ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದೇವೆ: ಸೋನಿಯಾ ಗಾಂಧಿ ಭೇಟಿ ನಂತರ ಜಿ-23 ನಾಯಕ ಗುಲಾಂ ನಬಿ ಆಜಾದ್ ಪ್ರತಿಕ್ರಿಯೆ
ಸೋನಿಯಾ ಗಾಂಧಿ ಅವರೊಂದಿಗಿನ ಭೇಟಿ ಉತ್ತಮವಾಗಿತ್ತು. ಅವರು ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ. ನಾವು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದೇವೆ ಎಂದು ಭೇಟಿಯ ನಂತರ ಆಜಾದ್ ಹೇಳಿದ್ದಾರೆ.
ದೆಹಲಿ: ಹಿರಿಯ ಕಾಂಗ್ರೆಸ್ (Congress) ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಶುಕ್ರವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರನ್ನು ಭೇಟಿ ಮಾಡಿದರು. ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್, ಉತ್ತರ ಪ್ರದೇಶ, ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲು ಬಗ್ಗೆ ಚರ್ಚಿಸಲು ಬಂಡಾಯ ನಾಯಕರ ಗುಂಪು ಕರೆ ನೀಡುತ್ತಿರುವಾಗ ಗಾಂಧಿ ಮತ್ತು ಜಿ -23 ನಾಯಕರ ನಡುವಿನ ಈ ಸಭೆ ನಡೆದಿದೆ. ಸೋನಿಯಾ ಗಾಂಧಿ ಅವರೊಂದಿಗಿನ ಭೇಟಿ ಉತ್ತಮವಾಗಿತ್ತು. ಅವರು ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ. ನಾವು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದೇವೆ ಎಂದು ಭೇಟಿಯ ನಂತರ ಆಜಾದ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳನ್ನು ಸೋಲಿಸಲು ಒಗ್ಗಟ್ಟಿನಿಂದ ಹೋರಾಡಲು ಚರ್ಚೆ ನಡೆಸಲಾಯಿತು. ಆಜಾದ್ ಜಿ-23 ಗುಂಪಿನ ನಾಯಕರಾಗಿದ್ದಾರೆ. ಈ ಗುಂಪು ಶಶಿ ತರೂರ್, ಕಪಿಲ್ ಸಿಬಲ್, ಭೂಪಿಂದರ್ ಸಿಂಗ್ ಹೂಡಾ, ಆನಂದ್ ಶರ್ಮಾ, ಮನೀಶ್ ತಿವಾರಿ ಮತ್ತು ರಾಜ್ ಬಬ್ಬರ್ ಅವರಂತಹ ಇತರ ಹಿರಿಯ ಸದಸ್ಯರನ್ನು ಸಹ ಒಳಗೊಂಡಿದೆ. ಬುಧವಾರ,ಆಜಾದ್ ಹಲವಾರು ಜಿ -23 ನಾಯಕರಿಗೆ ತಮ್ಮ ನಿವಾಸದಲ್ಲಿ ಆತಿಥ್ಯ ವಹಿಸಿದ್ದರು. ಅದರ ನಂತರ ಭಿನ್ನಮತೀಯ ನಾಯಕರು ಜಂಟಿ ಹೇಳಿಕೆಯನ್ನು ನೀಡಿದರು.
Working Committee was asked for suggestions on the reasons for defeat in 5 states. The discussion was held to fight unitedly in the forthcoming Assembly elections to defeat the opposition parties: Congress leader Ghulam Nabi Azad after meeting party president Sonia Gandhi pic.twitter.com/av6WysOsom
— ANI (@ANI) March 18, 2022
ಐದು ರಾಜ್ಯಗಳಲ್ಲಿನ ಸೋಲಿಗೆ ಕಾರಣಗಳ ಬಗ್ಗೆ ಸಲಹೆಗಳನ್ನು ಕಾರ್ಯಕಾರಿ ಸಮಿತಿ ಕೇಳಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲು ಚರ್ಚೆ ನಡೆಸಲಾಗಿದೆ. ನಾಯಕತ್ವದ ಪ್ರಶ್ನೆಯೇ ಇಲ್ಲ,’’ ಎಂದು ಆಜಾದ್ ಹೇಳಿದರು.
ಈ ವಾರದ ಆರಂಭದಲ್ಲಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯನ್ನು ನಡೆಸಲಾಯಿತು, ಅಲ್ಲಿ ಪಕ್ಷವು ಅಸೆಂಬ್ಲಿ ಚುನಾವಣೆಯಲ್ಲಿ ತನ್ನ ಹೀನಾಯ ಸೋಲು “ಗಂಭೀರ ಕಳವಳಕ್ಕೆ ಕಾರಣ” ಎಂದು ಬಣ್ಣಿಸಿದೆ. ಪಕ್ಷದ ಹಂಗಾಮಿ ಮುಖ್ಯಸ್ಥೆಯಾಗಿ ಸೋನಿಯಾ ಗಾಂಧಿ ಮುಂದುವರಿಯಲಿದ್ದಾರೆ ಎಂದು ಸರ್ವಾನುಮತದಿಂದ ನಿರ್ಧರಿಸಲಾಗಿದೆ.
ಜಿ-23 ಸಭೆಯಲ್ಲಿ ಪಾಲ್ಗೊಂಡಿದ್ದ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು ರಾಹುಲ್ ಗಾಂಧಿ ಗುರುವಾರ ಭೇಟಿ ಮಾಡಿದ್ದರು. ಸಭೆಯಲ್ಲಿ, ಹೂಡಾ ಅವರು ಪಕ್ಷದಲ್ಲಿ ಯಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದರ ಕುರಿತು ಸ್ಪಷ್ಟನೆ ಕೇಳಿದರು ಎಂದು ಮೂಲಗಳು ತಿಳಿಸಿವೆ. ಸಾಮೂಹಿಕವಾಗಿ ನಿರ್ಧಾರಗಳನ್ನು ಕೈಗೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ ಹೂಡಾ, ನಾಯಕರು ಆಗಾಗ್ಗೆ ಪತ್ರಿಕೆಗಳಿಂದ ಪಕ್ಷದ ನಿರ್ಧಾರಗಳ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದು ರಾಹುಲ್ ಗಾಂಧಿಗೆ ತಿಳಿಸಿದರು.
ಜಿ-23 ನಾಯಕರು ಯಾವುದೇ “ಪಕ್ಷ ವಿರೋಧಿ ಚಟುವಟಿಕೆಗಳನ್ನು” ಮಾಡಿಲ್ಲ ಎಂದು ಹೇಳಿದ ಹೂಡಾ, ಸೋನಿಯಾ ಗಾಂಧಿ ಅವರಿಗೆ ತಿಳಿಸಿದ ನಂತರ ಬಣದ ಸಭೆ ನಡೆಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಶನಿವಾರ ಹೈಡ್ರಾಮಾ! ಬೆಂಗಳೂರು ರೆಸಾರ್ಟ್ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಸದಸ್ಯರು, ಯಾರಾಗ್ತಾರೆ ಮೇಯರ್?
Published On - 8:34 pm, Fri, 18 March 22