ಕೊಲ್ಕತ್ತಾ: ಕೊಲ್ಕತ್ತಾದ ಏರ್ಪೋರ್ಟ್ನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ (Indigo Flight) ಹಾವು ಕಾಣಿಸಿಕೊಂಡಿದ್ದು, ಕೆಲಕಾಲ ಪ್ರಯಾಣಿಕರು ಕಂಗಾಲಾದ ಘಟನೆ ನಡೆದಿದೆ. ವಿಮಾನ ಟೇಕಾಫ್ ಆಗುವ ಮೊದಲೇ ಈ ಹಾವು (Snake) ಕಣ್ಣಿಗೆ ಬಿದ್ದಿದ್ದರಿಂದ ಕೆಲ ಸಮಯ ವಿಮಾನವನ್ನು ಅಲ್ಲೇ ನಿಲ್ಲಿಸಿ, ಹಾವನ್ನು ತೆಗೆದ ಬಳಿಕ ಟೇಕಾಫ್ ಮಾಡಲಾಯಿತು.
ರಾಯ್ಪುರದಿಂದ ಬಂದು ಕೊಲ್ಕತ್ತಾದಿಂದ ಮುಂಬೈಗೆ ತೆರಳುವ ವಿಮಾನದಲ್ಲಿ ಪ್ರಯಾಣಿಕರೆಲ್ಲರೂ ಹತ್ತಿ ಕುಳಿತಿದ್ದ ವೇಳೆ ವಿಷಯ ಗೊತ್ತಾಗಿದೆ. ವಿಮಾನದಲ್ಲಿ ತಮ್ಮ ಲಗೇಜ್ ಅನ್ನು ಹಾಕುತ್ತಿದ್ದಾಗ ಪ್ರಯಾಣಿಕರೊಬ್ಬರಿಗೆ ಹಾವು ಕಾಣಿಸಿದೆ. ಲಗೇಜ್ ಬ್ಯಾಗೇಜ್ ಬೆಲ್ಟ್ಗೆ ಸುತ್ತಿಕೊಂಡಿದ್ದ ಹಾವನ್ನು ಕಂಡು ಪ್ರಯಾಣಿಕ ಹೌಹಾರಿದ್ದಾರೆ. ಈ ವಿಷಯ ಗೊತ್ತಾದ ಕೂಡಲೇ ವಿಮಾನದ ಸಿಬ್ಬಂದಿ ಎಲ್ಲ ಪ್ರಯಾಣಿರನ್ನೂ ಕೆಳಗೆ ಇಳಿಸಿದ್ದಾರೆ. ಬಳಿಕ ಏರ್ಪೋರ್ಟ್ ಸಿಬ್ಬಂದಿಗೂ ವಿಷಯ ತಿಳಿಸಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಆ ಹಾವನ್ನು ರಕ್ಷಿಸಿ, ತೆಗೆದುಕೊಂಡು ಹೋಗಿದ್ದಾರೆ.
Perhaps the snake wanted an @IndiGo6E flight as a belated 15th birthday offer yesterday.
Thankfully, taken away by the Kolkata forest department. But just look at the speed : ? ✈ pic.twitter.com/5oKg7zBcUX
— Tarun Shukla (@shukla_tarun) August 6, 2021
ಆಗಸ್ಟ್ 5ಕ್ಕೆ ನಡೆದಿರುವ ಈ ಘಟನೆಯ ವಿಡಿಯೋವೊಂದು ಟ್ವಿಟ್ಟರ್ನಲ್ಲಿ ಈಗ ಶೇರ್ ಆಗಿದೆ. ವಿಮಾನದೊಳಗೆ ಹಾವು ಹೇಗೆ ಸೇರಿಕೊಂಡಿತು, ಇದು ವಿಮಾನದ ಸಿಬ್ಬಂದಿಯ ಗಮನಕ್ಕೆ ಯಾಕೆ ಬರಲಿಲ್ಲ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: Shocking News: ಪೊಲೀಸರಂತೆ ಬಸ್ ನಿಲ್ಲಿಸಿ 1.2 ಕೋಟಿ ರೂ. ಕದ್ದೊಯ್ದ ಕಳ್ಳರು; ಸಿನಿಮಾ ಸ್ಟೈಲ್ನಲ್ಲಿ ದರೋಡೆ!
(Shocking News: Snake found onboard Mumbai bound IndiGo flight at Kolkata airport Snake on Plane)
Published On - 3:41 pm, Mon, 9 August 21