ಮೊದಲು ಬಾಳ್ ಠಾಕ್ರೆಯವರ ಫೋಟೋ ಕದ್ದರು, ಈಗ ಬಿಜೆಪಿ ಮತ್ತೊಬ್ಬ ಠಾಕ್ರೆಯನ್ನು ಕದಿಯಲು ಯತ್ನಿಸುತ್ತಿದೆ: ಉದ್ಧವ್ ಠಾಕ್ರೆ

ಮೊದಲು ಬಾಳ್ ಠಾಕ್ರೆಯವರ ಫೋಟೋ ಕದ್ದರು, ಪರವಾಗಿಲ್ಲ. ಇವತ್ತು ಮತ್ತೊಬ್ಬ ಠಾಕ್ರೆಯನ್ನು ಕದಿಯಲು ಯತ್ನಿಸುತ್ತಿದ್ದಾರೆ. ತೆಗೆದುಕೊಳ್ಳಿ. ಇಲ್ಲಿ ನಾನು ಮತ್ತು ನನ್ನ ಜನರೇ ಸಾಕು" ಎಂದು ಮರಾಠವಾಡ ಪ್ರದೇಶದ ನಾಂದೇಡ್ ಮತ್ತು ಹಿಂಗೋಲಿ ಜಿಲ್ಲೆಗಳ ಎರಡು ದಿನದ ಪ್ರವಾಸ ಮುಕ್ತಾಯಗೊಳಿಸಿ ಮಾತನಾಡಿದ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಮೊದಲು ಬಾಳ್ ಠಾಕ್ರೆಯವರ ಫೋಟೋ ಕದ್ದರು, ಈಗ ಬಿಜೆಪಿ ಮತ್ತೊಬ್ಬ ಠಾಕ್ರೆಯನ್ನು ಕದಿಯಲು ಯತ್ನಿಸುತ್ತಿದೆ: ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 19, 2024 | 9:06 PM

ದೆಹಲಿ ಮಾರ್ಚ್ 19: ಮುಂಬರುವ ಲೋಕಸಭೆ ಚುನಾವಣೆಯಲ್ಲಿ(Lok sabha Election) ತನ್ನ ಗೆಲುವನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಠಾಕ್ರೆಯನ್ನು ಕದಿಯಲು ಪ್ರಯತ್ನಿಸುತ್ತಿದೆ ಎಂದು ಶಿವಸೇನಾ (UBT) ನಾಯಕ ಉದ್ಧವ್ ಠಾಕ್ರೆ (Uddhav Thackeray) ಹೇಳಿದ್ದಾರೆ. ಮಂಗಳವಾರ ತನ್ನ  ಸಂಬಂಧಿ ಮತ್ತು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬಗ್ಗೆ ಉದ್ಧವ್ ಠಾಕ್ರೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ನಾಂದೇಡ್ ಜಿಲ್ಲೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಬಿಜೆಪಿ ತನ್ನ ಸೋದರ ಸಂಬಂಧಿಯನ್ನು ತೆಗೆದುಕೊಂಡರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಚುನಾವಣೆಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ರಾಜ್ ಠಾಕ್ರೆ ಇಂದು ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಮತ ಪಡೆಯುವುದಿಲ್ಲ ಎಂಬುದು ಬಿಜೆಪಿಗೆ ಚೆನ್ನಾಗಿ ತಿಳಿದಿದೆ. ಜನರು ಇಲ್ಲಿ (ಬಾಳ್) ಠಾಕ್ರೆ ಹೆಸರಿನಲ್ಲಿ ಮತ ಹಾಕುತ್ತಾರೆ. ಈ ಅರಿವು ಬಿಜೆಪಿಯನ್ನು ಹೊರಗಿನಿಂದ ನಾಯಕರನ್ನು ಕದಿಯಲು ಪ್ರಯತ್ನಿಸಲು ಪ್ರೇರೇಪಿಸಿತು. “ಮೊದಲು ಬಾಳ್ ಠಾಕ್ರೆಯವರ ಫೋಟೋ ಕದ್ದರು, ಪರವಾಗಿಲ್ಲ. ಇವತ್ತು ಮತ್ತೊಬ್ಬ ಠಾಕ್ರೆಯನ್ನು ಕದಿಯಲು ಯತ್ನಿಸುತ್ತಿದ್ದಾರೆ. ತೆಗೆದುಕೊಳ್ಳಿ. ಇಲ್ಲಿ ನಾನು ಮತ್ತು ನನ್ನ ಜನರೇ ಸಾಕು” ಎಂದು ಮರಾಠವಾಡ ಪ್ರದೇಶದ ನಾಂದೇಡ್ ಮತ್ತು ಹಿಂಗೋಲಿ ಜಿಲ್ಲೆಗಳ ಎರಡು ದಿನದ ಪ್ರವಾಸ ಮುಕ್ತಾಯಗೊಳಿಸಿ ಮಾತನಾಡಿದ ಉದ್ಧವ್ ಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಗೃಹ ಸಚಿವ ಅಮಿತ್​ ಶಾರನ್ನು ಭೇಟಿಯಾದ ರಾಜ್​ ಠಾಕ್ರೆ

ಅವರ ಹಿಂದುತ್ವದ ನಿಲುವಿನಿಂದ ಇತರ ಧರ್ಮದ ಜನರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದ್ದು ಬಿಜೆಪಿಯಿಂದ ಅವಿಭಜಿತ ಶಿವಸೇನಾದ ಪ್ರತಿಷ್ಠೆ ಹಾಳಾಗುತ್ತಿದೆ ಎಂದರು. “ನಾವು ಬಿಜೆಪಿಯೊಂದಿಗೆ ಇದ್ದಾಗ ಶಿವಸೇನಾದ (ಅವಿಭಜಿತ) ಪ್ರತಿಷ್ಠೆ ಕೆಡುತ್ತಿತ್ತು. ಆದರೆ ನಾವು ಅವರೊಂದಿಗೆ ಸಂಬಂಧವನ್ನು ಕಡಿದುಕೊಂಡ ನಂತರ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯದ ಸದಸ್ಯರು ಕೂಡ ನಮ್ಮ ಹಿಂದುತ್ವ ಸಿದ್ಧಾಂತದೊಂದಿಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳುತ್ತಿದ್ದಾರೆ” ಎಂದಿದ್ದಾರೆ ಉದ್ಧವ್ ಠಾಕ್ರೆ.

ರಾಜ್ ಠಾಕ್ರೆ ಶಿವಸೇನಾದ ನಾಯಕರಾಗಿದ್ದರು. ಆದಾಗ್ಯೂ, 2006 ರಲ್ಲಿ, ಅವರು ಉದ್ಧವ್ ಠಾಕ್ರೆ ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಪಕ್ಷವನ್ನು ತೊರೆದ ನಂತರ ಎಂಎನ್ಎಸ್ ಅನ್ನು ಸ್ಥಾಪಿಸಿದರು. ಎಂಎನ್ಎಸ್ ಆರಂಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿತು. ಅದು ಚುನಾವಣೆಯಲ್ಲಿ ಸೋತಿದ್ದರೂಗ್ಯೂ, ರಾಜ್ ಠಾಕ್ರೆ ಇನ್ನೂ ಜನಪ್ರಿಯರಾಗಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ