ಗುರುದೇವ್ ಶ್ರೀ ಶ್ರೀ ರವಿಶಂಕರ್​ ಗುರೂಜಿಗೆ ಫಿಜಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಲಭ್ಯ

| Updated By: ವಿವೇಕ ಬಿರಾದಾರ

Updated on: Oct 28, 2024 | 10:37 AM

ಫಿಜಿ ದೇಶವು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಜಾಗತಿಕ ಆಧ್ಯಾತ್ಮಿಕ ಗುರು ಶ್ರೀಶ್ರೀ ರವಿಶಂಕರ್ ಅವರಿಗೆ ಪ್ರದಾನ ಮಾಡಿದೆ. ಶಾಂತಿ, ಸಾಮರಸ್ಯ, ಮತ್ತು ಮಾನವೀಯ ಸೇವೆಗಳಿಗಾಗಿ ಈ ಗೌರವ ಸಂದಿದೆ. ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮೂಲಕ ಮಾನಸಿಕ ಆರೋಗ್ಯ, ಶಿಕ್ಷಣ ಮತ್ತು ಸಮುದಾಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ.

ಗುರುದೇವ್ ಶ್ರೀ ಶ್ರೀ ರವಿಶಂಕರ್​ ಗುರೂಜಿಗೆ ಫಿಜಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಲಭ್ಯ
ರವಿಶಂಕರ್​ ಗುರೂಜಿಗೆ ಫಿಜಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಲಭ್ಯ
Follow us on

ಬೆಂಗಳೂರು, ಅಕ್ಟೋಬರ್ 27: ಜಾಗತಿಕ ಆಧ್ಯಾತ್ಮಿಕ ಗುರು, ಮಾನವತಾವಾದಿ ನಾಯಕ ಗುರುದೇವ್ ಶ್ರೀ ಶ್ರೀ ರವಿಶಂಕರ್​ ಗುರೂಜಿಗೆ (Ravi Shankar) ದಕ್ಷಿಣ ಪೆಸಿಫಿಕ್ ರಾಷ್ಟ್ರವಾದ ಫಿಜಿ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಾನವ ಸ್ಫೂರ್ತಿಯನ್ನು ನಿರಂತರವಾಗಿ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅವರು ಮಾಡುತ್ತಿರುವ ವಿವಿಧ ಸಮುದಾಯಗಳನ್ನು ಶಾಂತಿ ಮತ್ತು ಸಾಮರಸ್ಯದ ಮೂಲಕ ಒಂದಾಗಿಸುವ ಅವರ ಕಾರ್ಯಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ರವಿಶಂಕರ್​ ಗುರೂಜಿಗೆ “ಹಾನರರಿ ಆಫಿಸರ್ ಆಫ್ ದಿ ಆರ್ಡರ್ ಆಫ್ ಫೀಜಿ” ಬಿರುದನ್ನು ಫಿಜಿ ರೀಪಬ್ಲಿಕ್​ನ ಅಧ್ಯಕ್ಷ ಹೆಚ್.ಇ ರಟು ವಿಲ್ಲಿಯಮೆ ಎಂ. ಕಟೋನಿವೆರಿ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಆ ಮೂಲಕ ರವಿಶಂಕರ್​ ಗುರೂಜಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡುವತ್ತಿರುವ ಆರನೇ ದೇಶವಾಗಿ ಫಿಜಿ ಹೊರಹೊಮ್ಮದೆ.

ಆರ್ಟ್ ಆಫ್ ಲಿವಿಂಗ್​ ಮೂಲಕ ರವಿಶಂಕರ್​ ಗುರೂಜಿ ಕಳೆದ 43 ವರ್ಷಗಳಿಂದ ಜನ ಸಮೂಹಕ್ಕೆ ಸಂತೋಷ ಮತ್ತು ಸಾಮರಸ್ಯವನ್ನು ಹರಡುತ್ತಿದ್ದಾರೆ. ಇದರೊಂದಿಗೆ ಅವರು ಮಾನಸಿಕ ಆರೋಗ್ಯ, ಶಿಕ್ಷಣ, ಪರಿಸರ, ಮಹಿಳಾ ಹಾಗೂ ಯುವಕ ಸಬಲೀಕರಣ, ಒತ್ತಡ ನಿವಾರಣೆ, ಧ್ಯಾನ ಹೀಗೆ ಅನೇಕಾನೇಕ ಕ್ಷೇತ್ರಗಳಲ್ಲಿ ಅವರು ನಿರ್ವಹಿಸುತ್ತಿರುವ ಕಾರ್ಯಗಳಿಗಾಗಿ ಈ ಪ್ರಶಸ್ತಿ ನೀಡಲಾಗಿದೆ.

ಇನ್ನು ಫಿಜಿ ಭೇಟಿ ವೇಳೆ ಉಪಪ್ರಧಾನಿ ವಿಲಿಯಮೆ ಗಾವೋಕ ಮತ್ತು ಫಿಜಿಯ ಸಂಯುಕ್ತ ರಾಷ್ಟ್ರಗಳ ವಸತಿ ಸಂಯೋಜಕ ಡಿರ್ಕ್ ವಾಗೆನರ್ ಸೇರಿದಂತೆ ಅನೇಕ ಗಣ್ಯರೊಡನೆ ರವಿಶಂಕರ್​ ಗುರೂಜಿ ಸಂವಾದವನ್ನು ಮಾಡಿದ್ದಾರೆ.

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಈ ದ್ವೀಪ ರಾಷ್ಟ್ರದಲ್ಲಿ ಯುವಕ ಸಬಲೀಕರಣ, ಸ್ಥಳೀಯ ಸಮುದಾಯಗಳ ಮಾನಸಿಕ ಆರೋಗ್ಯದ ಸುಧಾರಣೆ, ಕಾಲಾತೀತ ಜ್ಞಾನವಾದ ಆಯುರ್ವೇದದ ಜ್ಞಾನದ ಪರಿಚಯದ ಮೂಲಕ ಸಮಗ್ರ ಬೆಳವಣಿಗೆಗೆ ಆರ್ಟ್ ಆಫ್ ಲಿವಿಂಗ್ ಹೇಗೆ ಕಾಣಿಕೆ ನೀಡಬಹುದೆಂದು ಚರ್ಚಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:11 pm, Sun, 27 October 24