ಮುಂಬೈ: ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಲ್ಲಿ (Forest Department) ಕೆಲಸ ಮಾಡುವ ಕೂಲಿಕಾರರ ಗಲಾಟೆ ವೇಳೆ ಗರ್ಭಿಣಿ ಮಹಿಳಾ ಅರಣ್ಯ ರೇಂಜರ್ ಕೂದಲನ್ನು ಹಿಡಿದು ನೆಲಕ್ಕೆ ತಳ್ಳಿ ಮತ್ತು ಥಳಿಸಿರುವ ಅಮಾನವೀಯ ಘಟನೆ ನಡೆದಿದೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಗರ್ಭಿಣಿ (Pregnant) ಫಾರೆಸ್ಟ್ ರೇಂಜರ್ ಮೇಜರ್ ಮೇಲೆ ನಡೆದ ಈ ದೌರ್ಜನ್ಯದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಮಹಿಳೆಯನ್ನು ಈ ರೀತಿ ಅಮಾನುಷವಾಗಿ ನಡೆಸಿಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಪಾಲ್ಸವಡೆ ಮಾಜಿ ಸರಪಂಚ್ ರಾಮಚಂದ್ರ ಗಂಗಾರಾಮ್ ಜಾಂಕರ್ ಮತ್ತು ಅವರ ಪತ್ನಿ ಪ್ರತಿಭಾ ಜಾಂಕರ್ ಅವರು ಗರ್ಭಿಣಿಯಾಗಿದ್ದ ಅರಣ್ಯ ರೇಂಜರ್ಗೆ ಥಳಿಸುತ್ತಿರುವ ಆಘಾತಕಾರಿ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಹಲ್ಲೆ ನಡೆಸಿದ ಇಬ್ಬರನ್ನೂ ಬಂಧಿಸಲಾಗಿದೆ. ಈ ದೃಶ್ಯವನ್ನು ಆ ಮಹಿಳಾ ಫಾರೆಸ್ಟ್ ಆಫೀಸರ್ ಗಂಡ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ರೇಂಜರ್ ಆಗಿರುವ ಮಹಿಳೆಯ ಗಂಡ ಕೂಡ ಅರಣ್ಯ ಇಲಾಖೆಯ ಸಿಬ್ಬಂದಿಯಾಗಿದ್ದಾರೆ.
ಮಹಿಳಾ ಅರಣ್ಯ ರಕ್ಷಕರು ತಮಗೆ ಮಾಹಿತಿ ನೀಡದೆ ಕೂಲಿ ಕಾರ್ಮಿಕರನ್ನು ಬೇರೆ ಜಾಗದಲ್ಲಿ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಸ್ಥಳೀಯ ಅರಣ್ಯ ಸಮಿತಿಯಲ್ಲಿರುವ ಮಾಜಿ ಸರಪಂಚ್ ಜಾಂಕರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ಕಾರ್ಮಿಕರನ್ನು ತಮ್ಮ ಬಳಿ ಕಳುಹಿಸುವಂತೆ ಸೋಮವಾರ ಆಕೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದು ನಿನ್ನೆ ವಾಗ್ವಾದಕ್ಕೆ ಕಾರಣವಾಗಿದ್ದು, ಈ ಸಂದರ್ಭದಲ್ಲಿ ಜಾಂಕರ್ ಮಹಿಳಾ ರೇಂಜರ್ ಮತ್ತು ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ.
The #ForestGuard (lady) in the video was on duty when she was brutally attacked at #Satara for doing her job. FIR has been booked against the accused & they’ve been detained. Hope strict & immediate action is taken against the accused for the barbaric act.pic.twitter.com/XKXUIUjYRd
— Praveen Angusamy, IFS ? (@PraveenIFShere) January 20, 2022
ಮಾಜಿ ಸರಪಂಚ್ ಹಾಗೂ ಅವರ ಹೆಂಡತಿ ಅರಣ್ಯ ರೇಂಜರ್ ಮತ್ತು ಆಕೆಯ ಪತಿಗೆ ಚಪ್ಪಲಿಯಿಂದ ಹೊಡೆಯಲು ಪ್ರಾರಂಭಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಗರ್ಭಿಣಿಯಾಗಿದ್ದ ರೇಂಜರ್ ಈ ವೇಳೆ ನೆಲಕ್ಕೆ ಬಿದ್ದಿದ್ದು, ಆದರೂ ಸುಮ್ಮನಿರದ ಆ ಗಂಡ-ಹೆಂಡತಿ ರೇಂಜರ್ಗೆ ಒದ್ದು, ಥಳಿಸಿದ್ದಾರೆ. 3 ತಿಂಗಳ ಗರ್ಭಿಣಿಯಾಗಿದ್ದ ರೇಂಜರ್ ಕೂದಲನ್ನು ಹಿಡಿದು ಮಾಜಿ ಸರಪಂಚ್ ಅವರ ಪತ್ನಿ ಎಳೆದುಕೊಂಡು ಹೋಗಿ ಜಗಳವಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರದ ಅರಣ್ಯ ಸಚಿವ ಆದಿತ್ಯ ಠಾಕ್ರೆ ಭರವಸೆ ನೀಡಿದ್ದಾರೆ. ಹಾಗೇ, ಅರಣ್ಯ ಇಲಾಖೆ ಸಿಬ್ಬಂದಿಯ ರಕ್ಷಣೆಗೆ ಸರ್ಕಾರ ಸದಾ ಬದ್ಧವಿದೆ ಎಂದಿದ್ದಾರೆ.
ಇದನ್ನೂ ಓದಿ: Shocking News: ಮಾರ್ಗ ಮಧ್ಯೆ ಶಿಫ್ಟ್ ಮುಗಿದಿದ್ದರಿಂದ ವಿಮಾನ ಹಾರಿಸೋದಿಲ್ಲ ಎಂದ ಪೈಲಟ್; ಆಮೇಲೇನಾಯ್ತು?
Shocking Video: ಕೊರೊನಾ ಲಸಿಕೆಯಿಂದ ಪಾರಾಗಲು ಮರವೇರಿ ಕುಳಿತ ವ್ಯಕ್ತಿ; ವೈರಲ್ ವಿಡಿಯೋ ಇಲ್ಲಿದೆ
Published On - 5:57 pm, Thu, 20 January 22