ರಾತ್ರಿ ನನ್ನ ಹೆಂಡತಿ ಹಾವಾಗಿ ಕಚ್ಚುತ್ತಾಳೆ; ಪೊಲೀಸರಿಗೆ ವಿಚಿತ್ರ ದೂರು ನೀಡಿದ ಗಂಡ!

ಉತ್ತರ ಪ್ರದೇಶದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ಇಲ್ಲಿನ ವ್ಯಕ್ತಿಯೊಬ್ಬ ಪೊಲೀಸರಿಗೆ ವಿಲಕ್ಷಣವಾದ ದೂರು ನೀಡಿದ್ದಾನೆ. ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ತನ್ನ ಹೆಂಡತಿ ರಾತ್ರಿ ವೇಳೆ ಹಾವಿನಂತೆ ಬದಲಾಗಿ ತನಗೆ ಕಚ್ಚುತ್ತಾಳೆ ಎಂದು ದೂರು ನೀಡಿದ್ದಾನೆ. ರಾತ್ರಿ ವೇಳೆ ಆಕೆ ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಾಳೆ ಎಂದೂ ದೂರಿನಲ್ಲಿ ಹೇಳಿದ್ದಾನೆ. ಇದು ತೀವ್ರ ಚರ್ಚೆಗೆ ಕಾರಣವಾಗಿದೆ.

ರಾತ್ರಿ ನನ್ನ ಹೆಂಡತಿ ಹಾವಾಗಿ ಕಚ್ಚುತ್ತಾಳೆ; ಪೊಲೀಸರಿಗೆ ವಿಚಿತ್ರ ದೂರು ನೀಡಿದ ಗಂಡ!
Uttar Pradesh Man

Updated on: Oct 10, 2025 | 9:57 PM

ನೊಯ್ಡಾ, ಅಕ್ಟೋಬರ್ 8: ಉತ್ತರ ಪ್ರದೇಶದ (Uttar Pradesh) ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಲ್ಲಿ ವಿಚಿತ್ರವಾದ ದೂರು ದಾಖಲಿಸಿದ್ದಾನೆ. ನನ್ನ ಹೆಂಡತಿ ರಾತ್ರಿ ಹಾವಾಗಿ ಬದಲಾಗುತ್ತಾಳೆ, ನನ್ನನ್ನು ಕಚ್ಚುತ್ತಾಳೆ ಎಂದು ಆತ ನೀಡಿದ ದೂರು ಸಂಚಲನ ಮೂಡಿಸಿದೆ. ಹಾವು ಕಡಿತದಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ. ಈ ಮಧ್ಯೆ, ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ವಿಚಿತ್ರ ದೂರು ದಾಖಲಿಸಿದ್ದಾನೆ. ರಾತ್ರಿ ಇದ್ದಕ್ಕಿದ್ದಂತೆ ನನ್ನ ಹೆಂಡತಿ ಹಾವಾಗಿ ಬದಲಾಗುತ್ತಾಳೆ ಎಂದು ಆತ ಆರೋಪಿಸಿದ್ದಾನೆ.

ದೂರು ನೀಡಿದ ಮೀರಜ್ ಉತ್ತರ ಪ್ರದೇಶದ ಮಹ್ಮದಾಬಾದ್ ಜಿಲ್ಲೆಯ ಲೋಡ್ಸಾ ಗ್ರಾಮದ ನಿವಾಸಿ. ಅವರ ಪತ್ನಿ ನಸೀಮುನ್ ವಿರುದ್ಧ ಆತ ವಿಚಿತ್ರ ದೂರು ದಾಖಲಿಸಿದ್ದಾನೆ. ಮೀರಜ್ ನೀಡಿದ ವಿಚಿತ್ರ ದೂರು ಚರ್ಚೆಯ ವಿಷಯವಾಗಿದೆ. ಆ ದೂರಿನಲ್ಲಿ ಆತ “ಸರ್, ನನ್ನ ಹೆಂಡತಿ ನಸೀಮುನ್ ರಾತ್ರಿಯಲ್ಲಿ ಹಾವಾಗಿ ಬದಲಾಗುತ್ತಾಳೆ ಮತ್ತು ನನ್ನನ್ನು ಹಿಂಬಾಲಿಸಿಕೊಂಡು ಬರುತ್ತಾಳೆ. ಅವಳು ರಾತ್ರಿಯಲ್ಲಿ ಹಾವಾಗಿ ಬದಲಾಗುವ ಮೂಲಕ ನನ್ನನ್ನು ಹಲವಾರು ಬಾರಿ ಕಚ್ಚಿದ್ದಾಳೆ. ನನ್ನ ಹೆಂಡತಿ ನನ್ನನ್ನು ಮಾನಸಿಕವಾಗಿ ಹಿಂಸಿಸುತ್ತಾಳೆ. ನಾನು ನಿದ್ದೆ ಮಾಡುವಾಗ ಅವಳು ಯಾವಾಗ ಬೇಕಾದರೂ ನನ್ನನ್ನು ಕೊಲ್ಲಬಹುದು ಎಂಬ ಭಯ ಕಾಡುತ್ತಿದೆ. ಹಾವಿನಂತೆ ಬದಲಾಗುವ ನನ್ನ ಹೆಂಡತಿ ಹಲವಾರು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಆದರೆ, ನಾನು ಪ್ರತಿ ಬಾರಿಯೂ ಆಕೆಯನ್ನು ತಡೆದಿದ್ದೇನೆ” ಎಂದು ಆತ ಹೇಳಿದ್ದಾನೆ.

ಇದನ್ನೂ ಓದಿ: ಬೆಡ್​​ ರೂಮ್ ವಿಡಿಯೋ ಕೇಸಿಗೆ ಸ್ಫೋಟಕ ತಿರುವು: ಹೆಂಡ್ತಿಯ ಅಸಲಿ ಆಟ ಬಿಚ್ಚಿಟ್ಟ ಗಂಡ

ಮೀರಜ್ ನೀಡಿದ ದೂರು ಅಲ್ಲಿದ್ದವರನ್ನು ಬೆಚ್ಚಿಬೀಳಿಸಿತು. ಇದರ ನಂತರ, ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದರು. ಈ ವಿಷಯದ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಳ್ಳಲು ಮತ್ತು ವರದಿಯನ್ನು ಸಲ್ಲಿಸಲು ಆದೇಶಿಸಲಾಗಿದೆ. ಇದು ನಿಜವಾ? ಅಥವಾ ಕಟ್ಟುಕತೆಯಾ? ಎಂಬ ಬಗ್ಗೆ ತನಿಖೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ