ಆದದ್ದು ಆಗಲಿ ಎಂದು ಬಂಕರ್​​ನಿಂದ ಹೊರಬಂದು ರೈಲ್ವೆ ಸ್ಟೇಶನ್​​ನತ್ತ ಹೊರಟ ಭಾರತದ ವಿದ್ಯಾರ್ಥಿಗಳು; 1000 ಜನರಿಂದ ಕಾಲ್ನಡಿಗೆ

ಆದದ್ದು ಆಗಲಿ ಎಂದು ಬಂಕರ್​​ನಿಂದ ಹೊರಬಂದು ರೈಲ್ವೆ ಸ್ಟೇಶನ್​​ನತ್ತ ಹೊರಟ ಭಾರತದ ವಿದ್ಯಾರ್ಥಿಗಳು; 1000 ಜನರಿಂದ ಕಾಲ್ನಡಿಗೆ
ಬಂಕರ್​​ನಿಂದ ಹೊರಟಿರುವ ವಿದ್ಯಾರ್ಥಿಗಳು

ವೆಂಕಟೇಶ್​ ಅವರ ಪುತ್ರ ಅಮಿತ್​ (23). ನಿನ್ನೆ ಮೃತಪಟ್ಟ ವಿದ್ಯಾರ್ಥಿ ನವೀನ್​ ಮತ್ತು ಅಮಿತ್​ ಎಲ್ಲ ಒಂದೇ ಬಂಕರ್​​ನಲ್ಲಿಯೇ ಇದ್ದರು. ಅಮಿತ್ ಖಾರ್ಕೀವ್​ ವೈದ್ಯಕೀಯ ಕಾಲೇಜಿನಲ್ಲಿ ಐದನೇ ವರ್ಷದ ಮೆಡಿಕಲ್​ ಓದುತ್ತಿದ್ದರೆ, ನವೀನ್​ ನಾಲ್ಕನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು.

TV9kannada Web Team

| Edited By: Lakshmi Hegde

Mar 02, 2022 | 2:52 PM

ಉಕ್ರೇನ್​​ನಲ್ಲಿ ರಷ್ಯಾ ಮಾಡುತ್ತಿರುವ ಮಿಲಿಟರಿ ಕಾರ್ಯಾಚರಣೆಯಿಂದ ಕಂಗಾಲಾಗಿರುವ ಭಾರತೀಯರು ಮತ್ತು ಇತರ ದೇಶಗಳ ಪ್ರಜೆಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಂಕರ್​, ಬೇಸ್​ಮೆಂಟ್​ಗಳಲ್ಲಿ ಆಶ್ರಯ ಪಡೆದಿದ್ದಾರೆ. ಜೀವ ರಕ್ಷಣೆಗಾಗಿ ನೆಲದಾಳಕ್ಕೆ ಹೋಗಿರುವ ಜನರಿಗೆ ಈಗೀಗ ಊಟ-ತಿಂಡಿ ಸಿಗುತ್ತಿಲ್ಲ. ಶೌಚಗೃಹ ಇಲ್ಲದೆ ಪರದಾಡುವಂತಾಗಿದೆ. ಎಲ್ಲಿ ನೋಡಿದರೂ ಬಾಂಬ್​, ಮಿಸೆಲ್​, ರಾಕೆಟ್​, ಫೈರಿಂಗ್ ಶಬ್ದವೇ ಕಿವಿಗೆ ಅಪ್ಪಳಿಸುತ್ತಿದೆ. ಅದರಲ್ಲೂ ನಿನ್ನೆ ಖಾರ್ಕೀವ್​​ನಲ್ಲಿ ಭಾರತದ ವಿದ್ಯಾರ್ಥಿ ನವೀನ್​ ರಷ್ಯಾ ದಾಳಿಯಿಂದ ಮೃತಪಟ್ಟ ನಂತರ ಭಾರತ ಸೇರಿ ಇನ್ನಿತರ ಕೆಲವು ದೇಶಗಳ ವಿದ್ಯಾರ್ಥಿಗಳು, ಉದ್ಯೋಗಿಗಳೆಲ್ಲ ಇಂದು ಖಾರ್ಕೀವ್​​ನಿಂದ ನಡೆದುಕೊಂಡೇ  ಸಮೀಪದ ರೈಲ್ವೆ ಸ್ಟೇಶನ್​ಗೆ ಹೊರಟಿದ್ದಾರೆ. ಭಾರತ 700 ಮಂದಿ ಸೇರಿ ಸುಮಾರು 1000 ಜನರು, ಆದದ್ದು ಆಗಲಿ, ದೇವರಿದ್ದಾನೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಕೈಯಲ್ಲಿ ಭಾರತದ ಧ್ವಜ ಹಿಡಿದು, ತಮ್ಮ ಬಂಕರ್​​ನಿಂದ ಏಳು ಕಿಲೋಮೀಟರ್​ ದೂರದಲ್ಲಿರುವ ರೈಲ್ವೆ ಸ್ಟೇಶನ್​​ಗೆ ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ. ಇದರಲ್ಲಿ ಕರ್ನಾಟಕದ ಹಲವು ವಿದ್ಯಾರ್ಥಿಗಳೂ ಸೇರಿದ್ದಾರೆ ಎಂದು ಹಾವೇರಿ ಮೂಲದ ವೆಂಕಟೇಶ ವೈಶ್ಯರ್ ಎಂಬುವರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ವೆಂಕಟೇಶ್​ ಅವರ ಪುತ್ರ ಅಮಿತ್​ (23). ನಿನ್ನೆ ಮೃತಪಟ್ಟ ವಿದ್ಯಾರ್ಥಿ ನವೀನ್​ ಮತ್ತು ಅಮಿತ್​ ಎಲ್ಲ ಒಂದೇ ಬಂಕರ್​​ನಲ್ಲಿಯೇ ಇದ್ದರು. ಅಮಿತ್ ಖಾರ್ಕೀವ್​ ವೈದ್ಯಕೀಯ ಕಾಲೇಜಿನಲ್ಲಿ ಐದನೇ ವರ್ಷದ ಮೆಡಿಕಲ್​ ಓದುತ್ತಿದ್ದರೆ, ನವೀನ್​ ನಾಲ್ಕನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ನವೀನ್ ಸಾವಿನಿಂದ ಶಾಕ್ ಆಗಿರುವ ಇವರೆಲ್ಲ, ಇನ್ನು ಬಂಕರ್​​ನಲ್ಲಿ ಕುಳಿತರೆ ಪ್ರಯೋಜನವಿಲ್ಲ. ಏನಾದರೂ ರಿಸ್ಕ್​ ತೆಗೆದುಕೊಂಡ ವಿನಃ ಪಾರಾಗಲು ಸಾಧ್ಯವಿಲ್ಲ ಎಂದು ಗಟ್ಟಿಮನಸು ಮಾಡಿದ್ದಾರೆ. ಹೀಗಾಗಿ ಅಮಿತ್​, ಅವರ ಕಸಿನ್​ ಸುಮನ್​ ಮತ್ತು ಇತರರೆಲ್ಲ ಸೇರಿ ಕಾಲ್ನಡಿಗೆ ಮೂಲಕ ಹೊರಟಿದ್ದಾರೆ ಎಂದು ಹೇಳಲಾಗಿದೆ.

ನವೀನ್​ ಮೃತಪಟ್ಟ ಬೆನ್ನಲ್ಲೇ ಅವರ ಸೀನಿಯರ್ ಆಗಿದ್ದ ಅಮಿತ್​ ಅವರ ತಂದೆ ವೆಂಕಟೇಶ್​ ಅವರನ್ನು ಹಲವು ಮಾಧ್ಯಮಗಳು ಮಾತನಾಡಿಸಿವೆ. ಪಿಟಿಐಗೆ ಕೂಡ ವೆಂಕಟೇಶ್ ಪ್ರತಿಕ್ರಿಯೆ ನೀಡಿ, ನನ್ನ ಮಗ ಸೇರಿ ಅಲ್ಲಿರುವ ಎಲ್ಲರೂ ಮೂರ್ನಾಲ್ಕು ದಿನಗಳಿಂದ ಊಟ-ತಿಂಡಿ ಮಾಡಿಲ್ಲ. ಚಾಕಲೇಟ್​, ಬಿಸ್ಕಟ್​ ತಿಂದುಕೊಂಡಿದ್ದಾರೆ. ಅವರ ಪರಿಸ್ಥಿತಿ ನೋಡುತ್ತಿದ್ದರೆ ಕರುಳು ಕಿವುಚಿದಂತಾಗುತ್ತದೆ ಎಂದಿದ್ದಾರೆ. ಇನ್ನೊಂದೆಡೆ, ನವೀನ್​ ಮೃತದೇಹದ ಫೋಟೋ ಇಂದು ವಾಟ್ಸ್​ಆ್ಯಪ್​​ನಲ್ಲಿ ಹರಿದಾಡುತ್ತಿದೆ. ಅದನ್ನು ನೋಡಿದ ನವೀನ್​ ಪಾಲಕರು, ಸೋದರ ಆಕ್ರಂದಿಸುತ್ತಿದ್ದಾರೆ.

ಮೃತ ನವೀನ್ ಕುಟುಂಬದೊಂದಿಗೆ ಈಗಾಗಲೇ ಪ್ರಧಾನಿ ಮೋದಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಸಾಂತ್ವನ ಹೇಳಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನವೀನ್​ ಮೃತದೇಹವನ್ನು ಭಾರತಕ್ಕೆ ತರಲು ಎಷ್ಟಾಗತ್ತೋ ಅಷ್ಟು ಪ್ರಯತ್ನ ಮಾಡುತ್ತೇನೆ. ಆದರೂ ಕಷ್ಟವಾಗಬಹುದು. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್​ ಜತೆಯೂ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಧ್ವಜದಿಂದಾಗಿ ಉಕ್ರೇನ್​ನಿಂದ ಸುರಕ್ಷಿತವಾಗಿ ಪಾರಾದ ಪಾಕಿಸ್ತಾನಿ, ಟರ್ಕಿಶ್ ವಿದ್ಯಾರ್ಥಿಗಳು!

Follow us on

Related Stories

Most Read Stories

Click on your DTH Provider to Add TV9 Kannada