ಆಂಧ್ರಪ್ರದೇಶ: ಕುಡಿದ ಮತ್ತಿನಲ್ಲಿ ವೇಗವಾಗಿ ಕಾರು ಚಾಲನೆ, 8 ಬೈಕ್ಗಳಿಗೆ ಗುದ್ದಿ ಮರಕ್ಕೆ ಡಿಕ್ಕಿ ಹೊಡೆದ ಕಾರು, ಚಾಲಕ ಪರಾರಿ
ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದ ಪರಿಣಾಮ ಅದು 8 ದ್ವಿಚಕ್ರ ವಾಹನಗಳಿಗೆ ಗುದ್ದಿ, ಕೊನೆಯದಾಗಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದ ಪರಿಣಾಮ ಅದು 8 ದ್ವಿಚಕ್ರ ವಾಹನಗಳಿಗೆ ಗುದ್ದಿ, ಕೊನೆಯದಾಗಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ವಿಐಪಿ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಪೊಲೀಸರ ಪ್ರಕಾರ ವ್ಯಕ್ತಿಯನ್ನು ಗೀತ್ ಮುಖರ್ಜಿ ಎಂದು ಗುರುತಿಸಲಾಗಿದೆ.
ರಾತ್ರಿ 11 ಗಂಟೆ ಸುಮಾರಿಗೆ, ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದು ಗೊಂದಲವನ್ನು ಉಂಟುಮಾಡಿದ ನಂತರ, ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮತ್ತಷ್ಟು ಓದಿ: ಗುರುಗ್ರಾಮ: ಕುಡಿದ ಮತ್ತಿನಲ್ಲಿ 3 ಮಂದಿಗೆ ಜೀಪ್ ಡಿಕ್ಕಿ ಹೊಡೆಸಿದ ಪೊಲೀಸ್ ಹೆಡ್ಕಾನ್ಸ್ಟೆಬಲ್ ಬಂಧನ
ಪೊಲೀಸರು ಅಪಘಾತದ ಕುರಿತು ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದಾರೆ, ವ್ಯಕ್ತಿ ಕುಡಿದಿದ್ದನೋ ಇಲ್ಲಿವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ವರದಿಗಾಗಿ ಕಾಯುತ್ತಿದ್ದಾರೆ.
ಆರಂಭಿಕ ವರದಿಗಳು ಚಾಲಕ ಮಹಿಳೆ ಎಂದು ಸೂಚಿಸಿದ್ದವು ಆದರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅದು ಪುರುಷ ಎಂದು ಎನ್‌ಡಿಟಿವಿಗೆ ಸ್ಪಷ್ಟಪಡಿಸಿದ್ದಾರೆ.
Eight two-wheelers parked on the roadside were damaged as a speeding Innova hit the pavement and rammed into the parked vehicles and a tree before coming to a halt. The incident occurred on VIP Road, Visakhapatnam.#vizag #visakhapatnam #andhrapradesh #accident #viral #nenews pic.twitter.com/xZCOiXH0zd
— nenewslive (@NENEWS24x7) August 2, 2023
ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಮತ್ತು ಸಲಹಾ ಸಂಸ್ಥೆ EY ಯ ಇತ್ತೀಚಿನ ವರದಿಯ ಪ್ರಕಾರ, ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಕ್ಕೆ ಸಂಬಂಧಿಸಿದ ಸಾವುಗಳು ಸಂಭವಿಸುವ ದೇಶವಾಗಿದೆ. ಪ್ರತಿ ವರ್ಷ ಅಪಘಾತದಲ್ಲಿ ಸುಮಾರು 15 ಲಕ್ಷ ಜೀವಗಳು ಬಲಿಯಾಗುತ್ತಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ