ರಾತ್ರೋರಾತ್ರಿ 140 ಪಾಸ್​ಪೋರ್ಟ್​ಗಳು, 10 ದಿನ ಸ್ನಾನವಿಲ್ಲ, ಟರ್ಕಿ ಜನರ ರಕ್ಷಣೆಗೆ ಹೋದ NDRF ಸಿಬ್ಬಂದಿ ಎದುರಿಸಿದ ಸವಾಲು ಹೀಗಿತ್ತು

ಟರ್ಕಿಯಲ್ಲಿ ಮೂರು ಭೂಕಂಪಗಳು ಒಮ್ಮೆಲೇ ಅಪ್ಪಳಿಸಿ, 45 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ. ಭಾರತೀಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಟರ್ಕಿಯ ಜನರ ರಕ್ಷಣೆಗೆಂದು ತೆರಳಿತ್ತು.

ರಾತ್ರೋರಾತ್ರಿ 140 ಪಾಸ್​ಪೋರ್ಟ್​ಗಳು, 10 ದಿನ ಸ್ನಾನವಿಲ್ಲ, ಟರ್ಕಿ ಜನರ ರಕ್ಷಣೆಗೆ ಹೋದ NDRF ಸಿಬ್ಬಂದಿ ಎದುರಿಸಿದ ಸವಾಲು ಹೀಗಿತ್ತು
ಎನ್​ಡಿಆರ್​ಎಫ್Image Credit source: NDTV
Follow us
ನಯನಾ ರಾಜೀವ್
|

Updated on:Feb 22, 2023 | 9:08 AM

ಟರ್ಕಿಯಲ್ಲಿ ಮೂರು ಭೂಕಂಪಗಳು ಒಮ್ಮೆಲೇ ಅಪ್ಪಳಿಸಿ, 45 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ. ಭಾರತೀಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಟರ್ಕಿಯ ಜನರ ರಕ್ಷಣೆಗೆಂದು ತೆರಳಿತ್ತು. ಟರ್ಕಿಗೆ ಕಾಲಿಡುತ್ತಿದ್ದಂತೆ ಕೇವಲ ಸವಾಲುಗಳೇ ಎದುರಾದವು, ಒಂದೆಡೆ ರಕ್ಷಣಾ ಕಾರ್ಯ, ತಿನ್ನಲು ಸರಿಯಾದ ಆಹಾರವಿಲ್ಲ, ಸ್ನಾನ ಮಾಡಲು ನೀರಿಲ್ಲ, ಸಸ್ಯಾಹಾರ ಇಲ್ಲವೇ ಇಲ್ಲ ಇವೆಲ್ಲದರ ನಡುವೆ ಕೆಲಸ ಮಾಡುವುದು ತುಂಬಾ ಕಷ್ಟಕರವಾಗಿತ್ತು.

ವೈದ್ಯಾಧಿಕಾರಿಯೊಬ್ಬರು 18 ತಿಂಗಳ ಅವಳಿ ಮಕ್ಕಳನ್ನು ಬಿಟ್ಟು, ಟರ್ಕಿಯ ವಿಮಾನ ಹತ್ತಿದ್ದರು. ರಾತ್ರೋ ರಾತ್ರಿ 140 ಪಾಸ್​ಪೋರ್ಟ್​ಗಳನ್ನು ಸಿದ್ಧಪಡಿಸಲು ಅಧಿಕಾರಿಗಳು ಸಾವಿರಾರು ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದರು. 10 ದಿನಗಳ ಕಾಲ ಸ್ನಾನ ಮಾಡಿರಲಿಲ್ಲ, ಸರಿಯಾಗಿ ಊಟ, ನಿದ್ರೆ ಏನೂ ಇರಲಿಲ್ಲ, ಇಷ್ಟಾದರೂ ಎನ್​ಡಿಆರ್​ಎಫ್ ಸಿಬ್ಬಂದಿಗಳು ಭಾರತಕ್ಕೆ ಬಂದ ಮೇಲೆ ಹೇಳಿದ್ದು ಮತ್ತಷ್ಟು ಜೀವಗಳನ್ನು ಉಳಿಸಬೇಕಿತ್ತೆಂದು. ಎನ್​ಡಿಆರ್​ಎಫ್​ನ 152 ಸದಸ್ಯರ ಮೂರು ತಂಡ ಹಾಗೂ ಆರು ಶ್ವಾನಗಳ ಜತೆ ರಕ್ಷಣಾ ಕಾರ್ಯಕ್ಕೆ ತೆರಳಿದ್ದರು.

ಆಪರೇಷನ್ ದೋಸ್ತ್ ಎಂದು ಈ ಮಿಷನ್​ಗೆ ಹೆಸರಿಟ್ಟಿದ್ದರು, ಅಭಿಯಾನವು ಫೆಬ್ರವರಿ 7 ರಂದು ಪ್ರಾರಂಭವಾಗಿತ್ತು. ಇಬ್ಬರು ಮಕ್ಕಳನ್ನು ರಕ್ಷಿಸಲಾಯಿತು, 85 ಶವಗಳನ್ನು ಹೊರ ತೆಗೆಯಲಾಯಿತು. ಅನೇಕ ಟರ್ಕಿ ಪ್ರಜೆಗಳು ಭಾರತೀಯ ಎನ್​ಡಿಆರ್​ಎಫ್ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಮತ್ತಷ್ಟು ಓದಿ: Turkey Earthquake: ನೀವು ನಮ್ಮ ಹೆಮ್ಮೆ: ಆಪರೇಷನ್ ದೋಸ್ತ್​​ನಲ್ಲಿ ಭಾಗಿಯಾದ NDRF ತಂಡವನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ಫೆಬ್ರವರಿ 6 ರಂದು ಟರ್ಕಿ  ಮತ್ತು ನೆರೆಯ ಸಿರಿಯಾದ ಕೆಲವು ಭಾಗಗಳಲ್ಲಿ ಸಂಭವಿಸಿದ 7.8 ತೀವ್ರತೆಯ  ಸರಣಿ ಭೂಕಂಪದಲ್ಲಿ  44,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಇದು ಸಾವಿರಾರು ಕಟ್ಟಡಗಳು ಮತ್ತು ಮನೆಗಳನ್ನು ನೆಲಸಮಗೊಂಡಿವೆ.

ಇನ್ನೊಬ್ಬ ಅಧಿಕಾರಿ 152 ರಲ್ಲಿ, ಕೆಲವು ಅಧಿಕಾರಿಗಳು ಮಾತ್ರ ವಿದೇಶಕ್ಕೆ ಪ್ರಯಾಣಿಸಲು ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿದ್ದರು ಮತ್ತು ಕೋಲ್ಕತ್ತಾ ಮತ್ತು ವಾರಣಾಸಿಯಲ್ಲಿರುವ ಎನ್‌ಡಿಆರ್‌ಎಫ್ ತಂಡಗಳಿಂದ ನೂರಾರು ಪಾಸ್‌ಪೋರ್ಟ್‌ಗಳನ್ನು ತಯಾರಿಸಲು ದಾಖಲೆಗಳನ್ನು ಫ್ಯಾಕ್ಸ್ ಮತ್ತು ಇಮೇಲ್ ಮೂಲಕ ಕಳುಹಿಸಲಾಗಿತ್ತು.

ಟರ್ಕಿಯು ನಮ್ಮ ತಂಡಗಳಿಗೆ ಆಗಮನದ ಮೇಲೆ ವೀಸಾವನ್ನು ನೀಡಿತು ಮತ್ತು ನಾವು ಅಲ್ಲಿಗೆ ಬಂದ ತಕ್ಷಣ ನಮ್ಮನ್ನು ನೂರ್ಡಗಿ (ಗಾಜಿಯಾಂಟೆಪ್ ಪ್ರಾಂತ್ಯ) ಮತ್ತು ಹಟಾಯ್‌ಗೆ ನಿಯೋಜಿಸಲಾಯಿತು ಎಂದು ಎರಡನೇ-ಕಮಾಂಡ್ (ಕಾರ್ಯಾಚರಣೆ) ಶ್ರೇಣಿಯ ಅಧಿಕಾರಿ ರಾಕೇಶ್ ರಂಜನ್ ಹೇಳಿದರು.

ವಿದೇಶಿ ವಿಪತ್ತು ಯುದ್ಧ ಕಾರ್ಯಾಚರಣೆಗೆ ಮೊದಲ ಬಾರಿಗೆ ಕಳುಹಿಸಲಾದ ಐವರು ಮಹಿಳಾ ರಕ್ಷಕರಲ್ಲಿ ಕಾನ್‌ಸ್ಟೆಬಲ್ ಸುಷ್ಮಾ ಯಾದವ್ (32) ಸೇರಿದ್ದಾರೆ. ಅವರು ತಮ್ಮ 18 ತಿಂಗಳ ಅವಳಿ ಮಕ್ಕಳನ್ನು ಬಿಟ್ಟು ಟರ್ಕಿಗೆ ಹೋಗಿದ್ದರು. ನಾನು ನನ್ನ ಅವಳಿ ಮಕ್ಕಳನ್ನು ನನ್ನ ಅತ್ತೆಯ ಬಳಿ ಬಿಟ್ಟು ಹೋಗಿದ್ದೆ ಮತ್ತು ನಾನು ಅವರನ್ನು ಇಷ್ಟು ದಿನ ಬಿಟ್ಟು ಹೋಗಿದ್ದು ಇದೇ ಮೊದಲು ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:06 am, Wed, 22 February 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್