ವೀರ ಸಾವರ್ಕರ್​ಗೆ ಭಾರತರತ್ನ ನೀಡಲು ಉದ್ಧವ್ ಠಾಕ್ರೆ ಒತ್ತಾಯ

|

Updated on: Dec 17, 2024 | 7:11 PM

ವೀರ ಸಾವರ್ಕರ್ ಒಬ್ಬ ಬರಹಗಾರ ಮತ್ತು ರಾಜಕಾರಣಿಯಾಗಿದ್ದು, ಅವರು ಹಿಂದುತ್ವದ ಸಿದ್ಧಾಂತಕ್ಕೆ ಆಕಾರವನ್ನು ನೀಡಿದರು. ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ಗೆ ಭಾರತ ರತ್ನ ನೀಡಬೇಕೆಂದು ಶಿವಸೇನೆ (ಯುಟಿಬಿ) ನಾಯಕ ಉದ್ಧವ್ ಠಾಕ್ರೆ ಒತ್ತಾಯಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಮಿತ್ರ ಪಕ್ಷವಾಗಿರುವ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಇಂದು ವಿ.ಡಿ. ಸಾವರ್ಕರ್‌ಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಿದ್ದಾರೆ.

ವೀರ ಸಾವರ್ಕರ್​ಗೆ ಭಾರತರತ್ನ ನೀಡಲು ಉದ್ಧವ್ ಠಾಕ್ರೆ ಒತ್ತಾಯ
Uddhav Thackeray Devendra Fadnavis
Follow us on

ಮುಂಬೈ: ವೀರ ಸಾವರ್ಕರ್ ಅವರಿಗೆ ಭಾರತರತ್ನ ನೀಡಿ ಗೌರವಿಸಬೇಕು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ವೀರ ಸಾವರ್ಕರ್ ಮೇಲೆ ಮತ್ತು ಬಿಜೆಪಿ ನೆಹರು ಮೇಲೆ ವಿನಾಕಾರಣ ಆಪಾದನೆ ಮಾಡಬಾರದು. ಈ ಮಹಾಪುರುಷರ ಬಗ್ಗೆ ಮಾತನಾಡುವುದನ್ನು ಬಿಟ್ಟು, ಭವಿಷ್ಯದ ಬಗ್ಗೆ ಮಾತನಾಡಬೇಕು. ವೀರ ಸಾವರ್ಕರ್‌ಗೆ ಬಿಜೆಪಿ ಭಾರತ ರತ್ನ ನೀಡುವುದು ಯಾವಾಗ? ದೇವೇಂದ್ರ ಫಡ್ನವಿಸ್ ಕೂಡ 2019ರಲ್ಲಿ ಈ ಬಗ್ಗೆ ಪತ್ರ ಬರೆದಿದ್ದರು, ಅದು ಏನಾಯಿತು? ಆಗಲೂ ನರೇಂದ್ರ ಮೋದಿಯವರೇ ಪ್ರಧಾನಿಯಾಗಿದ್ದರು ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.

ಈ ಹಿಂದೆ ಡಿಸೆಂಬರ್ 14ರಂದು ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ರಾವತ್ ಕೂಡ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಿದ್ದರು. ಕಾಂಗ್ರೆಸ್ ಯಾವಾಗಲೂ ವೀರ ಸಾವರ್ಕರ್ ವಿರುದ್ಧವಾಗಿದೆ. ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರ ಕಾಂಗ್ರೆಸ್ ತನ್ನ ಮರಾಠಿ ಮಾಸಿಕ ಪತ್ರಿಕೆಯಾದ ‘ಶಿಡೋರಿ’ಯಲ್ಲಿ ವೀರ ಸಾವರ್ಕರ್​ಗೆ ‘ಮಾಫಿ ವೀರ್’ ಎಂದು ಬರೆದಿತ್ತು.

ಇದನ್ನೂ ಓದಿ: ಸಂವಿಧಾನ, ವೀರ ಸಾವರ್ಕರ್, ಅದಾನಿ, ಮನುಸ್ಮೃತಿ ಬಗ್ಗೆ ಲೋಕಸಭೆ ಅಧಿವೇಶನದಲ್ಲಿ ಅಬ್ಬರಿಸಿದ ರಾಹುಲ್ ಗಾಂಧಿ

ಕಾಂಗ್ರೆಸ್ ಅನ್ನು ಗುರಿಯಾಗಿಸಿ ಮಾತನಾಡಿದ ಮಾಜಿ ಸಿಎಂ ಉದ್ಧವ್ ಠಾಕ್ರೆ, “ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ನಾನು ಸಲಹೆ ನೀಡುತ್ತೇನೆ. ಕಾಂಗ್ರೆಸ್ ವೀರ ಸಾವರ್ಕರ್ ಅವರನ್ನು ಗುರಿಯಾಗಿಸುವುದು ನಿಲ್ಲಿಸಬೇಕು ಮತ್ತು ಬಿಜೆಪಿ ನೆಹರೂ ಅವರನ್ನು ಗುರಿಯಾಗಿಸುವುದು ನಿಲ್ಲಿಸಬೇಕು. ಭೂತಕಾಲದ ಬಗ್ಗೆ ಯೋಚಿಸುವ ಬದಲು ನಾವು ಭವಿಷ್ಯವನ್ನು ನಿರ್ಮಿಸುವತ್ತ ಗಮನ ಹರಿಸಬೇಕು. ಇಬ್ಬರೂ ನಾಯಕರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಅವರ ಕಾಲದಲ್ಲಿ ಮಾಡಿರುವುದು ಅವರ ಯುಗಕ್ಕೆ ಸೂಕ್ತವಾಗಿದೆ. ಆದ್ದರಿಂದ ಪ್ರಧಾನಿ ಮೋದಿ ಅವರು ನೆಹರೂ ಹೆಸರನ್ನು ಪದೇ ಪದೇ ಹೇಳುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ವೀರ ಸಾವರ್ಕರ್​ ಭಾರತದ ಹೆಮ್ಮೆಯ ಪುತ್ರ ಎಂದಿದ್ದ ಇಂದಿರಾ ಗಾಂಧಿ; ರಾಹುಲ್ ಗಾಂಧಿ ಟೀಕೆಗೆ ಬಿಜೆಪಿ ತಿರುಗೇಟು

ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕೆಂಬ ಠಾಕ್ರೆ ಅವರ ಬೇಡಿಕೆಗೆ ರಾಜಕೀಯ ಮಿತ್ರರು ಮತ್ತು ಪ್ರತಿಸ್ಪರ್ಧಿಗಳಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮಹಾರಾಷ್ಟ್ರದಲ್ಲಿ ಠಾಕ್ರೆಯ ಪ್ರಮುಖ ಮಿತ್ರ ಪಕ್ಷವಾಗಿರುವ ಶರದ್ ಪವಾರ್ ಅವರ ಎನ್‌ಸಿಪಿ ಈ ವಿಷಯದ ಬಗ್ಗೆ ಮೌನ ವಹಿಸಿದೆ. ಏಕನಾಥ್ ಶಿಂಧೆ ಅವರ ಶಿವಸೇನೆ ಠಾಕ್ರೆ ಅವರ ನಿಲುವನ್ನು ಟೀಕಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ