AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಯಲ್ ರನ್ ವೇಳೆ ದುರ್ಗ್-ವಿಜಾಗ್ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಾಟ; ಐವರ ಬಂಧನ

"ರೈಲು ಶುಕ್ರವಾರ ರಾತ್ರಿ 9 ಗಂಟೆಯ ಸುಮಾರಿಗೆ ಪ್ರಾಯೋಗಿಕ ಚಾಲನೆಯಲ್ಲಿ ವಿಶಾಖಪಟ್ಟಣದಿಂದ ದುರ್ಗ್‌ಗೆ ಹಿಂತಿರುಗುವಾಗ ಬಾಗ್‌ಬಹ್ರಾ ರೈಲು ನಿಲ್ದಾಣದ ಮೂಲಕ ಹಾದುಹೋಗುತ್ತಿತ್ತು" ಎಂದು ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ನ ಪ್ರವೀಣ್ ಸಿಂಗ್ ಧಕಡ್ ಹೇಳಿದ್ದಾರೆ ಎಂದು ಪಿಟಿಐ ಉಲ್ಲೇಖಿಸಿದೆ.

ಟ್ರಯಲ್ ರನ್ ವೇಳೆ ದುರ್ಗ್-ವಿಜಾಗ್ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಾಟ; ಐವರ ಬಂಧನ
ವಂದೇ ಭಾರತ್
ರಶ್ಮಿ ಕಲ್ಲಕಟ್ಟ
|

Updated on: Sep 14, 2024 | 4:41 PM

Share

ದೆಹಲಿ ಸೆಪ್ಟೆಂಬರ್ 14: ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾಯೋಗಿಕ ಚಾಲನೆ ವೇಳೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಛತ್ತೀಸ್‌ಗಢದ ಮಹಾಸುಮುಂದ್‌ನಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬರ ಸಂಬಂಧಿ ರಾಜಕೀಯ ಪಕ್ಷದ ಸದಸ್ಯರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತಮ್ಮ 74 ನೇ ಹುಟ್ಟುಹಬ್ಬದ ಮುನ್ನಾದಿನದಂದು ವಂದೇ ಭಾರತ್​​ಗೆ ಚಾಲನೆ ನೀಡುವ ಕೆಲವು ದಿನಗಳ ಮೊದಲು ಈ ಘಟನೆ ಸಂಭವಿಸಿದೆ. ಇದು ಛತ್ತೀಸ್‌ಗಢದ ದುರ್ಗ್ ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣವನ್ನು (ವೈಜಾಗ್) ಸಂಪರ್ಕಿಸುತ್ತದೆ.

“ರೈಲು ಶುಕ್ರವಾರ ರಾತ್ರಿ 9 ಗಂಟೆಯ ಸುಮಾರಿಗೆ ಪ್ರಾಯೋಗಿಕ ಚಾಲನೆಯಲ್ಲಿ ವಿಶಾಖಪಟ್ಟಣದಿಂದ ದುರ್ಗ್‌ಗೆ ಹಿಂತಿರುಗುವಾಗ ಬಾಗ್‌ಬಹ್ರಾ ರೈಲು ನಿಲ್ದಾಣದ ಮೂಲಕ ಹಾದುಹೋಗುತ್ತಿತ್ತು” ಎಂದು ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ನ ಪ್ರವೀಣ್ ಸಿಂಗ್ ಧಕಡ್ ಹೇಳಿದ್ದಾರೆ ಎಂದು ಪಿಟಿಐ ಉಲ್ಲೇಖಿಸಿದೆ.

ಕೆಲವು ಸಮಾಜ ವಿರೋಧಿ ಶಕ್ತಿಗಳು ಅದರ ಮೇಲೆ ಕಲ್ಲು ತೂರಾಟ ಮಾಡಿದ್ದರಿಂದ C2, C4 ಮತ್ತು C9 ಕೋಚ್‌ಗಳ ಕಿಟಕಿ ಫಲಕಗಳನ್ನು ಹಾನಿಗೊಳಿಸಿದರು. ಯಾರಿಗೂ ಗಾಯಗಳಾಗಿಲ್ಲ ಎಂದು ಆರ್‌ಪಿಎಫ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಸಹಾಯಕ ಸಬ್-ಇನ್‌ಸ್ಪೆಕ್ಟರ್ ನೇತೃತ್ವದ ಆರ್‌ಪಿಎಫ್ ಬೆಂಗಾವಲು ತಂಡವು ಕಲ್ಲು ತೂರಾಟ ಬಗ್ಗೆ ಎಚ್ಚರಿಕೆಯನ್ನು ಕಳುಹಿಸಿದ್ದು, ನಂತರ ಭದ್ರತಾ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಬಾಗ್ಬಹ್ರಾ ನಿವಾಸಿಗಳಾದ ಶಿವಕುಮಾರ್ ಬಾಘೇಲ್, ದೇವೇಂದ್ರ ಚಂದ್ರಕರ್, ಜಿತು ತಾಂಡಿ, ಲೇಖ್ರಾಜ್ ಸೋನ್ವಾನಿ ಮತ್ತು ಅರ್ಜುನ್ ಯಾದವ್ ಎಂಬವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಮೂರು ಕುಟುಂಬಗಳು ಜಮ್ಮು ಕಾಶ್ಮೀರವನ್ನು ನಾಶಪಡಿಸಿದವು: ದೋಡಾದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಅಧಿಕಾರಿಗಳ ಪ್ರಕಾರ, ಬಾಘೇಲ್ ಅವರ ಸೊಸೆ ರಾಜ್ಯದ ವಿರೋಧ ಪಕ್ಷದ ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್.

ರೈಲ್ವೇ ಕಾಯಿದೆ, 1989 ರ ಸೆಕ್ಷನ್ 153 (ಉದ್ದೇಶಪೂರ್ವಕ ಕ್ರಿಯೆ ಅಥವಾ ಲೋಪದಿಂದ ರೈಲ್ವೆಯಲ್ಲಿ ಪ್ರಯಾಣಿಸುವ ವ್ಯಕ್ತಿಯ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಯಾರಾದರೂ ಐದು ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ) ಅಡಿಯಲ್ಲಿ ಗುಂಪನ್ನು ದಾಖಲಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ