ಉತ್ತರ ಪ್ರದೇಶ: ತನ್ನ ಇಡೀ ಕುಟುಂಬವನ್ನೇ ಮನೆಯೊಳಗೆ ಕೂಡಿಹಾಕಿ ಬೆಂಕಿ ಹಚ್ಚಿದ ರೈತ, 6 ಮಂದಿ ಸಾವು
ರೈತರೊಬ್ಬರು ತನ್ನ ಇಡೀ ಕುಟುಂಬವನ್ನೇ ಮನೆಯೊಳಗೆ ಕೂಡಿಹಾಕಿ ಬೆಂಕಿ(Fire) ಹಚ್ಚಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ನಡೆದಿದೆ. ಪರಿಣಾಮ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರೈತನೊಬ್ಬ ತನ್ನ ಇಬ್ಬರು ಮಕ್ಕಳು, ತಾನೂ ಸೇರಿ ಇಡೀ ಕುಟುಂಬವನ್ನು ತನ್ನ ಮನೆಯೊಳಗೆ ಕೂಡಿಹಾಕಿ ಬೆಂಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಹ್ರೈಚ್, ಅಕ್ಟೋಬರ್ 08: ರೈತರೊಬ್ಬರು ತನ್ನ ಇಡೀ ಕುಟುಂಬವನ್ನೇ ಮನೆಯೊಳಗೆ ಕೂಡಿಹಾಕಿ ಬೆಂಕಿ(Fire) ಹಚ್ಚಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ನಡೆದಿದೆ. ಪರಿಣಾಮ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರೈತನೊಬ್ಬ ತನ್ನ ಇಬ್ಬರು ಮಕ್ಕಳು, ತಾನೂ ಸೇರಿ ಇಡೀ ಕುಟುಂಬವನ್ನು ತನ್ನ ಮನೆಯೊಳಗೆ ಕೂಡಿಹಾಕಿ ಬೆಂಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ವಿಜಯ್ ಮೌರ್ಯ ಎಂಬ ರೈತ, ಹಳ್ಳಿಯಿಂದ ಇಬ್ಬರು ಮಕ್ಕಳನ್ನು ಕೆಲಸಕ್ಕೆಂದು ಮನೆಗೆ ಕರೆಸಿಕೊಂಡಿದ್ದಾನೆ. ನಂತರ ಅವರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ, ತನ್ನ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಮನೆಯೊಳಗೆ ಕೂಡಿಹಾಕಿದ್ದಾನೆ.
ಮೌರ್ಯ ಮನೆಗೆ ಬೆಂಕಿ ಹಚ್ಚಿದ್ದಾನೆಂದು ಆರೋಪಿಸಲಾಗಿದೆ, ಇದರಿಂದಾಗಿ ಆರು ಮಂದಿ ಸಾವನ್ನಪ್ಪಿದ್ದಾರೆ. ಮೃತರನ್ನು ವಿಜಯ್ ಮೌರ್ಯ, ಅವರ ಪತ್ನಿ, ಅವರ ಇಬ್ಬರು ಚಿಕ್ಕ ಹೆಣ್ಣುಮಕ್ಕಳು ಮತ್ತು ಭೇಟಿ ಮಾಡಲು ಬಂದಿದ್ದ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ.
ಬೆಂಕಿಯು ಇಡೀ ಮನೆಯನ್ನು ಸಂಪೂರ್ಣವಾಗಿ ನಾಶಪಡಿಸಿದೆ, ಜೊತೆಗೆ ಜಾನುವಾರುಗಳು ಮತ್ತು ಆಸ್ತಿಯೂ ನಾಶವಾಗಿದೆ. ಒಂದು ಟ್ರ್ಯಾಕ್ಟರ್ ಮತ್ತು ಒಳಗೆ ಕಟ್ಟಿ ಹಾಕಿದ್ದ ದನಗಳು ಸಹ ಸುಟ್ಟುಹೋಗಿವೆ. ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು, ಆದರೆ ಜ್ವಾಲೆಗಳು ಬೇಗನೆ ಹರಡಿತ್ತು. ನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸ್ ತಂಡಗಳು ಮತ್ತು ಹಿರಿಯ ಅಧಿಕಾರಿಗಳು ಆಗಮಿಸಿದ್ದರು.
ಮತ್ತಷ್ಟು ಓದಿ: ಒಡಿಶಾ: ಲೈಂಗಿಕ ಕಿರುಕುಳ ತಾಳಲಾರದೆ ಬೆಂಕಿ ಹಚ್ಚಿಕೊಂಡಿದ್ದ ವಿದ್ಯಾರ್ಥಿನಿ ಸಾವು
ಆರು ಮಂದಿ ಶವಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದ್ದು, ತನಿಖೆಗಾಗಿ ಆ ಪ್ರದೇಶವನ್ನು ಪೊಲೀಸರು ಸುತ್ತುವರೆದಿದ್ದಾರೆ. ಘಟನೆಯ ಬಗ್ಗೆ ವಿವರವಾದ ತನಿಖೆಗೆ ಅಧಿಕಾರಿಗಳು ಆದೇಶಿಸಿದ್ದಾರೆ.
ಗ್ರಾಮಸ್ಥರಿಂದ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದ್ದು, ಮರಣೋತ್ತರ ಪರೀಕ್ಷೆಗಳು ಪೂರ್ಣಗೊಂಡ ನಂತರ ಮುಂದಿನ ಕಾನೂನು ಮತ್ತು ವಿಧಿವಿಜ್ಞಾನ ಕ್ರಮಗಳನ್ನು ಅನುಸರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




