ಓಣಂ ಸಂಭ್ರಮ; ಬಿಳಿ ಮುಂಡು-ಕೆಂಪು ಕುರ್ತಾ ಧರಿಸಿ ಉಯ್ಯಾಲೆ ಆಡಿದ ಶಶಿ ತರೂರ್​

| Updated By: Lakshmi Hegde

Updated on: Aug 21, 2021 | 4:00 PM

Onam 2021: ಈ ಬಾರಿ ಶಶಿ ತರೂರ್​ ಅವರು ಪಾಲಕ್ಕಾಡ್​ನಲ್ಲಿರುವ ತಮ್ಮ ಮನೆಯಲ್ಲಿ ಪೂರ್ವಜರೊಂದಿಗೆ ಓಣಂ ಹಬ್ಬವನ್ನು ಆಚರಿಸಿದ್ದಾರೆ. ಅದಕ್ಕೂ ಮೊದಲು ತಾವು  ಮಲಯಾಳಂ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದ ವಿಡಿಯೋ ತುಣುಕನ್ನೂ ಶೇರ್​ ಮಾಡಿಕೊಂಡಿದ್ದಾರೆ.

ಓಣಂ ಸಂಭ್ರಮ; ಬಿಳಿ ಮುಂಡು-ಕೆಂಪು ಕುರ್ತಾ ಧರಿಸಿ ಉಯ್ಯಾಲೆ ಆಡಿದ ಶಶಿ ತರೂರ್​
ಉಯ್ಯಾಲೆ ಆಡುತ್ತಿರುವ ಶಶಿ ತರೂರ್​
Follow us on

ದೆಹಲಿ: ಇಂದು ಓಣಂ ಹಬ್ಬ (Onam Festival). ಕೇರಳ (Kerala)ದ ಜನರಿಗೆ ಇದು ತುಂಬ ವಿಶೇಷವಾದ ಉತ್ಸವ. ಬೆಳಗ್ಗೆಯೇ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿ ಹಲವು ಸಚಿವರು, ಗಣ್ಯರು ಓಣಂ ಹಬ್ಬದ ಶುಭಾಶಯ ಕೋರಿದ್ದಾರೆ. ಹಾಗೇ, ಕಾಂಗ್ರೆಸ್​ ಸಂಸದ ಶಶಿ ತರೂರ್ (Shashi Tharoor)​ ಕೂಡ ಓಣಂ ಹಬ್ಬದ ಶುಭ ಹಾರೈಸಿದ್ದಾರೆ. ಅದಕ್ಕೂ ಮಿಗಿಲಾಗಿ ಅವರು ತುಂಬ ಸಂತೋಷದಿಂದ ಓಣಂ ಆಚರಿಸಿದ್ದಾರೆ. ಓಣಂ ನಿಮಿತ್ತ ಉಯ್ಯಾಲೆ (ಜೋಕಾಲಿ) ಆಡಿದ (Swing Tradition)  ವಿಡಿಯೋವನ್ನು ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಬಿಳಿ ಬಣ್ಣದ ಮುಂಡು, ಶಲ್ಯ ಮತ್ತು ಕೆಂಪು ಬಣ್ಣದ ಕುರ್ತಾ ಧರಿಸಿ, ಉಯ್ಯಾಲೆ ಆಡುತ್ತಿರುವ ಶಶಿ ತರೂರ್, ಎಲ್ಲರಿಗೂ ಹ್ಯಾಪಿ ಓಣಂ ಎಂದಿದ್ದಾರೆ. 

ಓಣಂ ಹಬ್ಬವನ್ನು ಸುಗ್ಗಿ, ಸಮೃದ್ಧಿ, ಸಂತೋಷದ ಹಬ್ಬ ಎಂದೇ ಕರೆಯಲಾಗುತ್ತದೆ. ಹಾಗೇ, ಉದಾತ್ತತೆಗೆ ಹೆಸರಾಗಿದ್ದ ಮಹಾಬಲಿ ರಾಜನ ವಾರ್ಷಿಕ ಪೂಜೆಯ ಹಬ್ಬವೂ ಹೌದು. ಈ ದಿನದಂದು ಹೂವಿನ ರಂಗೋಲಿ, ಪುಲಿಕಳಿ, ಕಥಕ್ಕಳಿ, ಉಯ್ಯಾಲೆಯಾಟದಂಥ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತವೆ. 10 ದಿನಗಳ ಹಬ್ಬವಾಗಿರುವ ಓಣಂ ಈ ಬಾರಿ ಆಗಸ್ಟ್​ 23ಕ್ಕೆ ಮುಕ್ತಾಯವಾಗಲಿದೆ. ಇಂಥ ಸಂಭ್ರಮದ ಹಬ್ಬವನ್ನು ಸಂಭ್ರಮದಿಂದ ಆಚರಿಸಿರುವ ಶಶಿ ತರೂರ್​ ,  ಓಣಂ ಹಬ್ಬದಂದು ಸಾಮಾನ್ಯವಾಗಿ ಉಯ್ಯಾಲೆ ಆಟವೆಂಬುದು ಯುವತಿಯರಿಗೆ ಮೀಸಲಾಗಿದೆ. ಆದರೆ ನನಗೂ ಈ ಬಾರಿ ಉಯ್ಯಾಲೆ ಆಡುವ ಉತ್ಸಾಹ ಬಂದಿದೆ ಎಂದು ಹೇಳಿದ್ದಾರೆ.

ಈ ಬಾರಿ ಶಶಿ ತರೂರ್​ ಅವರು ಪಾಲಕ್ಕಾಡ್​ನಲ್ಲಿರುವ ತಮ್ಮ ಮನೆಯಲ್ಲಿ ಪೂರ್ವಜರೊಂದಿಗೆ ಓಣಂ ಹಬ್ಬವನ್ನು ಆಚರಿಸಿದ್ದಾರೆ. ಅದಕ್ಕೂ ಮೊದಲು ತಾವು  ಮಲಯಾಳಂ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದ ವಿಡಿಯೋ ತುಣುಕನ್ನೂ ಶೇರ್​ ಮಾಡಿಕೊಂಡಿದ್ದಾರೆ. ಆ ಚಾನಲ್​ಗೆ ನೀಡಿದ ಸಂದರ್ಶನದಲ್ಲಿ ಶಶಿ ತರೂರ್​, ಓಣಂ ಹಬ್ಬ, ಅದರ ಇತಿಹಾಸ, ವಿಶೇಷತೆ ಬಗ್ಗೆ ತಿಳಿಸಿದ್ದಾರೆ. ಇನ್ನು, ತಮ್ಮ ಬಾಲ್ಯದಲ್ಲಿ ಹಬ್ಬವನ್ನು ಹೇಗೆ ಆಚರಿಸಲಾಗುತ್ತಿತ್ತು ಎಂಬ ಬಗ್ಗೆ ಮಾತನಾಡಿದ್ದಾರೆ. ಹಾಗೇ, ತಾವು 2010ರಲ್ಲಿ ಸುನಂದಾ ಪುಷ್ಕರ್​ ಅವರನ್ನು ವಿವಾಹವಾಗಿದ್ದು, ಪಾಲಕ್ಕಾಡ್​​ನ ಎಲವಾಂಚೇರಿ ಹಳ್ಳಿಯಲ್ಲಿ ಎಂದೂ ತಿಳಿಸಿದ್ದಾರೆ.

ಸಾಮಾನ್ಯವಾಗಿ ಕೇರಳದಲ್ಲಿ ಪ್ರತಿವರ್ಷ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಆದರೆ ಈ ಬಾರಿ ಕೊವಿಡ್​ 19 ಸೋಂಕಿನ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ಕಡಿವಾಣ ಬಂದಿದೆ. ಕೇರಳ ಸರ್ಕಾರ ವರ್ಚ್ಯುವಲ್ ಆಗಿ ಓಣಂ ಹಬ್ಬವನ್ನುಆಯೋಜಿಸಿದೆ. ಆದಾಗ್ಯೂ ಅಷ್ಟದರಲ್ಲೇ ಕೇರಳಿಗರು ಸಂಭ್ರಮದಿಂದ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ. ಇನ್ನು ಶಶಿ ತರೂರ್​ ಕೂಡ ಈ ಬಾರಿ ತುಸು ಹೆಚ್ಚಾಗಿಯೇ ಸಂತೋಷದಲ್ಲಿದ್ದಾರೆ ಎನ್ನಬಹುದು. ಪತ್ನಿ ಸುನಂದಾ ಪುಷ್ಕರ್​ ಸಾವಿನ ಪ್ರಕರಣದಲ್ಲಿ ಅವರು ಆರೋಪ ಮುಕ್ತ ಎಂದು ದೆಹಲಿ ಕೋರ್ಟ್ ಕೆಲವೇ ದಿನಗಳ ಹಿಂದೆ ತೀರ್ಪು ನೀಡಿದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಶಶಿ ತರೂರ್​, ಏಳೂವರೆ ವರ್ಷಗಳ ಹಿಂಸೆಯಿಂದ ಮುಕ್ತಿ ಸಿಕ್ಕಿದೆ ಎಂದಿದ್ದರು.

ಇದನ್ನೂ ಓದಿ: ರಾಜೀವ್ ಹೊಸ ಚಿತ್ರ ‘ಉಸಿರೇ ಉಸಿರೇ’ಗೆ  ಕಿಚ್ಚ ಸುದೀಪ್ ಸಿನಿಮಾ ಕನೆಕ್ಷನ್​

Onam 2021: ದೇಶದ ಜನರಿಗೆ ಓಣಂ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್​