Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi Rains: ದೆಹಲಿಯಲ್ಲಿ ಭಾರೀ ಮಳೆ; 10 ವಿಮಾನಗಳ ಮಾರ್ಗ ಬದಲಾವಣೆ

ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಭಾರೀ ಮಳೆಯಾಗುತ್ತಿದ್ದು, ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ. 10 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. 7 ವಿಮಾನಗಳನ್ನು ಜೈಪುರಕ್ಕೆ, 3 ವಿಮಾನಗಳನ್ನು ಲಖನೌಗೆ ತೆರಳುವಂತೆ ಸೂಚಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ ತಿಳಿಸಿದೆ.

Delhi Rains: ದೆಹಲಿಯಲ್ಲಿ ಭಾರೀ ಮಳೆ; 10 ವಿಮಾನಗಳ ಮಾರ್ಗ ಬದಲಾವಣೆ
ದೆಹಲಿಯಲ್ಲಿ ಭಾರೀ ಮಳೆ (ಎಎನ್​ಐ ಚಿತ್ರ)Image Credit source: ANI
Follow us
Ganapathi Sharma
|

Updated on: Mar 20, 2023 | 9:12 PM

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ (Delhi) ಸೋಮವಾರ ಭಾರೀ ಮಳೆಯಾಗುತ್ತಿದ್ದು (Heavy Rain), ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ. 10 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. 7 ವಿಮಾನಗಳನ್ನು ಜೈಪುರಕ್ಕೆ, 3 ವಿಮಾನಗಳನ್ನು ಲಖನೌಗೆ ತೆರಳುವಂತೆ ಸೂಚಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ ತಿಳಿಸಿದೆ. ದೆಹಲಿಯಲ್ಲಿ ಪ್ರತಿಕೂಲ ಹವಾಮಾನವು ಎಲ್ಲಾ ವಿಮಾನಗಳ ನಿರ್ಗಮನ/ ಆಗಮನದ ಮೇಲೆ ಪರಿಣಾಮ ಬೀರಬಹುದು. ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಗತಿಯನ್ನು ಪರಿಶೀಲಿಸಲು ವಿನಂತಿಸಲಾಗಿದೆ ಎಂದು ಸ್ಪೈಸ್​​ಜೆಟ್ ಪ್ರಕಟಣೆ ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ದೆಹಲಿಯಾದ್ಯಂತ ಮಂಜು ಮುಸುಕಿದ ಹಾಗೂ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

ದೆಹಲಿಯ ಹಲವು ಪ್ರದೇಶಗಳಲ್ಲಿ ಸೋಮವಾರ ಧಾರಾಕಾರ ಮಳೆಯಾಗಿದೆ. ಕನಿಷ್ಠ ತಾಪಮಾನ 17.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕೆಲವೆಡೆ ತುಂತುರು ಮಳೆಯಾಗಿದ್ದರೆ, ಕೆಲವೆಡೆ ಮಳೆ ಚುರುಕುಗೊಂಡಿದೆ. ಮಳೆಯಿಂದಾಗಿ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿದೆ.

ಹವಾಮಾನ ಇಲಾಖೆಯ ಪ್ರಕಾರ, ದೆಹಲಿ ಮತ್ತು ನೋಯ್ಡಾದ ಕೆಲ ಪ್ರದೇಶಗಳಲ್ಲಿ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗುಡುಗು, ಆಲಿಕಲ್ಲು ಸಹಿತ ಲಘು ಮಳೆಯಾಗುವ ಮುನ್ಸೂಚನೆ ಇದೆ. ಉತ್ತರ ಪ್ರದೇಶದ ಹಲವೆಡೆಗಳಲ್ಲಿಯೂ ಸೋಮವಾರ ಮಳೆ ಸುರಿದಿದೆ.

ಇದನ್ನೂ ಓದಿ: Sikhs Protest: ತ್ರಿವರ್ಣ ಧ್ವಜದೊಂದಿಗೆ ನಾವಿದ್ದೇವೆ; ಬ್ರಿಟಿಷ್ ಹೈಕಮಿಷನ್ ಕಚೇರಿ ಎದುರು ಸಿಖ್ಖರ ಪ್ರತಿಭಟನೆ

ರಾಜಧಾನಿ ದೆಹಲಿಯ ಕೆಲವು ಪ್ರದೇಶಗಳಲ್ಲಿ ಭಾನುವಾರ ಆಲಿಕಲ್ಲು ಮಳೆಯಾಗಿತ್ತು. ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕನಿಷ್ಠ ತಾಪಮಾನ 15.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಶನಿವಾರ ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ಮಳೆ ಮತ್ತು ಆಲಿಕಲ್ಲು ಮಳೆಯಾಗಿತ್ತು. ನಂತರ ತಾಪಮಾನದಲ್ಲಿ 5 ಡಿಗ್ರಿಯಷ್ಟು ಇಳಿಕೆ ದಾಖಲಾಗಿತ್ತು. ಇದು ಈ ತಿಂಗಳ ಕನಿಷ್ಠ ತಾಪಮಾನವಾಗಿದ್ದು, ಶನಿವಾರದಂದು ಹಲವು ಪ್ರದೇಶಗಳಲ್ಲಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಿಕೆಶಿಗೆ ಮೊದಲು ಎಂಎಲ್ಎ ಟಿಕೆಟ್ ಕೊಡಿಸಿದ್ದೇ ನಾನು; ವೀರಪ್ಪ ಮೊಯ್ಲಿ
ಡಿಕೆಶಿಗೆ ಮೊದಲು ಎಂಎಲ್ಎ ಟಿಕೆಟ್ ಕೊಡಿಸಿದ್ದೇ ನಾನು; ವೀರಪ್ಪ ಮೊಯ್ಲಿ
ಅಂಬರೀಶ್ ಮೊಮ್ಮಗನಿಗೆ ಕಲಘಟಗಿ ತೊಟ್ಟಿಲು; ಮಾರ್ಚ್​ 14ರಂದು ನಾಮಕರಣ
ಅಂಬರೀಶ್ ಮೊಮ್ಮಗನಿಗೆ ಕಲಘಟಗಿ ತೊಟ್ಟಿಲು; ಮಾರ್ಚ್​ 14ರಂದು ನಾಮಕರಣ
ರೈತರಿಗೆ, ರೈತರ ಮಕ್ಕಳಿಗೆ ಒಳ್ಳೆಯದಾಗಲಿ: ವಿಜಯಲಕ್ಷ್ಮಿ ದರ್ಶನ್ ಹಾರೈಕೆ
ರೈತರಿಗೆ, ರೈತರ ಮಕ್ಕಳಿಗೆ ಒಳ್ಳೆಯದಾಗಲಿ: ವಿಜಯಲಕ್ಷ್ಮಿ ದರ್ಶನ್ ಹಾರೈಕೆ
ಪಲ್ಟಿ ಹೊಡೆದ ಆಟೋ ಮೇಲೆತ್ತಿದ ಶಾಸಕ: ಮಾನವೀಯತೆ ಮೆರೆದ ಹೆಚ್​​ಸಿ ಬಾಲಕೃಷ್ಣ
ಪಲ್ಟಿ ಹೊಡೆದ ಆಟೋ ಮೇಲೆತ್ತಿದ ಶಾಸಕ: ಮಾನವೀಯತೆ ಮೆರೆದ ಹೆಚ್​​ಸಿ ಬಾಲಕೃಷ್ಣ
ಉತ್ತರಾಖಂಡದ ಹಿಮಪಾತದಲ್ಲಿ ಇನ್ನೂ 3 ಶವಗಳು ಪತ್ತೆ
ಉತ್ತರಾಖಂಡದ ಹಿಮಪಾತದಲ್ಲಿ ಇನ್ನೂ 3 ಶವಗಳು ಪತ್ತೆ
ಓ ಮೈ ಗಾಡ್..! ಫಿಲಿಪ್ಸ್‌ ಹಿಡಿದ ಕ್ಯಾಚ್​ಗೆ ದಂಗಾದ ಅನುಷ್ಕಾ
ಓ ಮೈ ಗಾಡ್..! ಫಿಲಿಪ್ಸ್‌ ಹಿಡಿದ ಕ್ಯಾಚ್​ಗೆ ದಂಗಾದ ಅನುಷ್ಕಾ
ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಹಾಲಮತ ಸಮಾಜದ ಕೈಯಲ್ಲಿರುವ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ: ಕೋಡಿಶ್ರೀ
ಹಾಲಮತ ಸಮಾಜದ ಕೈಯಲ್ಲಿರುವ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ: ಕೋಡಿಶ್ರೀ