“ತನಗೆ ತುಂಡು ತುಂಡಾಗಿ ಕತ್ತರಿಸುವ ಬೆದರಿಕೆ ಹಾಕಿದ್ದಾನೆ” ಎಂದು 2020ರಲ್ಲೇ ಅಫ್ತಾಬ್ ವಿರುದ್ಧ ದೂರು ನೀಡಿದ್ದ ಶ್ರದ್ಧಾ

| Updated By: ನಯನಾ ರಾಜೀವ್

Updated on: Nov 23, 2022 | 12:14 PM

ಅವನು ನನ್ನನ್ನು ತುಂಡು ತುಂಡಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅಫ್ತಾಬ್ ವಿರುದ್ಧ ಶ್ರದ್ಧಾ ವಾಕರ್( Shraddha Walker) 2020ರಲ್ಲೇ ಪೊಲೀಸರಿಗೆ ದೂರು ನೀಡಿದ್ದ ಕುರಿತು ಮಾಹಿತಿ ಲಭ್ಯವಾಗಿದೆ.

ತನಗೆ ತುಂಡು ತುಂಡಾಗಿ ಕತ್ತರಿಸುವ ಬೆದರಿಕೆ ಹಾಕಿದ್ದಾನೆ ಎಂದು 2020ರಲ್ಲೇ ಅಫ್ತಾಬ್ ವಿರುದ್ಧ ದೂರು ನೀಡಿದ್ದ ಶ್ರದ್ಧಾ
Shraddha Walker
Follow us on

ಅವನು ನನ್ನನ್ನು ತುಂಡು ತುಂಡಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅಫ್ತಾಬ್ ವಿರುದ್ಧ ಶ್ರದ್ಧಾ ವಾಕರ್( Shraddha Walker) 2020ರಲ್ಲೇ ಪೊಲೀಸರಿಗೆ ದೂರು ನೀಡಿದ್ದ ಕುರಿತು ಮಾಹಿತಿ ಲಭ್ಯವಾಗಿದೆ. ಶ್ರದ್ಧಾ ಪ್ರಿಯಕರ ಅಫ್ತಾಬ್ ಪೂನಾವಾಲಾ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಆಕೆಯನ್ನು 31 ತುಂಡುಗಳಾಗಿ ಕತ್ತರಿಸಿ ನಗರದ ವಿವಿಧೆಡೆ ಎಸೆದು ಬಂದಿದ್ದ.

ಇದೀಗ ಆತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ, ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರ ಪೊಲೀಸರಿಗೆ ಆಕೆ ದೂರು ನೀಡಿರುವ ಪ್ರತಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಅವರಿಬ್ಬರು ಇದ್ದ ಫ್ಲಾಟ್​ನಲ್ಲಿ ಆಕೆಯನ್ನು ಥಳಿಸಿದ್ದ, ಹಿಂಸಿಸಿದ್ದ ಜತೆಗೆ ಆಕೆಯನ್ನು ತುಂಡು ತುಂಡಾಗಿ ಕತ್ತರಿಸುವುದಾಗಿಯೂ ಬೆದರಿಕೆ ಹಾಕಿದ್ದ. ಆ ನಡವಳಿಕೆಯು ಆತನ ಕುಟುಂಬಕ್ಕೂ ತಿಳಿದಿದೆ ಎಂದು ದೂರಿನಲ್ಲಿ ತಿಳಿಸಿದ್ದಳು.

ಪೊಲೀಸರು ಈಗ ಈ ದೂರನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಪೊಲೀಸರು ಯಾವುದೇ ಕ್ರಮ ಕೈಗೊಂಡಿದ್ದರಾ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಫ್ತಾಬ್ ಅವರ ಪೋಷಕರು ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ.

ನನ್ನನ್ನು ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದ್ದ, ಅವನು ನನ್ನನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿ ಎಸೆಯುತ್ತೇನೆ ಎಂದು ಬ್ಲ್ಯಾಕ್​ಮೇಲೆ ಮಾಡುತ್ತಿದ್ದಾನೆ 6 ತಿಂಗಳಿಂದ ನನಗೆ ಹಿಂಸೆ ನೀಡುತ್ತಿದ್ದಾನೆ, ನನಗೆ ಧೈರ್ಯವಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

2020ರಲ್ಲಿ ನೀಡಿದ್ದ ದೂರಿನ ಅನ್ವಯ ಆಗಲೇ ಆತ ಆಕೆಗೆ ಹಿಂಸೆ ನೀಡುತ್ತಾ 6 ತಿಂಗಳು ಕಳೆದಿತ್ತು. ಕಾಲ್ ಸೆಂಟರ್ ಉದ್ಯೋಗಿಗಳಾಗಿದ್ದ ಇಬ್ಬರೂ ಮೇ ತಿಂಗಳಲ್ಲಿ ದೆಹಲಿಗೆ ತೆರಳಿದ್ದರು.

ಶ್ರದ್ಧಾ ಅವರ ಪೋಷಕರು ಅಂತರ-ಧರ್ಮೀಯ (ಹಿಂದೂ-ಮುಸ್ಲಿಂ) ಸಂಬಂಧವನ್ನು ಒಪ್ಪದ ಕಾರಣ ಆಕೆಯೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ಮೇ ತಿಂಗಳಲ್ಲಿ ದೆಹಲಿಯ ಮೆಹ್ರೌಲಿಯಲ್ಲಿರುವ ಫ್ಲಾಟ್‌ಗೆ ಸ್ಥಳಾಂತರಗೊಂಡ ಕೆಲವು ದಿನಗಳ ನಂತರ ನಡೆದ ಈ ಭೀಕರ ಹತ್ಯೆಯು ಕಳೆದ ಒಂದು ತಿಂಗಳ ಹಿಂದೆ ಬೆಳಕಿಗೆ ಬಂದಿದ್ದು, ಆಕೆಯ ತಂದೆ ಪೊಲೀಸರ ಬಳಿಗೆ ಹೋದ ನಂತರ ಆಕೆಯ ಸ್ನೇಹಿತರು ಆಕೆಯನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದರು.

ಅವನು ನನ್ನನ್ನು ಹೊಡೆಯುತ್ತಾನೆ, ಹಲವು ಬಾರಿ ಕೊಲ್ಲಲ್ಲೂ ಪ್ರಯತ್ನಿಸಿದ್ದಾನೆ, ನಾವು ಒಟ್ಟಿಗೆ ಇರುವುದು ಎಲ್ಲದೂ ಅವನ ಪೋಷಕರಿಗೆ ಗೊತ್ತಿದೆ, ಅವರು ವಾರಕ್ಕೊಮ್ಮೆ ಮನೆಗೆ ಭೇಟಿ ನೀಡುತ್ತಿದ್ದರು ಎಂದು ಪತ್ರದಲ್ಲಿ ಬರೆದಿದ್ದಾರೆ.

ಅವರು ಎಷ್ಟು ಕಾಲ ಬೇರೆಯಾಗಿ ವಾಸಿಸುತ್ತಿದ್ದರು ಎಂಬುದು ಸ್ಪಷ್ಟವಾಗಿಲ್ಲ, ಆದರೆ ದೆಹಲಿಗೆ ತೆರಳುವ ಮೊದಲು ಅವರು ಈ ವರ್ಷದ ಆರಂಭದಲ್ಲಿ ಹಿಮಾಚಲ ಪ್ರದೇಶಕ್ಕೆ ರಜೆಯಲ್ಲಿ ಒಟ್ಟಿಗೆ ಹೋಗಿದ್ದರು.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 12:11 pm, Wed, 23 November 22