್ದು ಖಾಸಗಿ ಮಾರುಕಟ್ಟೆಯಲ್ಲಿ ಮೂರುಪಟ್ಟು ಹೆಚ್ಚು ದರಕ್ಕೆ ಲಸಿಕೆ ಸಿಗಲಿದೆ ಎಂದಿದ್ದಾರೆ. ಜನವರಿ ತಿಂಗಳಲ್ಲಿ ಲಸಿಕೆಗೆ ಹಸಿರು ನಿಶಾನೆ.. ಸೆರಮ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದರ್ ಪೂನಾವಾಲ, ಹಿಂದೂಸ್ಥಾನ್ ಟೈಮ್ಸ್ ಲೀಡರ್ಶಿಪ್ ಸಮಿಟ್ನಲ್ಲಿ ಈ ಕುರಿತು ಮಾತನಾಡಿ, ಮುಂದಿನ ತಿಂಗಳ ಒಳಗಾಗಿ ಭಾರತದ ಡ್ರಗ್ ಕಂಟ್ರೋಲರ್ […]
ನವದೆಹಲಿ: ಆಕ್ಸ್ಫರ್ಡ್ ಯುನಿವರ್ಸಿಟಿ ಅಭಿವೃದ್ಧಿಪಡಿಸುತ್ತಿರುವ ಕೋವಿಡ್-19 ಲಸಿಕೆಯನ್ನು, ಭಾರತೀಯ ಲಸಿಕೆ ತಯಾರಕ ಸೆರಮ್ ಕಂಪನಿ, 500ರಿಂದ 600 ರೂಪಾಯಿಗಳಿಗೆ ಮಾರಾಟ ಮಾಡುವುದಾಗಿ ತಿಳಿಸಿದೆ. ಸರ್ಕಾರಕ್ಕೆ ಅಂದಾಜು 220 ರೂಪಾಯಿಗಳಿಗೆ ಲಸಿಕೆ ಲಭಿಸಲಿದ್ದು ಖಾಸಗಿ ಮಾರುಕಟ್ಟೆಯಲ್ಲಿ ಮೂರುಪಟ್ಟು ಹೆಚ್ಚು ದರಕ್ಕೆ ಲಸಿಕೆ ಸಿಗಲಿದೆ ಎಂದಿದ್ದಾರೆ.
ಜನವರಿ ತಿಂಗಳಲ್ಲಿ ಲಸಿಕೆಗೆ ಹಸಿರು ನಿಶಾನೆ.. ಸೆರಮ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದರ್ ಪೂನಾವಾಲ, ಹಿಂದೂಸ್ಥಾನ್ ಟೈಮ್ಸ್ ಲೀಡರ್ಶಿಪ್ ಸಮಿಟ್ನಲ್ಲಿ ಈ ಕುರಿತು ಮಾತನಾಡಿ, ಮುಂದಿನ ತಿಂಗಳ ಒಳಗಾಗಿ ಭಾರತದ ಡ್ರಗ್ ಕಂಟ್ರೋಲರ್ ಜನರಲ್ ವಿ.ಜಿ ಸೊಮಾನಿ ಬಳಿ ಎಮರ್ಜೆನ್ಸಿ ಯೂಸ್ ಆಥರೈಸೇಷನ್ (EUA)ಗಾಗಿ ಮನವಿ ಸಲ್ಲಿಸಲಾಗುವುದು ಎಂದಿದ್ದಾರೆ. ಜನವರಿ ತಿಂಗಳಲ್ಲಿ ಲಸಿಕೆಗೆ ಹಸಿರು ನಿಶಾನೆ ದೊರಕುವ ಆಶಯ ವ್ಯಕ್ತಪಡಿಸಿದ್ದಾರೆ.
ಲಸಿಕೆಯು ಇಂಗ್ಲಂಡ್ನ ಆಸ್ಟ್ರಾಜೆನೆಕಾದಲ್ಲಿ ಪರೀಕ್ಷೆಯ ಹಂತದಲ್ಲಿದ್ದು, ಪರಿಣಾಮದ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ. ಆಸ್ಟ್ರಾ ಜೆನೆಕಾದಿಂದ ಬಂದಿರುವ ಧನಾತ್ಮಕ ಪ್ರತಿಕ್ರಿಯೆಗಳಿಂದಾಗಿ ನಾವು ಈ ತಯಾರಿ ನಡೆಸುತ್ತಿದ್ದೇವೆ. ಈ ತಿಂಗಳ ಅಂತ್ಯಕ್ಕೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಅಂತಿಮ ಫಲಿತಾಂಶ ಬರಲಿದ್ದು, ಅದರಂತೆ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಿದ್ದೇವೆ ಎಂದಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ, ಜನವರಿ-ಫೆಬ್ರವರಿ ವೇಳೆಯಲ್ಲಿ ದುರ್ಬಲ ವರ್ಗದ ನಾಗರಿಕರಿಗೆ ಲಸಿಕೆ ಸಿಗಲಿದ್ದು, ಮಾರ್ಚ್-ಏಪ್ರಿಲ್ ಅವಧಿಯಲ್ಲಿ ಜನಸಾಮಾನ್ಯರಿಗೆ ಲಸಿಕೆ ಲಭಿಸಲಿದೆ. ಸೆರಮ್ ಕಂಪೆನಿಯು 300ರಿಂದ 400 ಮಿಲಿಯನ್ ಶಾಟ್ಗಳಷ್ಟು, 2 ಡೋಸ್ ಲಸಿಕೆಯನ್ನು ಏಪ್ರಿಲ್ ಒಳಗೆ ಸಿದ್ಧಪಡಿಸಲು ತೀರ್ಮಾನಿಸಿದೆ. ಪ್ರಸ್ತುತ 50ರಿಂದ 60 ಮಿಲಿಯನ್ ಡೋಸ್ಗಳಷ್ಟು ವ್ಯಾಕ್ಷಿನ್ ಹೊಂದಿರುವ ಸಂಸ್ಥೆ, ಶೀಘ್ರದಲ್ಲೇ 100 ಮಿಲಿಯನ್ ಡೋಸ್ ತಲುಪುವ ನಿರೀಕ್ಷೆ ಇಟ್ಟುಕೊಂಡಿದೆ.
ಭಾರತದ ಜನರಿಗೆ ಕೋವಿಡ್ ಲಸಿಕೆ ಒದಗಿಸುವುದು ಸೆರಮ್ ಸಂಸ್ಥೆಯ ಮೊದಲ ಆದ್ಯತೆ ಎಂದಿರುವ ಆದರ್ ಪೂನಾವಾಲ, ಸದ್ಯ ಇತರ ದೇಶಗಳೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಂಡಿಲ್ಲ ಎಂದಿದ್ದಾರೆ.