ಪಾಸ್‌ಪೋರ್ಟ್(Passport)ನಿಂದ ತಂದೆಯ ಹೆಸರನ್ನು ತೆಗೆದುಹಾಕುವ ಕುರಿತು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮಗುವಿನ ಜನನದ ಮೊದಲು ತಂದೆ ಪತ್ನಿಯನ್ನು ತೊರೆದಿದ್ದರೆ , ಮಗುವಿನ ಪಾಸ್‌ಪೋರ್ಟ್‌ನಿಂದ ತಂದೆಯ ಹೆಸರನ್ನು ತೆಗೆದುಹಾಕಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಸಿಂಗಲ್ ಮದರ್ ಪರವಾಗಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ತನ್ನ ಅಪ್ರಾಪ್ತ ಮಗನ ಪಾಸ್‌ಪೋರ್ಟ್‌ನಿಂದ ತಂದೆಯ ಹೆಸರನ್ನು ತೆಗೆದುಹಾಕುವಂತೆ ಪಾಸ್‌ಪೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ.
ಅರ್ಜಿದಾರರು (ತಾಯಿ) ಮಗು ಹುಟ್ಟುವ ಮೊದಲೇ ಇಬ್ಬರೂ ಬೇರೆಯಾಗಿದ್ದರು, ಮಗನನ್ನು ಆಕೆ ಒಬ್ಬರೇ ಬೆಳಸಿದ್ದಾರೆ ಎಂದು ನ್ಯಾ. ಪ್ರತಿಭಾ ಎಂ ಸಿಂಗ್ ಹೇಳಿದ್ದಾರೆ. ಮಗುವಿನ ತಂದೆಯ ಹೆಸರನ್ನು ಪಾಸ್‌ಪೋರ್ಟ್‌ನಿಂದ ಅಳಿಸಲು ಮತ್ತು ತಂದೆಯ ಹೆಸರಿಲ್ಲದೆ ಅಪ್ರಾಪ್ತ ಮಗುವಿನ ಪರವಾಗಿ ಪಾಸ್‌ಪೋರ್ಟ್ ಅನ್ನು ಮರು ನೀಡುವಂತೆ ನಿರ್ದೇಶಿಸಲಾಗಿದೆ.
ಮತ್ತಷ್ಟು ಓದಿ: ರಾಜ್ಯದಲ್ಲಿ ಹೆಚ್ಚಿದ ಪಾಸ್‌ಪೋರ್ಟ್ ಮಾಡಿಸುವವರ ಸಂಖ್ಯೆ: ಬೆಂಗಳೂರು ಫಸ್ಟ್, ಮಂಗಳೂರು ಸೆಕೆಂಡ್
ಒಂಟಿ ತಾಯಿ ಮತ್ತು ಆಕೆಯ ಅಪ್ರಾಪ್ತ ಮಗ ತಮ್ಮ ಅಸ್ತಿತ್ವದಲ್ಲಿರುವ ಪಾಸ್‌ಪೋರ್ಟ್‌ನಿಂದ ಅಪ್ರಾಪ್ತ ಮಗುವಿನ ತಂದೆಯ ಹೆಸರನ್ನು ಅಳಿಸುವಂತೆ ಕೋರಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಅರ್ಜಿದಾರರು ಪರಸ್ಪರ ಒಪ್ಪಂದ ಮತ್ತು ಮಗುವಿನ ಜನನದ ಮೊದಲೇ ಪತಿ ಆಕೆಯನ್ನು ಬಿಟ್ಟು ಹೋಗಿರುವ ಅಂಶವನ್ನು ಕೂಡ ಕೋರ್ಟ್ಗೆ ಹೇಳಿದ್ದರು.
Published On - 9:31 am, Tue, 2 May 23