ಗುಜರಾತ್ನಲ್ಲಿ ಉಷ್ಣ ಅಲೆ (Heat Wave) ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿ ಭಾರತೀಯ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ. ದೇಶಾದ್ಯಂತ ಬೇಸಿಗೆ ಶುರುವಾಗಿದೆ. ಅದರಲ್ಲೂ ಗುಜರಾತ್ನಲ್ಲಿ ದಾಖಲೆಯ ತಾಪಮಾನ ಈಗಲೇ ಕಾಣಿಸಿಕೊಂಡಿದೆ. ರಾಜ್ಯದ ಸುಮಾರು 10 ನಗರಗಳಲ್ಲಿ, ಉಷ್ಣತೆ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. 20 ವರ್ಷಗಳಲ್ಲಿ ಇದೇ ಮೊದಲಬಾರಿಗೆ ಅಹ್ಮದಾಬಾದ್ನಲ್ಲಿ, ಮಾರ್ಚ್ 15ರಂದು ಉಷ್ಣತೆ 41.5 ಡಿಗ್ರಿ ಸೆಲ್ಸಿಯಸ್ ದಾಟಿತ್ತು.ಸುರೇಂದ್ರನಗರದಲ್ಲಿ ಗರಿಷ್ಠ 41.7 ಡಿಗ್ರಿ ಸೆಲ್ಸಿಯಸ್ ಆಗಿತ್ತು.
ಉಷ್ಣ ಅಲೆ ಹೆಚ್ಚಳದ ಬಗ್ಗೆ ಎಚ್ಚರಿಕೆ ನೀಡಿದ ಗುಜರಾತ್ ಹವಾಮಾನ ಇಲಾಖೆ ನಿರ್ದೇಶಕಿ ಮನೋರಮಾ ಮೊಹಂತಿ, ಗುಜರಾತ್ನಾದ್ಯಂತ ಇನ್ನು ಕೆಲವು ದಿನಗಳಲ್ಲಿ ಬೇಸಿಗೆಯ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಜನರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಇರಬೇಕು, ತಾಪಮಾನದಿಂದ ಆದಷ್ಟು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ಗುಜರಾತ್ನಲ್ಲಿ ತೀವ್ರ ಉಷ್ಣ ಅಲೆ ಪರಿಸ್ಥಿತಿ ಇನ್ನಷ್ಟು ದಿನಗಳ ಕಾಲ ಇರಲಿದೆ. ಅದರಲ್ಲಿ ಸೌರಾಷ್ಟ್ರ ಮತ್ತು ಕುಚ್ ಪ್ರದೇಶದಲ್ಲಿ ಇನ್ನು 24 ಗಂಟೆಗಳ ಕಾಲ ಇದೇ ಪರಿಸ್ಥಿತಿ ಇರಲಿದ್ದು ಉತ್ತರ ಗುಜರಾತ್ನಲ್ಲಿ ಇನ್ನೆರಡು ದಿನ ಗರಿಷ್ಠ ಉಷ್ಣತೆ ಇರಲಿದೆ. ಅದಾದ ಬಳಿಕ ಉಷ್ಣ ಅಲೆ ಸ್ವಲ್ಪ ದುರ್ಬಲಗೊಂಡರೂ, ತಾಪಮಾನ ಕಡಿಮೆಯಾಗುವುದಿಲ್ಲ ಎಂದು ಮೊಹಂತಿ ಎಚ್ಚರಿಸಿದ್ದಾರೆ.
ಮಾರ್ಚ್ 16ರಂದು ಟ್ವೀಟ್ ಮಾಡಿರುವ ಭಾರತೀಯ ಹವಾಮಾನ ಇಲಾಖೆ, ಇನ್ನೆರಡು ದಿನಗಳ ಕಾಲ ರಾಜಸ್ಥಾನದಲ್ಲಿ ಗಂಭೀರ ಸ್ವರೂಪದ ಉಷ್ಣ ಅಲೆ ಮತ್ತು ಜಮ್ಮು ವಿಭಾಗ, ಹಿಮಾಚಲ ಪ್ರದೇಶ, ಗುಜರಾತ್, ಕೊಂಕಣ, ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ತೆಲಂಗಾಣ ಮತ್ತು ಒಡಿಶಾಗಳಲ್ಲಿ ಸಾಮಾನ್ಯ ಉಷ್ಣ ಅಲೆ ಏಳಲಿದೆ ಎಂದು ಎಚ್ಚರಿಕೆ ನೀಡಿತ್ತು.
Heat Wave to Severe Heat wave conditions over Rajasthan and Heat wave conditions over Jammu Division, Himachal Pradesh, Gujarat State, Konkan, West Madhya Pradesh, Vidarbha, Telangana & Odisha during next 2 days.
— India Meteorological Department (@Indiametdept) March 16, 2022
ಇದನ್ನೂ ಓದಿ: Cyclone Asani: ಮುಂದಿನವಾರ ಅಪ್ಪಳಿಸಲಿದೆ ಅಸನಿ ಚಂಡಮಾರುತ; ಹವಾಮಾನ ಇಲಾಖೆಯಿಂದ ಎಚ್ಚರಿಕೆ