AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಹೆಚ್ಚಿದ ಪಾಸ್​​ಪೋರ್ಟ್​​ ಮಾಡಿಸುವವರ ಸಂಖ್ಯೆ: ಬೆಂಗಳೂರು ಫಸ್ಟ್​​, ಮಂಗಳೂರು ಸೆಕೆಂಡ್​

ಬೆಂಗಳೂರಿನ ರಿಜಿನಲ್ ಪಾಸ್ ಪೋರ್ಟ್ ಆಫೀಸ್ (RPO), ಮಾರ್ಚ್‌ ತಿಂಗಳಲ್ಲಿ ಬರೋಬ್ಬರಿ 79,027 ಪಾಸ್‌ಪೋರ್ಟ್‌ಗಳನ್ನು ವಿತರಿಸಿದೆ.

ರಾಜ್ಯದಲ್ಲಿ ಹೆಚ್ಚಿದ ಪಾಸ್​​ಪೋರ್ಟ್​​ ಮಾಡಿಸುವವರ ಸಂಖ್ಯೆ: ಬೆಂಗಳೂರು ಫಸ್ಟ್​​, ಮಂಗಳೂರು ಸೆಕೆಂಡ್​
ಸಾಂದರ್ಭಿಕ
ವಿವೇಕ ಬಿರಾದಾರ
|

Updated on: May 01, 2023 | 3:40 PM

Share

ಬೆಂಗಳೂರು: ಈಗಿನ ಬಹುತೇಕ ಜನರಲ್ಲಿ ವಿದೇಶಕ್ಕೆ (Internatioanl) ಹೋಗಿ ಓದಬೇಕು, ದುಡಿಬೇಕು, ಸುತ್ತಾಡಬೇಕು ಎಂಬ ಆಸೆಗಳು ಸಾಮಾನ್ಯ. ಅದರಂತೆಯೇ ಈಗ ಬೆಂಗಳೂರು (Bengaluru), ಮಂಗಳೂರಿನಲ್ಲಿ (Mangaluru) ಪಾಸ್‌ಪೋರ್ಟ್‌ಗಳನ್ನು (Passport) ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನ ರಿಜಿನಲ್ ಪಾಸ್ ಪೋರ್ಟ್ ಆಫೀಸ್ (RPO), ಮಾರ್ಚ್‌ ತಿಂಗಳಲ್ಲಿ ಬರೋಬ್ಬರಿ 79,027 ಪಾಸ್‌ಪೋರ್ಟ್‌ಗಳನ್ನು ವಿತರಿಸಿದೆ. ಇದು ಪಾಸ್‌ಪೋರ್ಟ್‌ಗಳ ಮುದ್ರಿತ ಮತ್ತು ಹೊಸ ಅರ್ಜಿದಾರರಿಗೆ ಮತ್ತು ನವೀಕರಣ ಮಾಡಿರುವುದು ಒಳಗೊಂಡಿವೆ.

ಬೆಂಗಳೂರಿನ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು (ಪಿಎಸ್‌ಕೆ) ಮಾರ್ಚ್​ನಲ್ಲೇ ಅತಿ ಹೆಚ್ಚು ಪಾಸ್‌ಪೋರ್ಟ್‌ಗಳನ್ನು ನೀಡಿದ್ದು ಸಿಲಿಕಾನ್ ಸಿಟಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ಮೈಸೂರು ಇದೆ.

ಇದನ್ನೂ ಓದಿ: ಬೆಂಗಳೂರು: ಹೋಟೆಲ್​ನಲ್ಲಿ​ ಗ್ರಾಹಕರಿಗೆ ಮತದಾನ ಮಹತ್ವದ ಸಂದೇಶ, ಮಂಗಳಮುಖಿಯರಿಂದ ಗೋಡೆಗಳ ಮೇಲೆ ಅರಳುತ್ತಿದೆ ಮತದಾನ ಜಾಗೃತಿ ಚಿತ್ತಾರ

ಮಾಹಾಮಾರಿ ಕೊರೊನಾ ಸಮಯದಲ್ಲಿ, ಅಂತರರಾಷ್ಟ್ರೀಯ ಪ್ರಯಾಣ ನಿಷೇಧದಿಂದಾಗಿ ಪಾಸ್‌ಪೋರ್ಟ್ ಅರ್ಜಿದಾರರ ಸಂಖ್ಯೆ ತೀವ್ರವಾಗಿ ಕುಸಿದಿತ್ತು. ಕೊರೊನಾ ನಂತರ ಪರಿಸ್ಥಿತಿ ಬದಲಾಗಿದ್ದು ಪಾಸ್‌ಪೋರ್ಟ್​ಗಾಗಿ ಹೊಸ ಹೊಸ ಅರ್ಜಿಗಳು ಮತ್ತು ಪಾಸ್‌ಪೋರ್ಟ್‌ಗಳ ನವೀಕರಣಕ್ಕಾಗಿ PSK ಗಳಲ್ಲಿ ಅಪಾಯಿಂಟ್‌ಮೆಂಟ್‌ಗಳು ಹೆಚ್ಚಾಗಿವೆ. ಅದರಲ್ಲೂ 2021 ರಲ್ಲಿ ಪಾಸ್‌ಪೋರ್ಟ್‌ ಪಡೆಯುವುದು ಕಷ್ಟದ ಕೆಲಸವಾಗಿತ್ತು. ಆದರೆ ಈಗ ಪರಿಸ್ಥಿತಿಯು ಸರಾಗವಾಗಿದೆ ಮತ್ತು ಹೊಸ ಪಾಸ್‌ಪೋರ್ಟ್‌ಗಳು ಮತ್ತು ಪೊಲೀಸ್-ಕ್ಲಿಯರೆನ್ಸ್ ಪ್ರಮಾಣಪತ್ರಗಳ ಅಪಾಯಿಂಟ್‌ಮೆಂಟ್‌ಗಳು ಈಗ ಒಂದು ವಾರ ಅಥವಾ ಎರಡು ವಾರಗಳಲ್ಲಿ ಸಿಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?