Sikhs Protest: ತ್ರಿವರ್ಣ ಧ್ವಜದೊಂದಿಗೆ ನಾವಿದ್ದೇವೆ; ಬ್ರಿಟಿಷ್ ಹೈಕಮಿಷನ್ ಕಚೇರಿ ಎದುರು ಸಿಖ್ಖರ ಪ್ರತಿಭಟನೆ
ಖಲಿಸ್ತಾನಿ ಉಗ್ರರು ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿರುವುದನ್ನು ಪ್ರತಿಭಟಿಸಿ ದೆಹಲಿಯಲ್ಲಿ ಬ್ರಿಟಿಷ್ ಹೈಕಮಿಷನ್ ಕಚೇರಿ (British High Commission) ಎದುರು ಸಿಖ್ಖರು (Sikhs) ಸೋಮವಾರ ಪ್ರತಿಭಟನೆ ನಡೆಸಿದರು.
ನವದೆಹಲಿ: ಖಲಿಸ್ತಾನಿ ಉಗ್ರರು ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿರುವುದನ್ನು ಪ್ರತಿಭಟಿಸಿ ದೆಹಲಿಯಲ್ಲಿ ಬ್ರಿಟಿಷ್ ಹೈಕಮಿಷನ್ ಕಚೇರಿ (British High Commission) ಎದುರು ಸಿಖ್ಖರು (Sikhs) ಸೋಮವಾರ ಪ್ರತಿಭಟನೆ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಸಿಖ್ ಸಮುದಾಯದವರು ತ್ರಿವರ್ಣಧ್ವಜ ಹಿಡಿದುಕೊಂಡು, ‘ಭಾರತ ನಮ್ಮ ಹೆಮ್ಮೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ಯಾವುದೇ ಘಟನೆಯನ್ನು ಸಹಿಸುವುದಿಲ್ಲ’ ಎಂಬ ಘೋಷಣೆಗಳನ್ನು ಕೂಗಿದರು. ‘ಬ್ರಿಟಿಷ್ ಹೈಕಮಿಷನ್ ಕಚೇರಿ ಎದುರು ಪ್ರತಿಭಟಿಸುವ ಮೂಲಕ ಭಾರತದ ಸಿಖ್ ಸಮುದಾಯದವರು ವಿಶ್ವಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಭಾರತವು ನಮ್ಮ ತಾಯ್ನಾಡು. ಸಿಖ್ಖರು ದೇಶ ಮತ್ತು ತ್ರಿವರ್ಣಧ್ವಜದ ಪರ ಇದ್ದೇವೆ’ ಎಂದು ಬಿಜೆಪಿ ನಾಯಕರೂ ಆಗಿರುವ, ಸಿಖ್ ಸಮುದಾಯದ ಮಜಿಂದರ್ ಸಿಂಗ್ ಸಿರಾ ಪ್ರತಿಭಟನೆಯ ವಿಡಿಯೋ ಜತೆಗೆ ಟ್ವೀಟ್ ಮಾಡಿದ್ದಾರೆ.
‘ನಮ್ಮ ರಾಷ್ಟ್ರದೊಂದಿಗೆ ಇಡೀ ಸಮುದಾಯ ಹೊಂದಿರುವ ಬಾಂಧವ್ಯವನ್ನು ಕೆಲವರು ಹಾನಿ ಮಾಡಲು ಅಥವಾ ದುರ್ಬಲಗೊಳಿಸಲು ನಾವು ಬಿಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.
Sikhs of India have given a loud and clear message to the world through their protest at British High Commission…
India is our homeland and Sikhs stand with the nation and Tiranga ??@ANI @ZeeNews @PTI_News @republic pic.twitter.com/kt80QluRzV
— Manjinder Singh Sirsa (@mssirsa) March 20, 2023
ಲಂಡನ್ನಲ್ಲಿ ಶನಿವಾರ ಖಲಿಸ್ತಾನಿ ಉಗ್ರರು ಭಾರತದ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಖಲಿಸ್ತಾನಿ ಧ್ವಜ ಹಾರಿಸಲು ಯತ್ನಿಸಿದ್ದರು. ಇದಕ್ಕೆ ಭಾರತ ಈಗಾಗಲೇ ಬ್ರಿಟನ್ ಜತೆ ಪ್ರತಿಭಟನೆ ವ್ಯಕ್ತಪಡಿಸಿದೆ. ದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್‌ನ ಉಪ ಮುಖ್ಯಸ್ಥರನ್ನು ಕರೆಸಿ ತನ್ನ ಕಠಿಣ ನಿಲುವಿನ ಬಗ್ಗೆ ಎಚ್ಚರಿಸಿದೆ. ಘಟನೆಗೆ ಸಂಬಂಧಿಸಿದಂತೆ ಭಾರತ ಭಾನುವಾರ ರಾತ್ರಿ ದೆಹಲಿಯ ಹಿರಿಯ ಬ್ರಿಟಿಷ್ ರಾಜತಾಂತ್ರಿಕರನ್ನು ಕರೆಸಿಕೊಂಡು ಮಾತುಕತೆ ನಡೆಸಿತ್ತು.
ಮತ್ತಷ್ಟು ಓದಿ: ಲಂಡನ್ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದ ಖಲಿಸ್ತಾನಿ ಉಗ್ರರಿಗೆ ತಕ್ಕ ಉತ್ತರ ನೀಡಿದ ಭಾರತ
ಲಂಡನ್ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ ಮತ್ತು ಸಿಬ್ಬಂದಿಯ ಭದ್ರತೆ ಬಗ್ಗೆ ಬ್ರಿಟನ್ ಸರ್ಕಾರದ ಉದಾಸೀನತೆ ಸ್ವೀಕಾರಾರ್ಹವಲ್ಲ ಎಂದು ವಿದೇಶಾಂಗ ಸಚಿವಾಲಯ ಕಟು ಸಂದೇಶ ರವಾನಿಸಿತ್ತು. ಈ ಮಧ್ಯೆ, ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ಬೃಹತ್ ತ್ರಿವರ್ಣಧ್ವಜ ಹಾರಿಸಲಾಗಿತ್ತು.
ಈ ಮಧ್ಯೆ, ಭಾರತೀಯ ಹೈಕಮಿಷನ್‌ಗೆ ಸೂಕ್ತ ಭದ್ರತೆ ಒದಗಿಸಲಿದ್ದೇವೆ ಎಂದು ಬ್ರಿಟನ್ ಸರ್ಕಾರದ ಉನ್ನತ ಅಧಿಕಾರಿಗಳು ಸೋಮವಾರ ಭರವಸೆ ನೀಡಿದ್ದಾರೆ. ಲಂಡನ್ ಮೇಯರ್ ಕೂಡ ಖಲಿಸ್ತಾನಿ ಉಗ್ರರ ಕೃತ್ಯವನ್ನು ಖಂಡಿಸಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ