ರಾಜಸ್ಥಾನ: ಟ್ರಕ್ ಮತ್ತು ಕಾರಿನ ಮಧ್ಯೆ ಡಿಕ್ಕಿ, 6 ಜನರ ದುರ್ಮರಣ
ರಾಜಸ್ಥಾನದ ಜೋಧ್ಪುರ ಬಳಿ ಟ್ರಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದೆ. ಈ ಅಪಘಾತದಲ್ಲಿ ಸುಮಾರು ಆರು ಜನರು ಮೃತಪಟ್ಟಿದ್ದಾರೆ.
ನಿನ್ನೆ ತಡರಾತ್ರಿ ರಾಜಸ್ಥಾನದ ಜೋಧ್ಪುರ ಬಳಿ ಟ್ರಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದೆ. ಈ ಅಪಘಾತದಲ್ಲಿ ಸುಮಾರು ಆರು ಜನರು ಮೃತಪಟ್ಟಿದ್ದು ಕೆಲವರಿಗೆ ಗಂಭೀರ ಗಾಯಗಳಾಗಿವೆ ಎಂಬುವುದು ತಿಳಿದು ಬಂದಿದೆ. ಈ ಘಟನೆ ದಂಗಿಯಾವಾಸ್ ಪ್ರದೇಶದಲ್ಲಿ ನಡೆದಿದೆ ಎಂದು ಜೋಧ್‌ಪುರ ಡಿಸಿಪಿ (ಪೂರ್ವ) ಭುವನ್ ಭೂಷಣ್ ಯಾದವ್ ತಿಳಿಸಿದ್ದಾರೆ.
ಜೋಧ್‌ಪುರದಲ್ಲಿ ಮುಂಜಾನೆ 2 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತದಲ್ಲಿ ಆರು ಜನರು ಮೃತಪಟ್ಟಿದ್ದು ಅಜ್ಮೀರ್ ಜಿಲ್ಲೆಯ ನಿವಾಸಿಗಳಾಗಿದ್ದಾರೆ ಎಂದು ಡಿಸಿಪಿ ಭುವನ್ ಭೂಷಣ್ ಯಾದವ್ ಹೇಳಿದ್ದಾರೆ ಮತ್ತು ಶವಗಳನ್ನು ಎಂಡಿಎಂ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಹೇಳಿದರು.
Rajasthan | Six died in a collision between a truck and car in Dangiyawas area of Jodhpur, late last night: Jodhpur DCP (East) Bhuvan Bhushan Yadav
— ANI (@ANI) July 5, 2021
ಇದನ್ನೂ ಓದಿ: ಫಿಲಿಪೈನ್ಸ್ ಸೇನಾ ವಿಮಾನ ಅಪಘಾತ; 17 ಯೋಧರ ಮರಣ, 40 ಮಂದಿಯ ರಕ್ಷಣೆ-ಸಾವಿನ ಸಂಖ್ಯೆ ಏರುವ ಸಾಧ್ಯತೆ
Published On - 8:42 am, Mon, 5 July 21