AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೂಗಲ್​ ಮ್ಯಾಪ್​ ಫಾಲೋ ಮಾಡುತ್ತಾ ಹೋಗಿ ಕಾರು ಸಮೇತ ಕಾಲುವೆಗೆ ಬಿದ್ದ ಕುಟುಂಬ

ದೇಶದ ಯಾವ ಮೂಲೆಗೆ ಹೋಗಬೇಕಾದರೂ ಜನರಿಗಿಂತ ನಾವು ಗೂಗಲ್​ ಮ್ಯಾಪ್​ ಅನ್ನೇ ಹೆಚ್ಚು ನಂಬುತ್ತೇವೆ. ಅದು ಹೇಳುವುದೆಲ್ಲವೂ ಸತ್ಯ ಎಂದು ಭಾವಿಸುತ್ತೇವೆ. ಅದು ತೋರಿಸುವ ದಾರಿ ಸರಿ ಇದ್ದರೂ ಆ ಹಾದಿಯ ಸ್ಥಿತಿ ಹೇಗಿದೆ ಎಂಬುದರ ಅರಿವಿರುವುದಿಲ್ಲ.

ಗೂಗಲ್​ ಮ್ಯಾಪ್​ ಫಾಲೋ ಮಾಡುತ್ತಾ ಹೋಗಿ ಕಾರು ಸಮೇತ ಕಾಲುವೆಗೆ ಬಿದ್ದ ಕುಟುಂಬ
ಕಾರು
ನಯನಾ ರಾಜೀವ್
|

Updated on:Sep 11, 2024 | 1:58 PM

Share

ಗೂಗಲ್​ ಮ್ಯಾಪ್​ ಸೂಚನೆಯಂತೆ ಶಾರ್ಟ್​ಕಟ್ ದಾರಿ ಇದೆ ಎಂದು ಹೋಗಿ ಕಾರೊಂದು ಕಾಲುವೆಗೆ ಉರುಳಿ ಬಿದ್ದಿರುವ ಘಟನೆ ಕೇರಳದಲ್ಲಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ವಯನಾಡ್‌ನಿಂದ ಅಲಪ್ಪುಳಕ್ಕೆ ಕುಟುಂಬವನ್ನು ಹೊತ್ತೊಯ್ಯುತ್ತಿದ್ದ ವಾಹನವು ಪೂಂಗೋಡ್ ಕರ್ವ್‌ನಲ್ಲಿ ತೀಕ್ಷ್ಣವಾದ ತಿರುವಿನಲ್ಲಿ ಚಲಿಸುವಾಗ ಪಲ್ಟಿಯಾಗಿದೆ.

ಸ್ಥಳೀಯರು ಕ್ರೇನ್ ಬಳಸಿ ಕಾರನ್ನು ಕಾಲುವೆಯಿಂದ ಮೇಲಕ್ಕೆತ್ತಿದರು. ಮಲಪ್ಪುರಂನ ಚಾಲಕರು ಸಾಮಾನ್ಯವಾಗಿ ಕುನ್ನಂಕುಲಂ ರಸ್ತೆಯಲ್ಲಿ ಹೋಗುವ ಬದಲು ವರವೂರ್ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ. ಆದರೆ, ಕುನ್ನಂಕುಲಂ-ವರವೂರ್ ರಸ್ತೆಯಲ್ಲಿರುವ ತಿರುವುಗಳು ಸವಾಲಿನಿಂದ ಕೂಡಿದ್ದು, ಭಯ ಹುಟ್ಟಿಸುವಂತಿದೆ.

ಮತ್ತಷ್ಟು ಓದಿ: Kerala: ಗೂಗಲ್ ಮ್ಯಾಪ್ ನಂಬಿ ಕಾರು ಓಡಿಸಿ, ತುಂಬಿ ಹರಿಯುತ್ತಿದ್ದ ಹಳ್ಳದೊಳಗೆ ಮುಳುಗಿದ ಕಾರು

ವಯನಾಡಿನಲ್ಲೂ ಅಂಥದ್ದೇ ಘಟನೆ ನಡೆದಿತ್ತು ಗೂಗಲ್​ ಮ್ಯಾಪ್ ನೋಡುತ್ತಾ ಕಾರೊಂದು ರಸ್ತೆಯಿಂದ ಕೆಳಗೆ ಬಿದ್ದಿತ್ತು, ಗಾಯಗೊಂಡವರನ್ನು ಚಿಕ್ಕಮಗಳೂರು ನಿವಾಸಿಗಳಾದ ಬೆನೆಡಿಕ್ಟ್ (67), ಡಿಸೋಜಾ (60), ಲಾರೆನ್ಸ್ (62) ಎಂದು ಗುರುತಿಸಲಾಗಿತ್ತು. ಮೂವರು ಪುಲ್ಪಲ್ಲಿಗೆ ತೆರಳುತ್ತಿದ್ದಾಗ ಅವರ ವಾಹನವು ಪಾದಚಾರಿಗಳಿಗೆ ಮಾತ್ರ ಮೀಸಲಾದ ಕಿರಿದಾದ ಸೇತುವೆಯ ಮೇಲೆ ತಪ್ಪಾಗಿ ಹೋಗಿತ್ತು. ಕಾರು 15 ಅಡಿ ಕೆಳಗೆ ಬಿದ್ದಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:58 pm, Wed, 11 September 24