AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಎಂದರೇನು? ವಿದ್ಯಾರ್ಥಿನಿಯ ಫನ್ನಿ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ! ಜನ ಮನಸಾರೆ ನಗ್ತಿದಾರೆ

ಶಾಲೆಯಲ್ಲಿ ವಿವಿಧ ರೀತಿಯ ಮಕ್ಕಳಿರುತ್ತಾರೆ. ಕೆಲವು ವಿದ್ಯಾರ್ಥಿಗಳು ಅಧ್ಯಯನ ಮಾಡಲು ತುಂಬಾ ಆಸಕ್ತಿ ಹೊಂದಿದ್ದರೆ, ಕೆಲವು ವಿದ್ಯಾರ್ಥಿಗಳು ತುಂಬಾ ಚಾಣಾಕ್ಷರು. ಬುದ್ಧಿವಂತರೂ ಆಗಿಗಿರುತ್ತಾರೆ. ಆದರೆ ಕೆಲವು ವಿದ್ಯಾರ್ಥಿಗಳು ಸಾಮಾನ್ಯ ಬುದ್ಧಿವಂತಿಕೆಯನ್ನು ಹೊಂದಿದ್ದರೂ ತಮ್ಮ ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಕೆಲವು ವಿದ್ಯಾರ್ಥಿಗಳು ಮನಸ್ಸಿಟ್ಟು ಅಧ್ಯಯನ ಮಾಡುವುದಿಲ್ಲ. ಆದರೆ ಅಂತಹ ವಿದ್ಯಾರ್ಥಿಗಳ ಹೃದಯ ಎಲ್ಲೆಲ್ಲೋ ಓಡಾಡುತ್ತಿರುತ್ತದೆ/ ಏನನ್ನೋ ಜಾಲಾಡುತ್ತಿರುತ್ತದೆ.

ಮದುವೆ ಎಂದರೇನು? ವಿದ್ಯಾರ್ಥಿನಿಯ ಫನ್ನಿ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ! ಜನ ಮನಸಾರೆ ನಗ್ತಿದಾರೆ
ಮದುವೆ ಎಂದರೇನು? ವಿದ್ಯಾರ್ಥಿಯ ಫನ್ನಿ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಸಾಧು ಶ್ರೀನಾಥ್​
|

Updated on: Oct 02, 2023 | 1:08 PM

Share

ಕೆಲವು ವಿದ್ಯಾರ್ಥಿಗಳು ಸಮಯ ಕಳೆಯಲು ತಮ್ಮ ನೆಚ್ಚಿನ ಉತ್ತರಗಳನ್ನು ಪರೀಕ್ಷಗೆ ನೀಡಿರುವ ಉತ್ತರ ಪತ್ರಿಕೆಗಳ ಮೇಲೆಯೇ ಗೀಚುತ್ತಾರೆ. ಉತ್ತರ ಸಮಂಜಸ ಅಲ್ಲದಿರಬಹುದು ಅದರೂ ನೆನಪಿನಲ್ಲಿ ಉಳಿಯುವಂತಹ ಉತ್ತರಗಳಾಗಿರುತ್ತವೆ. ಕೆಲ ಸಮಯದ ಹಿಂದೆ ಅಲ್ಲು ಅರ್ಜುನ್ ಅವರು ‘ಪುಷ್ಪ: ದಿ ರೈಸ್’ ಚಿತ್ರದಲ್ಲಿ ಪುಷ್ಪಾ.. ಪುಷ್ಪಾ ರಾಜ್ ಎಂದು ಬರೆದ ವಿದ್ಯಾರ್ಥಿಯ ಉತ್ತರ ಪತ್ರಿಕೆಯ ಚಿತ್ರ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು ನಿಮಗೆ ನೆನಪಿರಬಹುದು. ಆದರೆ ಇದೀಗ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಮದುವೆಯ ಬಗ್ಗೆ ವಿಚಿತ್ರ ವ್ಯಾಖ್ಯಾನ ನೀಡಿದ್ದಾಳೆ. ಇದನ್ನು ನೋಡಿದರೆ ಯಾರಪ್ಪಾ ಈ ಬಾಲೆ ಎಂದು ನೀವು ಯೋಚಿಸುತ್ತೀರಿ/ಮುಸಿಮನುಸಿ ನಗುತ್ತೀರಿ.

ಶಾಲೆಯಲ್ಲಿ ವಿವಿಧ ರೀತಿಯ ಮಕ್ಕಳಿರುತ್ತಾರೆ. ಕೆಲವು ವಿದ್ಯಾರ್ಥಿಗಳು ಅಧ್ಯಯನ ಮಾಡಲು ತುಂಬಾ ಆಸಕ್ತಿ ಹೊಂದಿದ್ದರೆ, ಕೆಲವು ವಿದ್ಯಾರ್ಥಿಗಳು ತುಂಬಾ ಚಾಣಾಕ್ಷರು. ಬುದ್ಧಿವಂತರೂ ಆಗಿಗಿರುತ್ತಾರೆ. ಆದರೆ ಕೆಲವು ವಿದ್ಯಾರ್ಥಿಗಳು ಸಾಮಾನ್ಯ ಬುದ್ಧಿವಂತಿಕೆಯನ್ನು ಹೊಂದಿದ್ದರೂ ತಮ್ಮ ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಕೆಲವು ವಿದ್ಯಾರ್ಥಿಗಳು ಮನಸ್ಸಿಟ್ಟು ಅಧ್ಯಯನ ಮಾಡುವುದಿಲ್ಲ. ಆದರೆ ಅಂತಹ ವಿದ್ಯಾರ್ಥಿಗಳ ಹೃದಯ ಎಲ್ಲೆಲ್ಲೋ ಓಡಾಡುತ್ತಿರುತ್ತದೆ/ ಏನನ್ನೋ ಜಾಲಾಡುತ್ತಿರುತ್ತದೆ.

ಮತ್ತಷ್ಟು ಓದಿ: ರಾಜಸ್ಥಾನದಲ್ಲಿ ಜನಸಂಘರ್ಷ್ ಯಾತ್ರೆ: ನಾವು ಕರ್ನಾಟಕದ ಕಾಂಗ್ರೆಸ್ ಪಕ್ಷದಿಂದ ಕಲಿಯಬೇಕು ಎಂದ ಸಚಿನ್ ಪೈಲಟ್

ಅಂತಹ ಉತ್ತರ ಸದ್ಯ ಅಂತರ್ಜಾಲದಲ್ಲಿ ಜಾಲಾಡುತ್ತಿದೆ. ಅದೀಗ ವೈರಲ್ ಆಗಿದೆ. ಇದನ್ನು ನೋಡಿದರೆ ನಗು ಬರುತ್ತದೆ.. ಆ ವಿದ್ಯಾರ್ಥಿನಿ ಅದೆಷ್ಟು ತಮಾಷೆಯಾಗಿ ಬರೆದಿದ್ದಾರೆ ಗೊತ್ತಾ… ಶಾಲೆ/ ಕಾ;ಲೇಜು ಸೇರಿದ ಸ್ಟೂಡೆಂಟುಗಳಿಗೆ ವರ್ಷ ಆರಂಭವಾಗುತ್ತಿದ್ದಂತೆ ಹಲವು ಯೂನಿಟ್ ಟೆಸ್ಟ್​​ಗಳು, ತ್ರೈಮಾಸಿಕ, ಅರ್ಧ ವರ್ಷದ ಪರೀಕ್ಷೆಗಳು ಬರುತ್ತಲೇ ಇರುತ್ತವೆ. ಯಾವುದೇ ವಿದ್ಯಾರ್ಥಿಯಾಗಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮತ್ತು ಉತ್ತಮ ಅಂಕಗಳನ್ನು ಪಡೆಯಲು ಬಯಸುತ್ತಾರೆ. ಆದರೆ ಕೆಲವು ವಿದ್ಯಾರ್ಥಿಗಳು ಸಮಯ ಕಳೆಯಲು ತಮಗಿಷ್ಟ ಬಂದ, ತಮ್ಮ ನೆಚ್ಚಿನ ಉತ್ತರಗಳನ್ನು ಆನ್ಸರ್​​​ ಪೇಪರ್ ಮೇಲೆ ಗೀಚುತ್ತಾರೆ. ಇವು ನೆನಪಿನಲ್ಲಿ ಉಳಿಯುತ್ತವೆ.

ಮದುವೆಯ ವ್ಯಾಖ್ಯಾನವೇನು ಎಂಬಬುದಕ್ಕೆ ಈ ವಿದ್ಯಾರ್ಥಿನಿಯ ಉತ್ತರ ನಗು ತರಿಸುತ್ತದೆ. ಅದು ಹೀಗಿದೆ: ಮದುವೆಯೆಂದರೆ ಅದು.. ಈಗ ನೀನು ದೊಡ್ಡವನಾಗಿದ್ದೀಯ. ಇಷ್ಟು ವರ್ಷ ನಿನ್ನನ್ನು ಸಾಕಿದ್ದೆವು.. ಇನ್ನು ನಮ್ಮಿಂದ ಆಗೋಲ್ಲ ಎನ್ನುತ್ತಾರೆ ಬಾಲಕಿಯ ಪೋಷಕರು. ನಂತರ ಹುಡುಗನನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಹುಡುಗಿಯ ಪೋಷಕರು ತಮ್ಮ ಮಗಳನ್ನು ಮದುವೆ ಮಾಡಿಕೊಟ್ಟು, ತಮ್ಮ ಮಗಳನ್ನು ಬೆಳೆಸುವ ಪುರುಷನನ್ನು ಹುಡುಕುತ್ತಾರೆ. ನಂತರ ಹುಡುಗಿ ಮತ್ತು ಹುಡುಗ ಭೇಟಿಯಾಗುತ್ತಾರೆ. ತಂದೆ-ತಾಯಿ ನಿಶ್ಚಯಿಸಿದವರನ್ನೇ ಮಗಳು ಮದುವೆಯಾಗುತ್ತಾಳೆ ಎಂದು ಮನದಾಳದ ಭಾವನೆಗಳನ್ನು ಪ್ರಸ್ತುತಪಡಿಸಿದ್ದಾಳೆ. ವಿದ್ಯಾರ್ಥಿನಿ ಬರೆದ ಉತ್ತರ ಶಿಕ್ಷಕರು ನಿತರುತ್ತರರಾಗಿದ್ದಾರೆ. ಆದರೆ ಅವಳ ಉತ್ತರ ಪತ್ರಿಕೆಯನ್ನು ಅಡ್ಡಲಾಗಿ ಹೊಡೆದಳು, ಶೂನ್ಯ ಅಂಕಗಳನ್ನು ದಯಪಾಲಿಸಿದ್ದಾರೆ.

ಈ ಚಿತ್ರವನ್ನು @srpdaa ಖಾತೆಯಿಂದ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ ಈ ಪೋಸ್ಟ್ ಗೆ ನಾನಾ ಕಾಮೆಂಟ್‌ಗಳನ್ನು ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ
ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ