ಕನ್ನಡದ ನಂಬರ್ 1 ನ್ಯೂಸ್ ಚಾನಲ್​ಗೆ ಪ್ರಶಸ್ತಿಯ ಗರಿ, ಟಿವಿ9 ಕನ್ನಡದ ಮುಡಿ ಸೇರಿದ ಬರೋಬ್ಬರಿ 10 ರಾಷ್ಟ್ರೀಯ ಪ್ರಶಸ್ತಿ

ಟಿವಿ9 ಕನ್ನಡ, 18 ವರ್ಷಗಳಿಂದ ಕನ್ನಡಿಗರ ಮನೆಮಾತಾಗಿರುವ ವಿಶ್ವಾಸಾರ್ಹ ನ್ಯೂಸ್ ಚಾನೆಲ್, ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದು ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ದೈನಂದಿನ ಸುದ್ದಿ ಬುಲೆಟಿನ್‌ಗಳು, ಪ್ರಚಲಿತ ವಿದ್ಯಾಮಾನಗಳ ವಿಶ್ಲೇಷಣೆ, ಸಾಮಾಜಿಕ ಜಾಗೃತಿ ಅಭಿಯಾನಗಳು, ಅತ್ಯುತ್ತಮ ನಿರೂಪಣೆ ಮತ್ತು ತನಿಖಾ ವರದಿಗಳಿಗಾಗಿ ಒಟ್ಟು 10 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇದು ಟಿವಿ9 ಕನ್ನಡದ ಅತ್ಯುತ್ತಮ ಸುದ್ದಿ ವರದಿ ಮತ್ತು ಸಮಾಜಮುಖಿ ಕಾರ್ಯಗಳನ್ನು ಪ್ರತಿಬಿಂಬಿಸುತ್ತದೆ.

ಕನ್ನಡದ ನಂಬರ್ 1 ನ್ಯೂಸ್ ಚಾನಲ್​ಗೆ ಪ್ರಶಸ್ತಿಯ ಗರಿ, ಟಿವಿ9 ಕನ್ನಡದ ಮುಡಿ ಸೇರಿದ ಬರೋಬ್ಬರಿ 10 ರಾಷ್ಟ್ರೀಯ ಪ್ರಶಸ್ತಿ
ಟಿವಿ9 ಕನ್ನಡ
Follow us
ವಿವೇಕ ಬಿರಾದಾರ
| Updated By: ಡಾ. ಭಾಸ್ಕರ ಹೆಗಡೆ

Updated on:Dec 14, 2024 | 4:46 PM

18 ವರ್ಷಗಳಿಂದ ನಂಬರ್ 1 ಸ್ಥಾನದಲ್ಲಿರುವ ಕನ್ನಡಿಗರ ಮನೆಮಾತಾಗಿರುವ ಅತ್ಯಂತ ವಿಶ್ವಾಸಾರ್ಹ ನ್ಯೂಸ್ ಚಾನಲ್ ಟಿವಿ9 ಕನ್ನಡಕ್ಕೆ ರಾಷ್ಟ್ರೀಯ ಪ್ರಶಸ್ತಿಗಳ ಗೌರವ ಸಿಕ್ಕಿದೆ. ಬರೋಬ್ಬರಿ 10 ವಿಭಾಗಗಳಲ್ಲಿ ಟಿವಿ9 ಕನ್ನಡ ಚಾನಲ್ ನ್ಯಾಷಿನಲ್‌ ಟೆಲಿವಿಷನ್ ಅವಾರ್ಡ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ದೆಹಲಿಯ ಖಾಸಗಿ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಟಿವಿ9 ಕನ್ನಡಕ್ಕೆ 10 ವಿಭಾಗಗಳಲ್ಲಿ ಪ್ರಶಸ್ತಿ

  1. ಡೈಲಿ ನ್ಯೂಸ್ ಬುಲೆಟಿನ್ ವಿಭಾಗದಲ್ಲಿ – ಸಿದ್ದು ಲೆಕ್ಕ ಎಂಬ ಶೀರ್ಷಿಕೆಯಲ್ಲಿ ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಪ್ರಸಾರ ಮತ್ತು ವಿಶ್ಲೇಷಣೆಗಾಗಿ ಪ್ರಶಸ್ತಿ
  2. ಪ್ರಚಲಿತ ವಿದ್ಯಾಮಾನಗಳ ವಿಭಾಗದಲ್ಲಿ – ಪ್ರತಿದಿನ ಸಂಜೆ ಏಳು ಗಂಟೆಗೆ ಪ್ರಸಾರವಾಗುವ ರಾಜಕಾರಣದ ಒಳಸುಳಿಗಳನ್ನು ಬಿತ್ತರಿಸುವ ಕಾರ್ಯಕ್ರಮ ‘ಇನ್ ಸೈಡ್’ ಸುದ್ದಿ ಕಾರ್ಯಕ್ರಮಕ್ಕೆ ಪ್ರಶಸ್ತಿ ಗರಿ.
  3. ಸಾಮಾಜಿಕ/ಪರಿಸರ ಜಾಗೃತಿ/ಸಾಮಾಜಿಕ ಅಭಿವೃದ್ಧಿ ಅಭಿಯಾನ ವಿಭಾಗದಲ್ಲಿ – ಮಂಡ್ಯದಲ್ಲಿ ನಡೆದ ಭ್ರೂಣ ಹತ್ಯೆ ಪ್ರಕರಣವನ್ನು ಬಯಲಿಗೆಳೆದು ನಿರಂತರ ವರದಿ ಮಾಡಲಾಗಿತ್ತು, ರಾಷ್ಟ್ರಮಟ್ಟದಲ್ಲಿ ಈ ವರದಿ ಚರ್ಚೆಯಾಗಿತ್ತು.
  4. ಅತ್ಯುತ್ತಮ ಪ್ರೈಮ್ ಟೈಮ್ ನ್ಯೂಸ್ ಶೋ ಕನ್ನಡ ವಿಭಾಗದಲ್ಲಿ ರಾತ್ರಿ 9 ಗಂಟೆಯ ನಿಮ್ಮ ನ್ಯೂಸ್ ರೂಂ ಶೋಗೆ ಪ್ರಶಸ್ತಿ ದೊರಕಿದೆ.
  5. ಅತ್ಯುತ್ತಮ ನಿರೂಪಕರ ವಿಭಾಗದಲ್ಲಿ – ಟಿವಿ9 ರಂಗನಾಥ್ ಭಾರಧ್ವಾಜ್
  6. ಉತ್ತಮ ರಿಪೋರ್ಟರ್ ವಿಭಾಗದಲ್ಲಿ ಟವಿನೈನ್ ಕ್ರೈಂ ವಿಭಾಗ ಮುಖ್ಯಸ್ಥರಾಗಿರುವ ಹೆಚ್.ವಿ ಕಿರಣ್
  7. ಪ್ರೈಂ ಟೈಂ ನ್ಯೂಸ್​​ನಲ್ಲಿ ಅತ್ಯುತ್ತಮ ನ್ಯೂಸ್ ಆಂಕರ್ ವಿಭಾಗದಲ್ಲಿ ಮಾಲತೇಶ್ ಜಾನಗಲ್ ಅವರಿಗೆ ಎನ್​ಟಿ ಅರ್ವಾರ್ಡ್​ಗೆ ಭಾಜನರಾಗಿದ್ದಾರೆ.
  8. ನ್ಯೂಸ್ ಚಾನೆಲ್ ಗ್ರಾಫಿಕ್ಸ್ ಅತ್ಯುತ್ತಮ ಬಳಕೆ ವಿಭಾಗದಲ್ಲಿ – ನಿಮ್ಮ ತೀರ್ಪು ನಮ್ಮ ಜೊತೆ ಕಾರ್ಯಕ್ರಮಕ್ಕೆ ಅತ್ಯುತ್ತಮ ಗ್ರಾಫಿಕ್ಸ್ ಗಾಗಿ ಪ್ರಶಸ್ತಿಯ ಗರಿ
  9. ಕನ್ನಡದ ಅತ್ಯುತ್ತಮ ತನಿಖೆ ವಿಭಾಗದಲ್ಲಿ – KIABD ಪರಿಹಾರ ಹಗರಣ ಪ್ರಸಾರ ಮಾಡಿ ಸರಕಾರದ ಗಮನ ಸೆಳೆದ ಪರಿಣಾಮ ಟಿವಿನೈನ್ ಮೂರ್ತಿಯವರಿಗೆ ಎನ್ ಟಿ ಅವಾರ್ಡ್ ಗೆ ಲಭಿಸಿದೆ.
  10. ಅತ್ಯುತ್ತಮ ತನಿಖಾ ಸ್ಟೋರಿ ವಿಭಾಗದಲ್ಲಿ – ಬೆಸ್ಕಾಂ ಮೃತ್ಯು ಕೂಪ ಎಂಬ ಸುದ್ದಿ ಪ್ರಸಾರ ಮಾಡಿದ್ದ ಟಿವಿನೈನ್ ಬೆಸ್ಕಾಂ ನಿರ್ಲಕ್ಷ್ಯದಿಂದ ತಾಯಿ ಮತ್ತು ಮಗುವಿನ ಸಾವು ನಪ್ಪಿದ್ದ ಕಾರ್ಯಕ್ರಮದಿಂದ ಸರಕಾರ ಕಣ್ಣುತೆರೆಸುವ ಕೆಲಸ  ಮಾಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:23 pm, Sat, 14 December 24

ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಶಿಕ್ಷೆ ಕೊಡಿಸಲು ಜೈಲಿಂದ ತಪ್ಪಿಸಿಕೊಂಡ ಚೈತ್ರಾ-ತ್ರಿವಿಕ್ರಂ
ಶಿಕ್ಷೆ ಕೊಡಿಸಲು ಜೈಲಿಂದ ತಪ್ಪಿಸಿಕೊಂಡ ಚೈತ್ರಾ-ತ್ರಿವಿಕ್ರಂ
ಸತತ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ: ಗಿನ್ನಿಸ್​ ದಾಖಲೆ
ಸತತ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ: ಗಿನ್ನಿಸ್​ ದಾಖಲೆ
ನಟ ದರ್ಶನ್ 45 ದಿನಗಳಿಂದ ಹೊರಗಿದ್ದರೂ ಭೇಟಿಯ ಪ್ರಯತ್ನ ಮಾಡಿಲ್ಲ
ನಟ ದರ್ಶನ್ 45 ದಿನಗಳಿಂದ ಹೊರಗಿದ್ದರೂ ಭೇಟಿಯ ಪ್ರಯತ್ನ ಮಾಡಿಲ್ಲ
ಗದಗ: ಗೃಹಲಕ್ಷ್ಮಿ ಹಣದಿಂದ ಬೋರ್​ವೆಲ್ ಕೊರೆಸಿದ ಅತ್ತೆ, ಸೊಸೆ!
ಗದಗ: ಗೃಹಲಕ್ಷ್ಮಿ ಹಣದಿಂದ ಬೋರ್​ವೆಲ್ ಕೊರೆಸಿದ ಅತ್ತೆ, ಸೊಸೆ!
ಇಂಥ ಎಫ್​ಐಆರ್​ಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲ್ಲ: ಶೆಟ್ಟರ್
ಇಂಥ ಎಫ್​ಐಆರ್​ಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲ್ಲ: ಶೆಟ್ಟರ್
ಪತ್ನಿ ಮತ್ತು ಮಕ್ಕಳು ಓಡಿ ಬಂದು ಅರ್ಜುನ್​ರನ್ನು ತಬ್ಬಿಕೊಂಡರು!
ಪತ್ನಿ ಮತ್ತು ಮಕ್ಕಳು ಓಡಿ ಬಂದು ಅರ್ಜುನ್​ರನ್ನು ತಬ್ಬಿಕೊಂಡರು!
ಚಂಚಲಗೂಡ ಜೈಲಿನಿಂದ ಬಿಡುಗಡೆ ಆಗಿ ಮನೆಯತ್ತ ಹೊರಟ ಅಲ್ಲು ಅರ್ಜುನ್
ಚಂಚಲಗೂಡ ಜೈಲಿನಿಂದ ಬಿಡುಗಡೆ ಆಗಿ ಮನೆಯತ್ತ ಹೊರಟ ಅಲ್ಲು ಅರ್ಜುನ್