Shimla Mosque Row: ಸಂಜೌಲಿ ಮಸೀದಿ ಗಲಭೆ; ಶಿಮ್ಲಾದಲ್ಲಿ ಹಿಂದೂಗಳು ಪ್ರತಿಭಟನೆ ನಡೆಸುತ್ತಿರುವುದು ಏಕೆ?
ಶಿಮ್ಲಾದ ಸಂಜೌಲಿ ಪ್ರದೇಶದಲ್ಲಿನ ಮಸೀದಿಯಲ್ಲಿನ ಅಕ್ರಮ ಕಟ್ಟಡವನ್ನು ಕೆಡವಲು ಒತ್ತಾಯಿಸಿದ ಹಿಂದೂ ಪ್ರತಿಭಟನಾಕಾರರು ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದ ನಂತರ ಭದ್ರತಾ ಪಡೆ ಸಿಬ್ಬಂದಿ ಲಾಠಿ ಚಾರ್ಜ್ ಮಾಡಿದ್ದಾರೆ. ಈ ವೇಳೆ "ಜೈ ಶ್ರೀ ರಾಮ್" ಮತ್ತು "ಹಿಂದೂ ಏಕತಾ ಜಿಂದಾಬಾದ್" ಘೋಷಣೆಗಳು ಮೊಳಗಿದವು.
ಶಿಮ್ಲಾ: ಇಂದು ಬೆಳಗ್ಗೆ ಸಂಜೌಲಿ ಪ್ರದೇಶದಲ್ಲಿ ಅಕ್ರಮ ಮಸೀದಿ ನಿರ್ಮಾಣವನ್ನು ವಿರೋಧಿಸಿ ಪ್ರತಿಭಟನೆ ವೇಳೆ ಸ್ಥಳೀಯರು ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದರು. ಈ ವೇಳೆ “ಜೈ ಶ್ರೀರಾಮ್” ಮತ್ತು “ಭಾರತ್ ಮಾತಾ ಕೀ ಜೈ” ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾಕಾರರು ಮಸೀದಿಯತ್ತ ಮೆರವಣಿಗೆ ನಡೆಸುತ್ತಿರುವ ದೃಶ್ಯಗಳು ಕಂಡುಬಂದವು.
ಶಿಮ್ಲಾದಲ್ಲಿ ನೂರಾರು ಪ್ರತಿಭಟನಾಕಾರರು ಢಲ್ಲಿಯ ಸಬ್ಜಿ ಮಂಡಿಯಲ್ಲಿ ಜಮಾಯಿಸಿದರು. ತಮ್ಮ ಪ್ರತಿಭಟನೆಯನ್ನು ನಡೆಸಲು ಸಂಜೌಲಿ ಕಡೆಗೆ ಮೆರವಣಿಗೆ ನಡೆಸಿದರು. ಧಲ್ಲಿ ಸುರಂಗದ ಬಳಿ ನಿರ್ಮಿಸಲಾದ ಬ್ಯಾರಿಕೇಡ್‌ಗಳನ್ನು ಮುರಿದರು. ಹಿಂದೂ ಸಂಘಟನೆಗಳ ಕರೆಯ ಮೇರೆಗೆ ಜಮಾಯಿಸಿದ ಪ್ರತಿಭಟನಾಕಾರರು ಮಸೀದಿ ಬಳಿಯ ಎರಡನೇ ಬ್ಯಾರಿಕೇಡ್ ಅನ್ನು ಒಡೆದು ಹಾಕಿದಾಗ, ಪೊಲೀಸರು ಲಾಠಿ ಚಾರ್ಜ್ ಮಾಡಿ ಅವರನ್ನು ಚದುರಿಸಲು ಜಲಫಿರಂಗಿಗಳನ್ನು ಬಳಸಿದರು.
HINDU AWAKENING IN HIMACHAL PRADESH 🔥
A humongous crowd of Hindus are fighting for their rights and demanding demolition of illegal Mosque.
Hindus from all around India must get inspired by Hindus of Sanjauli, Shimla.
Har Har Mahadev 🙌🏻 pic.twitter.com/QcetHgRpwl
— Sunanda Roy 👑 (@SaffronSunanda) September 11, 2024
ಸಂಜೌಲಿ ಮಸೀದಿಯಲ್ಲಿ ಅನಧಿಕೃತ ನಿರ್ಮಾಣದ ಕುರಿತು ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಮತ್ತು ವಿವಾದಿತ ಕಟ್ಟಡವನ್ನು ಕೆಡವಲು ಒತ್ತಾಯಿಸಿ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಬಂದ್‌ನ ನಡುವೆ ಸಂಜೌಲಿ ಮತ್ತು ಅದರ ಪಕ್ಕದ ಪ್ರದೇಶಗಳನ್ನು ಭಾರೀ ಪೊಲೀಸ್ ನಿಯೋಜನೆಯೊಂದಿಗೆ ಕೋಟೆಯಾಗಿ ಪರಿವರ್ತಿಸಲಾಗಿದೆ.
ಇದನ್ನೂ ಓದಿ: ಹಿಮಾಚಲ ಪ್ರದೇಶ: ಶಿಮ್ಲಾದಲ್ಲಿ ‘ಅಕ್ರಮವಾಗಿ ನಿರ್ಮಿಸಿದ’ ಮಸೀದಿ ಕೆಡವಿ ಎಂದು ಒತ್ತಾಯಿಸಿ ಪ್ರತಿಭಟನೆ
ಶಿಮ್ಲಾ ಜಿಲ್ಲಾಡಳಿತವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ 5ಕ್ಕಿಂತ ಹೆಚ್ಚು ಜನರನ್ನು ಒಟ್ಟುಗೂಡಿಸುವುದು, ಮಾರಕ ಆಯುಧಗಳು ಮತ್ತು ಶಸ್ತ್ರಾಸ್ತ್ರಗಳನ್ನು ಒಯ್ಯುವುದನ್ನು ನಿಷೇಧಿಸಿ ನಿಷೇಧಾಜ್ಞೆ ಹೊರಡಿಸಿದೆ.
Small clashes now breaking out. Protesters have broken / removed Police barriers placed in Sanjauli.#shimla #himachalpradesh #culture pic.twitter.com/O9NwZhH7ZM
— Sidharth Shukla (@sidhshuk) September 11, 2024
ಮಸೀದಿಯ ಮೌಲ್ವಿಯಾದ ಶಹಜಾದ್ ಇಮಾಮ್ ಈ ರಚನೆಯು 1947ಕ್ಕೂ ಹಿಂದಿನದು ಎಂದು ಹೇಳಿದ್ದಾರೆ. ಆದರೆ ಇದರ ವಿಸ್ತೃತ ನಿರ್ಮಾಣವು 2007ರ ನಂತರ ನಡೆಯಿತು. ಇದು ಅಕ್ರಮ ಎಂದು ಆರೋಪಿಸಿ 2010ರಲ್ಲಿ ಮಸೀದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಮಸೀದಿಯಲ್ಲಿ ಕಳೆದ 14 ವರ್ಷಗಳಲ್ಲಿ 4 ಹೊಸ ಮಹಡಿಗಳನ್ನು ಸೇರಿಸಲಾಗಿದೆ. ಈ ಕುರಿತು 44 ಬಾರಿ ಮಹಾನಗರ ಪಾಲಿಕೆ ಯಾವುದೇ ನಿರ್ಣಯವಿಲ್ಲದೆ ವಿಚಾರಣೆ ನಡೆಸಿದೆ.
#WATCH | Shimla Protests | Himachal Pradesh: Police lathi-charge the protestors at the Sanjauli Market in order to disperse them while they are on their way to the alleged illegal construction of a mosque in the Sanjauli area pic.twitter.com/lE5uL1rbXp
— ANI (@ANI) September 11, 2024
ಇದನ್ನೂ ಓದಿ: ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ವ್ಯಕ್ತಿ
ಆಗಸ್ಟ್ 30ರಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅರ್ಧ ಡಜನ್ ಜನರು ಮಲ್ಯಾಣ ಪ್ರದೇಶದಲ್ಲಿ ಉದ್ಯಮಿ ಮತ್ತು ಇತರ ಕೆಲವು ವ್ಯಾಪಾರಿಗಳ ಮೇಲೆ ರಾಡ್ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿ ನಾಲ್ವರನ್ನು ಗಾಯಗೊಳಿಸಿದರು. ಉದ್ಯಮಿ ಯಶಪಾಲ್ ಸಿಂಗ್ ಶಿಮ್ಲಾ ಬಳಿಯ ಕಸುಂಪ್ಟಿ ಅಸೆಂಬ್ಲಿಯಲ್ಲಿ ಮಲ್ಯಾನದವರು ಎಂದು ವರದಿಯಾಗಿದೆ.
#HimachalPradesh : Hindus in thousands are out together protesting against the illegal mosque 🕌 being built by encroaching the govt land in Sanjauli ,Shimla.
While CONgress govt in state is out using all force not to stop the illegal mosques construction but to silence the… pic.twitter.com/vIwCNh174j
— Amitabh Chaudhary (@MithilaWaala) September 11, 2024
ಪ್ರತಿಭಟನೆ ಶುರುವಾಗಿದ್ದು ಹೇಗೆ?
ಹಿಂದೂ ಸಂಘಟನೆಗಳು ಕಳೆದ ವಾರ ವಿಧಾನಸೌಧದ ಸುತ್ತಮುತ್ತಲಿನ ಚೌರಾ ಮೈದಾನದಲ್ಲಿ “ಕಾನೂನುಬಾಹಿರ” ಮಸೀದಿಯನ್ನು ಕೆಡವಲು ಒತ್ತಾಯಿಸಿ ಬೃಹತ್ ಪ್ರತಿಭಟನೆಯನ್ನು ನಡೆಸಿದ್ದವು. ಸಂಜೌಲಿಯ ಹೊರಗಿನ ಪ್ರದೇಶವಾದ ಮಲ್ಯಾನಾದಲ್ಲಿ ಜನರು ಜಮಾಯಿಸಿದರು ಮತ್ತು ಅಲ್ಲಿರುವ ಮಸೀದಿಯನ್ನು ಕೆಡವಲು ಒತ್ತಾಯಿಸಿದರು. ಈ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಮಸೀದಿಯ 4 ಮಹಡಿಗಳು ಅಕ್ರಮವಾಗಿದೆ. ಕಾನೂನು ಬಾಹಿರವಾಗಿ ಯಾವುದಾದರೂ ಕಟ್ಟಡ ನಿರ್ಮಿಸಿದರೆ ಅದನ್ನು ತಕ್ಷಣವೇ ಕೆಡವಲಾಗುತ್ತದೆ. 10 ವರ್ಷ ಕಳೆದರೂ ಮಸೀದಿಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಅಕ್ರಮ ಮಸೀದಿಯನ್ನು ಕೆಡವಬೇಕು’ ಎಂದು ಪ್ರತಿಭಟನೆ ವೇಳೆ ಒತ್ತಾಯಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ