AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SpiceJet: ಗಗನಸಖಿ ಜೊತೆಗೆ ಅನುಚಿತ ವರ್ತನೆ ವಿಮಾನದಿಂದ ಪ್ರಯಾಣಿಕರನ್ನು ಕೆಳಗಿಳಿಸಿದ ಸ್ಪೈಸ್​ಜೆಟ್

ಗಗನಸಖಿಯೊಬ್ಬರಿಗೆ ಹಿಂಸೆಯಾಗುವ ರೀತಿಯಲ್ಲಿ ಆರೋಪಿ ಪ್ರಯಾಣಿಕ ಅಂಗಾಂಗ ಸ್ಪರ್ಶ ಮಾಡಿದ್ದ ಎಂದು ಸಿಬ್ಬಂದಿ ಆರೋಪಿಸಿದ್ದಾರೆ

SpiceJet: ಗಗನಸಖಿ ಜೊತೆಗೆ ಅನುಚಿತ ವರ್ತನೆ ವಿಮಾನದಿಂದ ಪ್ರಯಾಣಿಕರನ್ನು ಕೆಳಗಿಳಿಸಿದ ಸ್ಪೈಸ್​ಜೆಟ್
ಸ್ಪೈಸ್​ಜೆಟ್ ವಿಮಾನದಲ್ಲಿ ಸಿಬ್ಬಂದಿ ಮತ್ತು ಪ್ರಯಾಣಿಕರ ವಾಗ್ವಾದ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 24, 2023 | 8:35 AM

ದೆಹಲಿ: ಮಹಿಳಾ ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸಿದ ಪ್ರಯಾಣಿಕನನ್ನು ಸ್ಪೈಸ್​ಜೆಟ್ ವಿಮಾನಯಾನ (SpiceJet) ಸಂಸ್ಥೆಯು ಕೆಳಗಿಳಿಸಿದ ಘಟನೆ ಸೋಮವಾರ ನಡೆದಿದೆ. ಈ ಕುರಿತು ಸ್ಪೈಸ್​ಜೆಟ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಘಟನೆ ಕುರಿತ ವಿಡಿಯೊ ತುಣುಕೊಂದನ್ನು ಎಎನ್​ಐ ಸಂಸ್ಥೆಯು ಟ್ವೀಟ್ ಮಾಡಿದ್ದು, ಪುರುಷ ಪ್ರಯಾಣಿಕರೊಬ್ಬರು ಮಹಿಳಾ ಸಿಬ್ಬಂದಿ (Female Crew Member) ಜೊತೆಗೆ ಅನುಚಿತವಾಗಿ ವರ್ತಿಸಿದರೆಂದು ಆರೋಪಿಸಲಾದ ಬೆಳವಣಿಗೆಯ ನಂತರ ನಡೆದ ಜಗಳ ಇದರಲ್ಲಿ ದಾಖಲಾಗಿದೆ.

‘ಜನವರಿ 23, 2023ರಂದು ದೆಹಲಿ-ಹೈದರಾಬಾದ್ ಸ್ಪೈಸ್​ಜೆಟ್ ವಿಮಾನದಲ್ಲಿ ಘಟನೆ ನಡೆದಿದೆ. ವಿಮಾನದ ಬೋರ್ಡಿಂಗ್ (ಪ್ರಯಾಣಿಕರ ಪ್ರವೇಶ) ವೇಳೆ ಒಬ್ಬ ಪ್ರಯಾಣಿಕರು ಸಿಬ್ಬಂದಿಯೊಂದು ಅನುಚಿತವಾಗಿ ವರ್ತಿಸಿದರು, ಹಿಂಸೆ ನೀಡಿದರು. ಅವರು ತಕ್ಷಣ ಈ ಕುರಿತು ಭದ್ರತಾ ದಳ ಹಾಗೂ ಇತರ ಸಿಬ್ಬಂದಿಗೆ ಮಾಹಿತಿ ನೀಡಿದರು. ನಂತರ ಆರೋಪಿ ಪ್ರಯಾಣಿಕ ಹಾಗೂ ಸಹಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ, ಭದ್ರತಾ ಸಿಬ್ಬಂದಿಯ ವಶಕ್ಕೆ ಒಪ್ಪಿಸಲಾಯಿತು’ ಎಂದು ಸ್ಪೈಸ್​ಜೆಟ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಗಗನಸಖಿಯೊಬ್ಬರಿಗೆ ಹಿಂಸೆಯಾಗುವ ರೀತಿಯಲ್ಲಿ ಆರೋಪಿ ಪ್ರಯಾಣಿಕ ಅಂಗಾಂಗ ಸ್ಪರ್ಶ ಮಾಡಿದ್ದ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಆರೋಪಿ ಪ್ರಯಾಣಿಕನು ತಾನು ಅಂಥ ದುಷ್ಕೃತ್ಯ ಎಸಗಿಲ್ಲ. ಅಚಾನಕ್​ ಆಗಿ ನನ್ನ ಕೈ ಅವರನ್ನು ಮುಟ್ಟಿತು. ವಿಮಾನದಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ಹೀಗಾಯಿತೇ ವಿನಃ ಇದು ಉದ್ದೇಶಪೂರ್ವಕ ಕೃತ್ಯ ಅಲ್ಲ ಎಂದು ಸಮರ್ಥಿಸಿಕೊಂಡರು. ಸಿಬ್ಬಂದಿಯ ಪರವಾಗಿ ವಿಮಾನಸಂಸ್ಥೆಯು ಗಟ್ಟಿಯಾಗಿ ನಿಂತ ನಂತರ ಆರೋಪಿ ಪ್ರಯಾಣಿಕನು ಲಿಖಿತ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ಕ್ಷಮೆಯಾಚಿಸಿದ. ಆದರೆ ಪ್ರಯಾಣದಲ್ಲಿ ಮುಂದೆಯೂ ತೊಂದರೆಯಾಗಬಹುದು ಎಂದು ಅಂದಾಜಿಸಿದ ಸ್ಪೈಸ್​ಜೆಟ್​ ವ್ಯವಸ್ಥಾಪಕರು ಆರೋಪಿ ಪ್ರಯಾಣಿಕನನ್ನು ಕೆಳಗಿಳಿಸಲು ನಿರ್ಧರಿಸಿದರು.

ವಿಮಾನದಲ್ಲಿ ಪ್ರಯಾಣಿಕರ ಅನುಚಿತ ವರ್ತನೆ ಇದೇ ಮೊದಲಲ್ಲ

ಏರ್​ ಇಂಡಿಯಾದಲ್ಲಿ ಪ್ರಯಾಣಿಕರು ಅನುಚಿತವಾಗಿ ವರ್ತಿಸಿದ ಎರಡು ಘಟನೆಗಳು ಒಂದಾದಮೇಲೊಂದರಂತೆ ವರದಿಯಾದ ನಂತರ ನಾಗರಿಕ ವಿಮಾನಯಾನದ ಮಹಾನಿರ್ದೇಶಕರು (ಡಿಜಿಸಿಎ) ಏರ್ ​ಇಂಡಿಯಾದ ವ್ಯವಸ್ಥಾಪಕರಿಗೆ ಕಟುವಾಗಿ ನೊಟೀಸ್ ಜಾರಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಏರ್​ ಇಂಡಿಯಾದ ಓರ್ವ ಪ್ರಯಾಣಿಕ ಶೌಚಾಲಯದಲ್ಲಿ ಸಿಗರೇಟ್ ಸೇದುತ್ತಿದ್ದ. ನಿಲ್ಲಿಸುವಂತೆ ಹೇಳಿದ ಸಿಬ್ಬಂದಿಯ ಮಾತಿಗೆ ಬೆಲೆ ಕೊಟ್ಟಿರಲಿಲ್ಲ. ಮತ್ತೋರ್ವ ಪ್ರಯಾಣಿಕ ಮಹಿಳಾ ಸಹಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಈ ಎರಡೂ ಪ್ರಕರಣಗಳನ್ನು ಡಿಜಿಸಿಎ ಗಂಭೀರವಾಗಿ ಪರಿಗಣಿಸಿತ್ತು.

ಪ್ರಯಾಣಿಕರಲ್ಲಿ ಶಿಸ್ತು ಕಾಪಾಡುವ ಜವಾಬ್ದಾರಿಯನ್ನೂ ವಿಮಾನಯಾನ ಸಂಸ್ಥೆಗಳು ನಿರ್ವಹಿಸಬೇಕು. ನಿಯಮ ಉಲ್ಲಂಘಿಸುವ ಪ್ರಯಾಣಿಕರ ಬಗ್ಗೆ ಭದ್ರತಾ ಸಿಬ್ಬಂದಿಗೆ ಮಾಹಿತಿ ಕೊಟ್ಟು, ಮುಂದಿನ ಕ್ರಮಕ್ಕೆ ನೆರವಾಗಬೇಕು ಎಂದು ಪರೋಕ್ಷವಾಗಿ ಡಿಜಿಸಿಎ ಎಚ್ಚರಿಸಿತ್ತು. ಈ ನೊಟೀಸ್ ನಂತರ ಪ್ರಯಾಣಿಕರ ಬಗ್ಗೆ ವೈಮಾನಿಕ ಕಂಪನಿಗಳ ಧೋರಣೆಯೂ ಬದಲಾಗಿದೆ.

ಇದನ್ನೂ ಓದಿ: Air India: ತಾಂತ್ರಿಕ ದೋಷ: ಮಸ್ಕತ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ತಿರುವನಂತಪುರಂಗೆ ವಾಪಸ್

ಮತ್ತಷ್ಟು ರಾಷ್ಟ್ರೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:35 am, Tue, 24 January 23

ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಡಿಸ್​ಪ್ಲೇ ಬೋರ್ಡಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ಪದ ಬಳಕೆ
ಡಿಸ್​ಪ್ಲೇ ಬೋರ್ಡಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ಪದ ಬಳಕೆ
ಹೆಂಡತಿಯೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಸೇಲ್ಸ್ ಮ್ಯಾನೇಜರ್
ಹೆಂಡತಿಯೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಸೇಲ್ಸ್ ಮ್ಯಾನೇಜರ್
ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
ರಾಗಿಣಿ ಹಾಗೂ ಕುರಿ ಸೇರಿದ್ರೆ ‘ಕುರಾಗಿಣಿ’; ಪ್ರತಾಪ್ ಲೆಕ್ಕಾಚಾರ ನೋಡಿ
ರಾಗಿಣಿ ಹಾಗೂ ಕುರಿ ಸೇರಿದ್ರೆ ‘ಕುರಾಗಿಣಿ’; ಪ್ರತಾಪ್ ಲೆಕ್ಕಾಚಾರ ನೋಡಿ
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ