ಸಂವಿಧಾನ, ವೀರ ಸಾವರ್ಕರ್, ಅದಾನಿ, ಮನುಸ್ಮೃತಿ ಬಗ್ಗೆ ಲೋಕಸಭೆ ಅಧಿವೇಶನದಲ್ಲಿ ಅಬ್ಬರಿಸಿದ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಈ ಹಿಂದೆ ವೀರ ಸಾವರ್ಕರ್ ಬಗ್ಗೆ ಮಾತನಾಡಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈಗಾಗಲೇ ಲಕ್ನೋ ಕೋರ್ಟ್ ರಾಹುಲ್ ಗಾಂಧಿಗೆ ಈ ಬಗ್ಗೆ ಸಮನ್ಸ್ ಕೂಡ ನೀಡಿದೆ. ಇದರ ನಡುವೆ ಇಂದು ಲೋಕಸಭಾ ಅಧಿವೇಶನದಲ್ಲಿ ಮತ್ತೊಮ್ಮೆ ರಾಹುಲ್ ಗಾಂಧಿ ವೀರ ಸಾವರ್ಕರ್ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಹಾಗೇ, ಬಿಜೆಪಿ ಸರ್ಕಾರಕ್ಕೂ ಏಕಲವ್ಯನ ಬೆರಳು ಕತ್ತರಿಸಿದ ದ್ರೋಣಾಚಾರ್ಯರಿಗೂ ವ್ಯತ್ಯಾಸವಿಲ್ಲ ಎಂದು ಟೀಕಿಸಿದ್ದಾರೆ. ಇದರ ಜೊತೆ ಅದಾನಿ ಬಗ್ಗೆಯೂ ರಾಹುಲ್ ಗಾಂಧಿ ಮಾತನಾಡಿದ್ದಾರೆ.
ನವದೆಹಲಿ: ಲೋಕಸಭೆ ಕಲಾಪದಲ್ಲಿ ಸಂವಿಧಾನದ ಚರ್ಚೆಯ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿಯು “ಸಂವಿಧಾನಕ್ಕಿಂತ ಮನುಸ್ಮೃತಿಯೇ ಮುಖ್ಯ” ಎಂದು ಪರಿಗಣಿಸುತ್ತದೆ ಎಂದು ಆರೋಪಿಸಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರವು “ದೇಶದ ಯುವಕರ ಹೆಬ್ಬೆರಳು ಕತ್ತರಿಸುತ್ತಿದೆ” ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಭಾರತದ ಸಂವಿಧಾನದ 75 ವರ್ಷಗಳ ಚರ್ಚೆಯ ಸಂದರ್ಭದಲ್ಲಿ ಸದನವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತೀಯ ಮಹಾಕಾವ್ಯ ಮಹಾಭಾರತದ ಉದಾಹರಣೆಯನ್ನು ಉಲ್ಲೇಖಿಸಿದ್ದಾರೆ. ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಕೋರಿದ್ದರು. ದ್ರೋಣಾಚಾರ್ಯರು ಏಕಲವ್ಯನ ಬೆರಳುಗಳನ್ನು ಕತ್ತರಿಸುವಂತೆ ಮಾಡಿದಂತೆಯೇ, ಮೋದಿ ಸರ್ಕಾರ ದೇಶದ ಯುವಕರ ಹೆಬ್ಬೆರಳನ್ನು ಕತ್ತರಿಸಿದೆ ಎಂದು ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ.
#WATCH | During discussion on 75th anniversary of adoption of the Constitution of India, Lok Sabha LoP Rahul Gandhi says, “I want to start my speech by quoting what the Supreme Leader, not of the BJP but of the modern interpretation of the ideas of the RSS has to say about the… pic.twitter.com/eS7HGR8Ivp
— ANI (@ANI) December 14, 2024
ಮನುಸ್ಮೃತಿ ಬಗ್ಗೆ ವಾಗ್ದಾಳಿ:
ವೀರ ಸಾವರ್ಕರ್, ಮನುಸ್ಮೃತಿ ಬಗ್ಗೆ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಸದನದಲ್ಲಿ ವೀರ ಸಾವರ್ಕರ್ ಬಗ್ಗೆಯೂ ಮಾತನಾಡಿದ ರಾಹುಲ್ ಗಾಂಧಿ, ವೀರ ಸಾವರ್ಕರ್ ಮನುಸ್ಮೃತಿಯೇ ಕಾನೂನು ಎಂದು ಪರಿಗಣಿಸಿದ್ದರು. ಮನುಸ್ಮೃತಿಯು ನಮ್ಮ ಹಿಂದೂ ರಾಷ್ಟ್ರಕ್ಕೆ ವೇದಗಳ ನಂತರ ಹೆಚ್ಚು ಪೂಜಿಸಬಹುದಾದ ಗ್ರಂಥವಾಗಿದೆ. ನಮ್ಮ ಪ್ರಾಚೀನ ಕಾಲವು ನಮ್ಮ ಸಂಸ್ಕೃತಿ, ಪದ್ಧತಿಗಳು, ಚಿಂತನೆ ಮತ್ತು ಆಚರಣೆಗೆ ಆಧಾರವಾಗಿದೆ. ಈ ಪುಸ್ತಕವು ಶತಮಾನಗಳಿಂದ ನಮ್ಮ ರಾಷ್ಟ್ರದ ಆಧ್ಯಾತ್ಮಿಕ ಮತ್ತು ದೈವಿಕ ಮೆರವಣಿಗೆಯನ್ನು ಕ್ರೋಡೀಕರಿಸಿದೆ. ಇಂದು ಮನುಸ್ಮೃತಿಯೇ ಕಾನೂನಾಗಿದೆ ಎಂಬುದು ಸಾವರ್ಕರ್ ಅವರದೇ ಮಾತುಗಳು ಎಂದು ರಾಹುಲ್ ಗಾಂಧಿ ಇಂದು ಹೇಳಿದ್ದಾರೆ.
ಇದನ್ನೂ ಓದಿ: ಜೋ ಬೈಡೆನ್‌ನಂತೆ ಪ್ರಧಾನಿ ಮೋದಿಗೂ ನೆನಪಿನ ಶಕ್ತಿಯ ಸಮಸ್ಯೆಯಿದೆ; ರಾಹುಲ್ ಗಾಂಧಿ ಟೀಕೆ
ವೀರ ಸಾವರ್ಕರ್ ಅವರ ಈ ಮಾತುಗಳನ್ನು ಬಿಜೆಪಿ ನಾಯಕರು ಒಪ್ಪುತ್ತಾರೆಯೇ? ಎಂದು ರಾಹುಲ್ ಗಾಂಧಿ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ. ಏಕೆಂದರೆ ನೀವು ಸಂವಿಧಾನವನ್ನು ರಕ್ಷಿಸುವ ಬಗ್ಗೆ ಸಂಸತ್ತಿನಲ್ಲಿ ಮಾತನಾಡುವಾಗ, ನೀವು ಸಾವರ್ಕರ್ ಅವರನ್ನು ಅಪಹಾಸ್ಯ ಮಾಡುತ್ತಿದ್ದೀರಿ ಎಂದರ್ಥ. ನೀವು ಸಾವರ್ಕರ್ ಅವರನ್ನು ನಿಂದಿಸುತ್ತಿದ್ದೀರಿ, ಸಾವರ್ಕರ್ ಅವರನ್ನು ಮಾನಹಾನಿ ಮಾಡುತ್ತಿದ್ದೀರಿ ಎಂದು ಅರ್ಥವಾಗುತ್ತದೆ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
I want to start my speech by quoting your Supreme Leader Savarkar and his ideas on the Constitution of India and how he thought India should be run.
Savarkar writes:
”The worst thing about the Constitution of India is that there is nothing Indian about it. Manusmriti is that… pic.twitter.com/JD14AFU7zb
— Congress (@INCIndia) December 14, 2024
ಅದಾನಿ ಕುರಿತು ತರಾಟೆ:
ಲೋಕಸಭೆಯಲ್ಲಿ ಅದಾನಿಯನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಕೇಂದ್ರ ಸರ್ಕಾರವು ಕೈಗಾರಿಕೋದ್ಯಮಿಗೆ ವಿವಿಧ ಕ್ಷೇತ್ರಗಳನ್ನು ಹಸ್ತಾಂತರಿಸುವ ಮೂಲಕ ದ್ರೋಣಾಚಾರ್ಯರಂತೆ ಯುವಕರ ಹೆಬ್ಬೆರಳನ್ನು ಕತ್ತರಿಸುತ್ತಿದೆ ಎಂದು ರಾಹುಲ್ ಗಾಂಧಿ ಇಂದು ಮತ್ತೆ ಅದಾನಿಯನ್ನು ತರಾಟೆಗೆ ತೆಗೆದುಕೊಂಡರು. ನೀವು ಧಾರಾವಿಯನ್ನು ಅದಾನಿಗೆ ಹಸ್ತಾಂತರಿಸಿ ಉದ್ಯಮಿಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಹೆಬ್ಬೆರಳನ್ನು ಕತ್ತರಿಸಿದ್ದೀರಿ. ನೀವು ಭಾರತದ ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ರಕ್ಷಣಾ ಉದ್ಯಮವನ್ನು ಅದಾನಿಗೆ ಹಸ್ತಾಂತರಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಭಾರತದ ಎಲ್ಲಾ ನ್ಯಾಯಯುತ ವ್ಯವಹಾರಗಳ ಹೆಬ್ಬೆರಳುಗಳನ್ನು ಕತ್ತರಿಸುತ್ತೀರಿ ಎಂದು ರಾಹುಲ್ ಟೀಕಿಸಿದ್ದಾರೆ.
ಇದನ್ನೂ ಓದಿ: ವೀರ ಸಾವರ್ಕರ್ ಕುರಿತು ವಿವಾದಾತ್ಮಕ ಹೇಳಿಕೆ; ರಾಹುಲ್ ಗಾಂಧಿಗೆ ಲಕ್ನೋ ಕೋರ್ಟ್ ಸಮನ್ಸ್ ಜಾರಿ
ಲ್ಯಾಟರಲ್ ಎಂಟ್ರಿ ಮೂಲಕ, ನೀವು ಯುವಕರು, ಒಬಿಸಿಗಳು ಮತ್ತು ಎಸ್‌ಸಿಗಳ ಹೆಬ್ಬೆರಳನ್ನು ಕತ್ತರಿಸುತ್ತಿದ್ದೀರಿ. ಏಕಲವ್ಯ ಹೇಗೆ ಅಭ್ಯಾಸ ಮಾಡುತ್ತಿದ್ದರೋ ಅದೇ ರೀತಿ ಯುವಕರು ಪರೀಕ್ಷೆಗೆ ಅಭ್ಯಾಸ ಮಾಡುತ್ತಾರೆ. ಆದರೆ, ನೀವು ಅಗ್ನಿವೀರ್ ಜಾರಿಗೆ ತರುವ ಮೂಲಕ ಆ ಯುವಕರ ಹೆಬ್ಬೆರಳುಗಳನ್ನು ಕತ್ತರಿಸಿದ್ದೀರಿ. ಪೇಪರ್ ಸೋರಿಕೆ ಮಾಡುವಾಗ ಯುವಕರ ಹೆಬ್ಬೆರಳು ಕತ್ತರಿಸುತ್ತೀರಿ. ನೀವು ಅದಾನಿ ಮತ್ತು ಅಂಬಾನಿಗೆ ಲಾಭವನ್ನು ನೀಡಿದಾಗ ನೀವು ರೈತರ ಹೆಬ್ಬೆರಳು ಕತ್ತರಿಸುತ್ತೀರಿ ಎಂದು ರಾಹುಲ್ ಗಾಂಧಿ ಕಲಾಪದಲ್ಲಿ ಅಬ್ಬರಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Sat, 14 December 24