AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದು ಕಾಶ್ಮೀರದ ಕಲ್ಲು ತೂರಾಟಗಾರರನ್ನು ಬೆಂಬಲಿಸಿದ್ದ ಶೆಹ್ಲಾ ರಶೀದ್, ಇಂದು ಮೋದಿ, ಶಾಗೆ ಶ್ಲಾಘನೆ

ಮೋದಿ ಮತ್ತು ಅಮಿತ್​​ ಶಾ ಅವರನ್ನು JNU ಕಾಲೇಜಿನ ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷೆ ಶೆಹ್ಲಾ ರಶೀದ್ (Shehla Rashid) ಹಾಡಿಹೊಗಳಿದ್ದಾರೆ. ಶೆಹ್ಲಾ ರಶೀದ್ ಅವರು ಈ ಹಿಂದೆಯು ಮೋದಿ ಸರ್ಕಾರವನ್ನು ಹೊಗಳಿದ್ದರು. ಇದಕ್ಕೆ ಕಾರಣ ಮೋದಿ ಮತ್ತು ಅಮಿತ್​​ ಶಾ ಕಾಶ್ಮೀರದಲ್ಲಿ ಮಾಡಿದ ಮೋಡಿ. ಹೌದು ಕಾಶ್ಮೀರ (kashmir) ಬದಲಾಗಿದೆ 2010ರಲ್ಲಿದ್ದ ಪರಿಸ್ಥಿತಿ ಈಗ ಅಲ್ಲಿ ಇಲ್ಲ ಎಂದು ಎಎನ್​​ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಕಾಶ್ಮೀರದಲ್ಲಿ ಮೋದಿ-ಶಾ ಮಾಡಿದ ಕೆಲಸವನ್ನು ಶ್ಲಾಘಿಸಿದ್ದಾರೆ. ಕಾಶ್ಮೀರ ಗಾಜಾ ಪಟ್ಟಿ ಅಲ್ಲ, ಅದು ತುಂಬಾ ಬದಲಾಗಿದೆ.

ಅಂದು ಕಾಶ್ಮೀರದ ಕಲ್ಲು ತೂರಾಟಗಾರರನ್ನು ಬೆಂಬಲಿಸಿದ್ದ ಶೆಹ್ಲಾ ರಶೀದ್, ಇಂದು ಮೋದಿ, ಶಾಗೆ ಶ್ಲಾಘನೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Nov 15, 2023 | 2:17 PM

Share

ಪ್ರಧಾನಿ ಮೋದಿ (PM Modi) ಮತ್ತು ಅಮಿತ್​​ ಶಾ (Amit Shah) ಅವರ ವಿರುದ್ಧ ಮಾತನಾಡುತ್ತಿದ್ದ   ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷೆ ಶೆಹ್ಲಾ ರಶೀದ್ (Shehla Rashid) ಇದೀಗ ಮೋದಿ ಮತ್ತು ಅಮಿತ್​​ ಶಾ ಅವರನ್ನು ರಶೀದ್  ಹಾಡಿಹೊಗಳಿದ್ದಾರೆ. ಶೆಹ್ಲಾ ರಶೀದ್ ಅವರು ಈ ಹಿಂದೆಯು ಮೋದಿ ಸರ್ಕಾರವನ್ನು ಹೊಗಳಿದ್ದರು. ಇದಕ್ಕೆ ಕಾರಣ ಮೋದಿ ಮತ್ತು ಅಮಿತ್​​ ಶಾ ಕಾಶ್ಮೀರದಲ್ಲಿ ಮಾಡಿದ ಮೋಡಿ. ಹೌದು ಕಾಶ್ಮೀರ (kashmir) ಬದಲಾಗಿದೆ 2010ರಲ್ಲಿದ್ದ ಪರಿಸ್ಥಿತಿ ಈಗ ಅಲ್ಲಿ ಇಲ್ಲ ಎಂದು ಎಎನ್​​ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಕಾಶ್ಮೀರದಲ್ಲಿ ಮೋದಿ-ಶಾ ಮಾಡಿದ ಕೆಲಸವನ್ನು ಶ್ಲಾಘಿಸಿದ್ದಾರೆ. ಕಾಶ್ಮೀರ ಗಾಜಾ ಪಟ್ಟಿ ಅಲ್ಲ, ಅದು ತುಂಬಾ ಬದಲಾಗಿದೆ. ಕಾಶ್ಮೀರದಲ್ಲಿ ಪ್ರಧಾನಿ ಮೋದಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅಲ್ಲಿನ ಪರಿಸ್ಥಿತಿ ತುಂಬಾ ಸುಧಾರಿಸಿದೆ. ಅಲ್ಲಿನ ಜನ ತುಂಬಾ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ನೀವು ಕಲ್ಲು ತೂರಾಟ ನಡೆಸುವವರನ್ನು ಎಂದಾದರೂ ಬೆಂಬಲಿಸಿದ್ದೀರಾ ಎಂದು ಶೆಹ್ಲಾ ಅವರನ್ನು ಈ ಸಂದರ್ಶನದಲ್ಲಿ ಪ್ರಶ್ನಿಸಲಾಯಿತು. ಹೌದು ಅದು 2010ರಲ್ಲಿ ಆದರೆ ಈಗ ಮಾಡಲ್ಲ, ಕಾಶ್ಮೀರ ಪ್ರಸ್ತುತ ಪರಿಸ್ಥಿತಿ ಬದಲಾಗಿದೆ. ಸಾಮಾಜಿಕವಾಗಿ ಅನೇಕ ಅಭಿವೃದ್ಧಿಯಾಗಿದೆ. ಅದನ್ನು ನೋಡುವುದೆ ಒಂದು ಸಂತೋಷ. ಈ ಕಾರಣಕ್ಕೆ ನಾನು ಮೋದಿ ಸರ್ಕಾರಕ್ಕೆ ತುಂಬಾ ಕೃತಜ್ಞನಾಗಿದ್ದೇನೆ. ಕಾಶ್ಮೀರ ಗಾಜಾ ಅಲ್ಲ. ಇಲ್ಲಿಯು ಪ್ರತಿಭಟನೆ, ದಂಗೆ ಮತ್ತು ಒಳನುಸುಳುವಿಕೆಯ ಘಟನೆ ಹೆಚ್ಚಾಗಿತ್ತು. ಆದರೆ ಈಗ ಕಡಿಮೆಯಾಗಿದೆ. ಇವುಗಳನ್ನು ತಡೆಯಲು ಒಬ್ಬರು ಬೇಕಿತ್ತು. ಅದನ್ನು ಮೋದಿ ಮಾಡಿದ್ದಾರೆ.

ಇದನ್ನೂ ಓದಿ: ಮಧ್ಯ ಪ್ರಾಚ್ಯದವರನ್ನು ನೋಡಿದರೆ ಭಾರತೀಯರಾಗಿ ನಾವು ಅದೃಷ್ಟವಂತರು: ಶೆಹ್ಲಾ ರಶೀದ್

ಕಾಶ್ಮೀರದಲ್ಲಿ ಇಂದಿನ ಪರಿಸ್ಥಿತಿ ಸಂಪೂರ್ಣ ನಿಜ

ಕಾಶ್ಮೀರದ ಹಳೆಯ ಸ್ಥಿತಿಯನ್ನು ನೋಡುತ್ತ ಹೋದರೆ, ಈಗಿನ ಪರಿಸ್ಥಿತಿ ತುಂಬಾ ಭಿನ್ನವಾಗಿದೆ. ಇದರ ಸಂಪೂರ್ಣ ಕ್ರೆಡಿಟ್ ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇನೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರದ ರಾಜಕೀಯ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಜೆಎನ್‌ಯುನಲ್ಲಿ ಭಾರತ ವಿರೋಧಿ ಘೋಷಣೆಗಳು ಎದ್ದಿರಲಿಲ್ಲ

ಜೆಎನ್‌ಯುನಲ್ಲಿ ನಡೆದ ಅನೇಕ ಘಟನೆಗಳು ನಿಮ್ಮ ಮತ್ತು ಒಮರ್ ಖಾಲಿದ್ ಮತ್ತು ಕನ್ಹಯ್ಯಾ ಕುಮಾರ್ ಅವರ ಜೀವನವನ್ನು ಬದಲಾಯಿಸಿತು ಎಂದು ಸಂದರ್ಶನದಲ್ಲಿ ಕೇಳಿದಾಗ, ನನ್ನ ಮತ್ತು ಒಮರ್ ಖಾಲಿದ್ ಮತ್ತು ಕನ್ಹಯ್ಯಾ ಕುಮಾರ್ ಅವರ ಜೀವನ ಮಾತ್ರ ಬದಲಾಯಿಸಿಲ್ಲ, ಈ ಘಟನೆಯಿಂದ ಇಡೀ ವಿಶ್ವವಿದ್ಯಾನಿಲಯವೇ ಸಂಕಷ್ಟಕ್ಕೆ ಸಿಲುಕಿದೆ. ಇದರ ಜತೆಗೆ ದೊಡ್ಡ ವಿವಾದಕ್ಕೆ ಸಿಲುಕಿದ್ದು ‘ಭಾರತ್ ತೇರೆ ಟುಕ್ಡೇ ಹೋಂಗೆ’ ಎಂಬ ಘೋಷಣೆ, ಆದರೆ ಜೆಎನ್‌ಯುಯಲ್ಲಿ ಈ ಘೋಷಣೆ ಮೊಳಗಲಿಲ್ಲ, ಲಾಲ್ ಸಲಾಂ ಎಂಬ ಸಾಮಾನ್ಯ ಘೋಷಣೆಗಳು ಮೊಳಗಿದೆ ಎಂದು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:53 pm, Wed, 15 November 23