JKPM ಪಕ್ಷಕ್ಕೆ ದೇಶವಿರೋಧಿಗಳ ಹಣ: JNU ಹಳೇ ವಿದ್ಯಾರ್ಥಿನಿಯ ಮೇಲೆ ತಂದೆಯಿಂದಲೇ ಆಪಾದನೆ

| Updated By: ganapathi bhat

Updated on: Apr 06, 2022 | 11:29 PM

JKPM ಪಕ್ಷದ ಫಂಡ್​ಗಳು ದೇಶವಿರೋಧಿ ಸಂಘಟನೆಗಳಿಂದ ಬರುತ್ತವೆ. ರಾಷ್ಟ್ರ ಪಕ್ಷಗಳು ಅವರಿಗೆ ದೇಣಿಗೆ ನೀಡುವುದಿಲ್ಲ ಎಂದು ಶೆಹ್ಲಾ ರಶೀದ್ ತಂದೆ ಆರೋಪ ಮಾಡಿದ್ದಾರೆ.

JKPM ಪಕ್ಷಕ್ಕೆ ದೇಶವಿರೋಧಿಗಳ ಹಣ: JNU ಹಳೇ ವಿದ್ಯಾರ್ಥಿನಿಯ ಮೇಲೆ ತಂದೆಯಿಂದಲೇ ಆಪಾದನೆ
ಶೆಹ್ಲಾ ರಶೀದ್
Follow us on

ದೆಹಲಿ: JKPM ಪಕ್ಷದ ಎಲ್ಲಾ ಫಂಡ್​ಗಳು ದೇಶವಿರೋಧಿ ಸಂಘಟನೆಗಳಿಂದ ಬರುತ್ತವೆ ಎಂದು JNU ಹಳೇ ವಿದ್ಯಾರ್ಥಿ ಮತ್ತು ವಿದ್ಯಾರ್ಥಿ ಸಂಘಟನೆಯ ನಾಯಕಿ ಶೆಹ್ಲಾ ರಶೀದ್ ಮೇಲೆ ಅವರ ತಂದೆ ಆರೋಪ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್​ಮೆಂಟ್ ಪಕ್ಷಕ್ಕೆ ಬರುತ್ತಿದ್ದ ಹಣಕಾಸಿನ ಮೂಲದ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ನಿಧಿಯ ಬಗ್ಗೆ ಸರಿಯಾದ ತನಿಖೆ ನಡೆಸಬೇಕೆಂದು ಸಲಹೆ ಮಾಡಿದ್ದಾರೆ.

ಮಾಜಿ ಐಎಎಸ್ ಅಧಿಕಾರಿ, ಶಾ ಫೈಸಲ್ ನೇತೃತ್ವದ JKPM ಪಕ್ಷಕ್ಕೆ, ಶೆಹ್ಲಾ ರಶೀದ್ ಸೇರಿಕೊಂಡಿದ್ದರು. ಬಳಿಕ ಪಕ್ಷದ ಮುಂದಾಳು, ಫೈಸಲ್ ಅವರೇ ರಾಜಕೀಯದಿಂದ ಹಿಂದೆ ಸರಿದ ಕಾರಣ, ಶೆಹ್ಲಾ ಕೂಡ ಪಕ್ಷದಿಂದ ಹೊರಬಂದಿದ್ದರು.

ಇದೀಗ ಶೆಹ್ಲಾ ತಂದೆ ಅಬ್ದುಲ್ ಆರ್. ಶೊಹ್ರಾ ಈ ಪಕ್ಷದ ನಿಧಿ ಸಂಗ್ರಹದ ಬಗ್ಗೆ ಮಾತನಾಡಿದ್ದಾರೆ. ಯಾವುದೇ ರಾಷ್ಟ್ರೀಯ ಪಕ್ಷಗಳು ಇವರಿಗೆ ದೇಣಿಗೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಶೆಹ್ಲಾ JKPM ಪಕ್ಷ ಸೇರಲು ಮೂರು ಕೋಟಿ ರೂಪಾಯಿ ಪಡೆದಿದ್ದಾಳೆ. ಜಮ್ಮು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್​ಬಾಗ್ ಸಿಂಗ್ ಬಳಿ ಈ ಬಗ್ಗೆ ತನಿಖೆ ಮಾಡುವಂತೆ ಕೇಳಿಕೊಂಡಿದ್ದಾರೆ. ಜೊತೆಗೆ, ತನಗೆ ರಕ್ಷಣೆ ನೀಡುವಂತೆಯೂ ಕೇಳಿಕೊಂಡಿದ್ದಾರೆ.

ಶೆಹ್ಲಾ ರಶೀದ್ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಶೆಹ್ಲಾ ರಶೀದ್, ತಂದೆ ಮಾಡಿರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ. ತಂದೆಯನ್ನು ಸ್ತ್ರೀ ನಿಂದಕ, ವಂಚಕ ಎಂದು ಆರೋಪಿಸಿದ್ದಾರೆ. ನ್ಯಾಯಾಲಯದಲ್ಲಿ ಕೌಟುಂಬಿಕ ಹಿಂಸೆಯ ಕೇಸ್ ಎದುರಿಸುತ್ತಿರುವ ಅವರು ಹೀಗೆ ಮಾಡಿದ್ದಾರೆ. ತಾನು ಮತ್ತು ತಾಯಿ, ತಂದೆಯ ವಿರುದ್ಧ ನಡೆದುಕೊಂಡದ್ದಕ್ಕೆ ಹೀಗಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಂಗಳೂರಿಗೆ ಕಾಶ್ಮೀರ, ಪಾಕಿಸ್ತಾನದ ಉಗ್ರರು ಬಂದಿದ್ದಾರಾ? ಸಂಸದೆ ಶೋಭಾಗೆ ಈ ಡೌಟು ಯಾಕೆ ಬಂತು ಅಂದ್ರೆ..

Published On - 3:53 pm, Tue, 1 December 20