Sadhana Gupta Death: ಎಸ್ ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಪತ್ನಿ ಸಾಧನಾ ಗುಪ್ತ ನಿಧನ
ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಪತ್ನಿ ಸಾಧನಾ ಗುಪ್ತಾ ನಿಧನರಾಗಿದ್ದಾರೆ. ಜ್ವರ ಮತ್ತು ಶ್ವಾಸಕೋಶದ ಸೋಂಕಿನಿಂದಾಗಿ ಹಲವು ದಿನಗಳ ಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಧನಾ ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿ.
ನವದೆಹಲಿ: ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಪತ್ನಿ ಸಾಧನಾ ಗುಪ್ತಾ ನಿಧನರಾಗಿದ್ದಾರೆ. ಜ್ವರ ಮತ್ತು ಶ್ವಾಸಕೋಶದ ಸೋಂಕಿನಿಂದಾಗಿ ಹಲವು ದಿನಗಳ ಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಧನಾ ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿ. ಅವರು ಪ್ರತೀಕ್ ಯಾದವ್ ಅವರ ತಾಯಿ ಮತ್ತು ಬಿಜೆಪಿ ನಾಯಕಿ ಅರ್ಪಣಾ ಯಾದವ್ ಅವರ ಅತ್ತೆ. ಸಾಧನಾ ಗುಪ್ತಾ ಅವರಿಗೆ ಸಕ್ಕರೆ ಸೇರಿದಂತೆ ಹಲವು ಆರೋಗ್ಯದ ಸಮಸ್ಯೆಗಳು ಇತ್ತು. ಇದರಿಂದಾಗಿ ಅವರನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಶ್ವಾಸಕೋಶದ ಸೋಂಕಿನ ಸಮಸ್ಯೆಯನ್ನು ಹೊಂದಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾಧನಾ ಶನಿವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮುಲಾಯಂ ಸಿಂಗ್ ಯಾದವ್ ಕೂಡ ಇದೇ ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನು ಓದಿ: ಭಾರೀ ಮಳೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೇದಾರನಾಥ ಯಾತ್ರೆ ಸ್ಥಗಿತ
ಮುಲಾಯಂ ಸಿಂಗ್ ಅವರ ಮೊದಲ ಪತ್ನಿ ಮತ್ತು ಅಖಿಲೇಶ್ ಯಾದವ್ ಅವರ ತಾಯಿ ಮಾಲ್ತಿ ದೇವಿ ಅವರು 2003 ರಲ್ಲಿ ನಿಧನರಾದರು, ಅವರು ಮುಲಾಯಂಗಿಂತ 20 ವರ್ಷ ಚಿಕ್ಕವರಾಗಿದ್ದರು . ಇದರ ನಂತರ, 23 ಮೇ 2003 ರಂದು, ಮುಲಾಯಂ ಸಿಂಗ್ ಸಾಧನಾ ಗುಪ್ತಾ ಅವರನ್ನು ಮದುವೆಯಾದರೂ. ಇದು ಸಾಧನಾ ಗುಪ್ತಾ ಅವರ ಎರಡನೇ ವಿವಾಹವೂ ಆಗಿತ್ತು. ಈ ಹಿಂದೆ ಫರೂಕಾಬಾದ್‌ನ ಚಂದ್ರಪ್ರಕಾಶ್ ಗುಪ್ತಾ ಅವರನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ವರ್ಷಗಳ ನಂತರ ಅವರು ವಿಚ್ಛೇದನ ಪಡೆದರು.
Published On - 3:52 pm, Sat, 9 July 22