Sonia Gandhi Birthday: ಬಿಪಿನ್ ರಾವತ್ ದುರಂತ ಅಂತ್ಯ; ಇಂದು ಜನ್ಮದಿನ ಆಚರಿಸಿಕೊಳ್ಳದೆ ಇರಲು ನಿರ್ಧರಿಸಿದ ಸೋನಿಯಾ ಗಾಂಧಿ
ಡಿಸೆಂಬರ್ 8ರಂದು ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ ಸೇನಾಧಿಕಾರಿಗಳು ವೆಲ್ಲಿಂಗ್ಟನ್ಗೆ ತೆರಳುತ್ತಿದ್ದರು. ದೆಹಲಿಯಿಂದ ಬೆಳಗ್ಗೆ ವಿಶೇಷ ವಿಮಾನದಲ್ಲಿ ಸುಲೂರ್ಗೆ ಹೋಗಿ, ಅಲ್ಲಿಂದ ವೆಲ್ಲಿಂಗ್ಟನ್ಗೆ ತೆರಳುತ್ತಿದ್ದರು.
ತಮಿಳುನಾಡಿನ ಕೂನೂರ್ನಲ್ಲಿ ಹೆಲಿಕಾಪ್ಟರ್ ಪತನದಲ್ಲಿ ಸಿಡಿಎಸ್ ಬಿಪಿನ್ ರಾವತ್ (Gen. Bipin Rawat) ಮತ್ತು ಇತರ 11 ಸೈನಿಕರು ಮೃತರಾದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಇಂದು ತಮ್ಮ ಹುಟ್ಟುಹಬ್ಬ (Sonia Gandhi Birthday) ಆಚರಣೆ ಮಾಡಿಕೊಳ್ಳದೆ ಇರಲು ನಿರ್ಧರಿಸಿದ್ದಾರೆ. ಹಾಗೇ, ರಾಷ್ಟ್ರಾದ್ಯಂತ ಯಾವುದೇ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ತಮ್ಮ ಜನ್ಮದಿನದ ನಿಮಿತ್ತ ಸಂಭ್ರಮ ಆಚರಣೆ ಮಾಡಬಾರದು. ಯಾವುದೇ ಕಾರ್ಯಕ್ರಮವನ್ನೂ ನಡೆಸಬಾರದು ಎಂದು ಹೇಳಿದ್ದಾರೆ. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಟ್ವಿಟರ್ ಮೂಲಕ ಘೋಷಣೆ ಮಾಡಿದ್ದಾರೆ. ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯವರ ನಿರ್ಧಾರವನ್ನು ತಿಳಿಸಿದ್ದಾರೆ.
ಈ ಬಗ್ಗೆ ಲೋಕಸಭಾ ಸಂಸದರಾದ ಮಾಣಿಕ್ಕಮ್ ಟಾಗೋರ್ ಅವರೂ ಸಹ ಮಾಹಿತಿ ನೀಡಿದ್ದು, ಜನರಲ್ ರಾವತ್ ಮತ್ತು 11 ಯೋಧರ ನಿಧನದ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಸಂಭ್ರಮ ಆಚರಣೆಗಳನ್ನೂ ರದ್ದುಗೊಳಿಸಲು ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ. ಇದು ಅವರ ಸೂಕ್ಷ್ಮತೆಗೆ ಸಾಕ್ಷಿ ಎಂದು ಟ್ವೀಟ್ ಮಾಡಿದ್ದಾರೆ.
Hon’ble Congress President has decided not to celebrate her birthday, tomorrow the 9th December.
Urging party workers and supporters to strictly avoid any celebrations.
— K C Venugopal (@kcvenugopalmp) December 8, 2021
ನಿನ್ನೆ ಡಿಸೆಂಬರ್ 8ರಂದು ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ ಸೇನಾಧಿಕಾರಿಗಳು ವೆಲ್ಲಿಂಗ್ಟನ್ಗೆ ತೆರಳುತ್ತಿದ್ದರು. ದೆಹಲಿಯಿಂದ ಬೆಳಗ್ಗೆ ವಿಶೇಷ ವಿಮಾನದಲ್ಲಿ ಸುಲೂರ್ಗೆ ಹೋಗಿ, ಅಲ್ಲಿಂದ ವೆಲ್ಲಿಂಗ್ಟನ್ಗೆ ತೆರಳುತ್ತಿದ್ದರು. ಆದರೆ ತಮಿಳುನಾಡಿನ ಊಟಿ ಸಮೀಪ ಕೂನೂರ್ಬಳಿ ಗುಡ್ಡ ಪ್ರದೇಶದಲ್ಲಿ ಪತನಗೊಂಡಿತ್ತು. ಇದು ವಿವಿಐಪಿ ಹೆಲಿಕಾಪ್ಟರ್ ಆಗಿದ್ದು, ಎಲ್ಲರೀತಿಯ ಮುಂಜಾಗ್ರತೆಯನ್ನು ತೆಗೆದುಕೊಂಡಿದ್ದಾಗ್ಯೂ ಪತನಗೊಂಡಿದ್ದು ಹೇಗೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆಯೂ ಪ್ರಾರಂಭವಾಗಿದೆ. ಆದರೆ ಜನರಲ್ ಬಿಪಿನ್ ರಾವತ್ ಮತ್ತು ಇತರ ಸೇನಾಧಿಕಾರಿಗಳ ಸಾವಿಗೆ ಇಡೀ ದೇಶ ಮರುಗುತ್ತಿದೆ. ಪ್ರಧಾನಿ ಮೋದಿ, ರಾಮನಾಥ್ ಕೋವಿಂದ್, ಅಮಿತ್ ಶಾ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ರಾಹುಲ್ ಗಾಂಧಿ ಸೇರಿ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
Published On - 9:34 am, Thu, 9 December 21