AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವ ಕಾರಣಕ್ಕೂ ಶೆಲ್ಟರ್​​ಗಳಿಂದ ಹೊರಬರಬೇಡಿ, ನಾವು ಸ್ಥಳಾಂತರ ಮಾಡುತ್ತೇವೆ: ಸುಮಿಯಲ್ಲಿರುವ ವಿದ್ಯಾರ್ಥಿಗಳಿಗೆ ಭಾರತದಿಂದ ಸೂಚನೆ

ಸುಮಿ ಎಂಬುದು ಉಕ್ರೇನ್​​ನ ಈಶಾನ್ಯ ವಲಯದಲ್ಲಿರುವ ಒಂದು ನಗರ. ಇಲ್ಲಿ ಭಾರತೀಯ ವಿದ್ಯಾರ್ಥಿಗಳು ಸುಮಾರು 800 ಮಂದಿ ಇದ್ದಾರೆ. ಅಲ್ಲೀಗ ಸದ್ಯ ಯುದ್ಧದ ತೀವ್ರತೆಯೂ ಜಾಸ್ತಿಯಾಗಿದೆ.

ಯಾವ ಕಾರಣಕ್ಕೂ ಶೆಲ್ಟರ್​​ಗಳಿಂದ ಹೊರಬರಬೇಡಿ, ನಾವು ಸ್ಥಳಾಂತರ ಮಾಡುತ್ತೇವೆ: ಸುಮಿಯಲ್ಲಿರುವ ವಿದ್ಯಾರ್ಥಿಗಳಿಗೆ ಭಾರತದಿಂದ ಸೂಚನೆ
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on:Mar 05, 2022 | 4:58 PM

Share

ಉಕ್ರೇನ್​ನ ಸುಮಿ (Sumy) ಯುದ್ಧವಲಯದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ನಮಗೆ ಕಾಳಜಿಯಿದೆ. ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧ ತೀವ್ರತೆ ಹೆಚ್ಚಾಗಿರುವ ಸುಮಿಯಲ್ಲಿ ಇರುವ ವಿದ್ಯಾರ್ಥಿಗಳು ಯಾವ ಕಾರಣಕ್ಕೂ ಹೊರಬೀಳಬೇಡಿ. ಸಾಧ್ಯವಾದಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡು, ಶೆಲ್ಟರ್​​ಗಳ ಒಳಗೇ ಇರಿ. ಎಲ್ಲರನ್ನೂ ರಕ್ಷಣೆ ಮಾಡುವ ಸಲುವಾಗಿ, ಕದನ ವಿರಾಮ ಘೋಷಿಸಿ ಸುರಕ್ಷಿತ ಕಾರಿಡಾರ್​ ಸೃಷ್ಟಿಸಿಕೊಡುವಂತೆ ಭಾರತ ರಷ್ಯಾ ಮತ್ತು ಉಕ್ರೇನ್​ಗೆ ನಾವು ಒತ್ತಾಯಿಸಿದ್ದೇವೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ.

ಉಕ್ರೇನ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವೀಟ್​ ಮಾಡಿ, ಸುಮಿ ಯುದ್ಧ ವಲಯದಲ್ಲಿರುವ ವಿದ್ಯಾರ್ಥಿಗಳು ಇದ್ದಲ್ಲೇ ಸುರಕ್ಷಿತವಾಗಿರಿ. ಧೈರ್ಯಗೆಡಬೇಡಿ. ನಿಮ್ಮನ್ನು ಸ್ಥಳಾಂತರ ಮಾಡಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಪ್ರತಿಯೊಬ್ಬರನ್ನೂ ರಕ್ಷಣೆ ಮಾಡುವವರೆಗೂ ನಮ್ಮ ಕಂಟ್ರೋಲ್​ ರೂಂ ಸಕ್ರಿಯವಾಗಿಯೇ ಇರುತ್ತದೆ ಎಂದು ತಿಳಿಸಿದೆ.

ಸುಮಿ ಎಂಬುದು ಉಕ್ರೇನ್​​ನ ಈಶಾನ್ಯ ವಲಯದಲ್ಲಿರುವ ಒಂದು ನಗರ. ಇಲ್ಲಿ ಭಾರತೀಯ ವಿದ್ಯಾರ್ಥಿಗಳು ಸುಮಾರು 800 ಮಂದಿ ಇದ್ದಾರೆ. ಅಲ್ಲೀಗ ಸದ್ಯ ಯುದ್ಧದ ತೀವ್ರತೆಯೂ ಜಾಸ್ತಿಯಾಗಿದೆ. ಬಂಕರ್​, ಶೆಲ್ಟರ್​​ಗಳಲ್ಲಿರುವ ವಿದ್ಯಾರ್ಥಿಗಳು ಸೋಷಿಯಲ್ ಮೀಡಿಯಾಗಳಲ್ಲಿ ವಿವಿಧ ವಿಡಿಯೋಗಳನ್ನು ಹಾಕುತ್ತಿದ್ದಾರೆ. ರಾಯಭಾರಿ ಕಚೇರಿಗೆ ಎಸ್​ಒಎಸ್​ ಮೆಸೇಜ್​ಗಳನ್ನು ಕಳಿಸಿ, ತಮ್ಮನ್ನು ಕಾಪಾಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಇನ್ನು ವಿವಿಧ ದೇಶಗಳ ನಾಗರಿಕರು, ವಿದ್ಯಾರ್ಥಿಗಳ ರಕ್ಷಣೆಗಾಗಿ ಮಾನವೀಯ ಕಾರಿಡಾರ್​​ಗಳನ್ನು ಅನುವು ಮಾಡಿಕೊಡಲು ರಷ್ಯಾ ತಾತ್ಕಾಲಿಕವಾಗಿ ಕದನ ವಿರಾಮ ಘೋಷಿಸಿದೆ.

ಇದನ್ನೂ ಓದಿ: Milk Price Hike: ಭಾನುವಾರದಿಂದ ಮದರ್ ಡೈರಿ ಹಾಲಿನ ಬೆಲೆ 1 ಲೀಟರ್​ಗೆ 2 ರೂ. ಏರಿಕೆ

Published On - 4:58 pm, Sat, 5 March 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!