ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್, ಪವನ್​​ ಬನ್ಸಾಲ್​ ಸ್ಪರ್ಧೆ?

ಶಶಿ ತರೂರ್ ಅವರು ಸೆಪ್ಟೆಂಬರ್ 30ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಶೋಕ್ ಗೆಹ್ಲೋಟ್ ನಾಮಪತ್ರ ಸಲ್ಲಿಸುವ ಬಗ್ಗೆ  ಇಲ್ಲಿಯವರೆಗೆ ಯಾವುದೇ ಮಾಹಿತಿ ಇಲ್ಲ ಎಂದು ಮಿಸ್ತ್ರಿ ಹೇಳಿರುವುದಾಗಿ...

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್, ಪವನ್​​ ಬನ್ಸಾಲ್​ ಸ್ಪರ್ಧೆ?
ಶಶಿ ತರೂರ್- ಪವನ್ ಬನ್ಸಾಲ್
TV9kannada Web Team

| Edited By: Rashmi Kallakatta

Sep 27, 2022 | 5:08 PM

ದೆಹಲಿ: ಅಕ್ಟೋಬರ್ 17ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ  (Congress president polls)ನಡೆಯಲಿದ್ದು ಶಶಿ ತರೂರ್ (Shashi Tharoor) ಮತ್ತು ಪವನ್ ಬನ್ಸಾಲ್  (Pawan Bansal)ನಾಮ ನಿರ್ದೇಶನದ ಅರ್ಜಿಗಳನ್ನು ಪಡೆದುಕೊಂಡಿದ್ದಾರೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ. ಶಶಿ ತರೂರ್ 7 ಅರ್ಜಿಗಳನ್ನು ಪಡೆದಿದ್ದು, ಪವನ್ ಬನ್ಸಾಲ್ ಅವರು ಎರಡು ಅರ್ಜಿಗಳನ್ನು ಪಡೆದುಕೊಂಡಿದ್ದಾರೆ ಎಂದು ಚುನಾವಣೆಯ ಮೇಲ್ವಿಚಾರಣೆ ನಡೆಸುತ್ತಿರುವ ಕಾಂಗ್ರೆಸ್ ನ ಹಿರಿಯ ನಾಯಕ ಮಧುಸೂದನ್ ಮಿಸ್ತ್ರಿ ಹೇಳಿದ್ದಾರೆ. ಆದಾಗ್ಯೂ, ತಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಬನ್ಸಾಲ್ ಹೇಳಿದ್ದು, ಈ ಯೋಚನೆ ನನ್ನ ಮನಸ್ಸಲ್ಲಿ ಬಂದಿಲ್ಲ ಎಂದಿದ್ದಾರೆ. ಶಶಿ ತರೂರ್ ಅವರು ಸೆಪ್ಟೆಂಬರ್ 30ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಶೋಕ್ ಗೆಹ್ಲೋಟ್ ನಾಮಪತ್ರ ಸಲ್ಲಿಸುವ ಬಗ್ಗೆ  ಇಲ್ಲಿಯವರೆಗೆ ಯಾವುದೇ ಮಾಹಿತಿ ಇಲ್ಲ ಎಂದು ಮಿಸ್ತ್ರಿ ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ. ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವ ವಹಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಗೆಹ್ಲೋಟ್ ಅವರು ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನ ಮತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಎರಡೂ ಬೇಕು ಎಂದು ಹೇಳಿರುವುದು ಪಕ್ಷದಲ್ಲಿ ಅಸಮಾಧಾನ ಹುಟ್ಟಿಸಿತ್ತು.

ಒಬ್ಬರಿಗೆ ಎರಡೆರಡು ಹುದ್ದೆ ನೀಡಲಾಗುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರಿಂದ ಗೆಹ್ಲೋಟ್ ತಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಭಾನುವಾರ ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕೇನ್ ಕರೆದ ಸಭೆಗೆ ಗೆಹ್ಲೋಟ್ ನಿಷ್ಠರಾದ 90ಕ್ಕಿಂತಲೂಹೆಚ್ಚು ಶಾಸಕರು ಗೈರಾಗಿದ್ದರು. ಗೆಹ್ಲೋಟ್ ಬದಲು ಸಚಿನ್ ಪೈಲಟ್ ನ್ನು ರಾಜಸ್ಥಾನ ಸಿಎಂ ಮಾಡಿದರೆ ತಾವು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಶಾಸಕರು ಬೆದರಿಕೆ ಹಾಕಿದ್ದರು. ಗೆಹ್ಲೋಟ್ ಅವರು ಶೀಘ್ರದಲ್ಲೇ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.

ನಾನು ಚುನಾವಣಾ ಪ್ರಕ್ರಿಯೆಯ ಬಗ್ಗೆ ಸೋನಿಯಾ ಗಾಂಧಿ ಅವರಿಗೆ ವಿವರಿಸಿದ್ದೇನೆ. ಮತದಾರರ ಪಟ್ಟಿಯನ್ನು ಹಸ್ತಾಂತರಿಸಿದ್ದೇನೆ ಎಂದು ಮಿಸ್ತ್ರಿ ಎನ್‌ಡಿಟಿವಿಗೆ ತಿಳಿಸಿದರು. ಚುನಾವಣೆಯ ಎರಡು ದಿನಗಳ ನಂತರ ಅಕ್ಟೋಬರ್ 19 ರಂದು ಹೊಸ ಕಾಂಗ್ರೆಸ್ ಅಧ್ಯಕ್ಷರನ್ನು ಘೋಷಿಸಲಾಗುತ್ತದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada