Manipur Assembly Polls: ಮಣಿಪುರದ 9 ಮತಗಟ್ಟೆಗಳಲ್ಲಿ ಮರು ಮತದಾನ; ಆದೇಶ ಹೊರಡಿಸಿದ ಚುನಾವಣಾ ಆಯೋಗ

ಚುರ್​ಚಾಂದ್​ ಜಿಲ್ಲೆಯ ತಿಪೈಮುಖ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ರಾಜ್ಯ ಪೊಲೀಸ್ ಸಿಬ್ಬಂದಿ ನವೋರೆಮ್ ಇಬೋಚೌಬಾ ಎಂಬುವರು ಗುಂಡೇಟಿನಿಂದ ಮೃತಪಟ್ಟಿದ್ದರು.

Manipur Assembly Polls: ಮಣಿಪುರದ 9 ಮತಗಟ್ಟೆಗಳಲ್ಲಿ ಮರು ಮತದಾನ; ಆದೇಶ ಹೊರಡಿಸಿದ ಚುನಾವಣಾ ಆಯೋಗ
ಸಾಂದರ್ಭಿಕ ಚಿತ್ರ
Follow us
| Updated By: Lakshmi Hegde

Updated on:Mar 02, 2022 | 10:17 AM

ಮಣಿಪುರದಲ್ಲಿ ಫೆ.28ರಂದು ವಿಧಾನಸಭೆ ಚುನಾವಣೆ (Manipur Assembly Election) ಮೊದಲ ಹಂತದ ಮತದಾನ ನಡೆದಿದ್ದ 9 ಮತಕೇಂದ್ರಗಳಲ್ಲಿ ಮರುಮತದಾನ ನಡೆಸಲು ಚುನಾವಣಾ ಆಯೋಗ ಆದೇಶ ನೀಡಿದೆ. ಈ 9 ಮತಕೇಂದ್ರಗಳೂ ಚುರ್​ಚಾಂದ್​ಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಇದ್ದು, ಫೆ.28ರಂದು ಇಲ್ಲೆಲ್ಲ ಗಲಾಟೆ ನಡೆದಿತ್ತು. ಹೀಗಾಗಿ ಮತ್ತೆ ಮತದಾನ ನಡೆಯಲಿದೆ.  ಸಾಂಗ್ಸಾಂಗ್ ಮಿಷನ್ ಶಾಲೆ, ಮೈಟೆ ಮಿ ಶಾಲೆ, ಥಾನ್ಲಾನ್ (ST) ವಿಧಾನಸಭಾ ಕ್ಷೇತ್ರದ ಟಿನ್ಸುಂಗ್ ಮಿ ಶಾಲೆ, ಹೆಂಗ್ಲೆಪ್ (ST) ವಿಧಾನಸಭಾ ಕ್ಷೇತ್ರದಲ್ಲಿ ಮಜುರಾನ್ ಕುಕಿ, ಖೊಯಿರೆಂಟಾಕ್, ಮೊಲ್ಸಾಂಗ್, ಲೀನೊಮ್, ಮತ್ತು ಸಿಂಘತ್ (ST) ವಿಧಾನಸಭಾ ಕ್ಷೇತ್ರದ ಟೀಕೋಟ್ ಮತ್ತು ಮೌಕೋಟ್ ಮತಕೇಂದ್ರಗಳಲ್ಲಿ ಮತ್ತೊಮ್ಮೆ ಮತದಾನ ನಡೆಯಲಿದೆ.

ಮಣಿಪುರದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಾಗಲೇ ವಿವಿಧ ಹಿಂಸಾಚಾರದ ಪ್ರಕರಣಗಳು ವರದಿಯಾಗಿದ್ದವು. ಫೆ.28ರಂದು ಮೊದಲ ಹಂತದ ಮತದಾನ ನಡೆಯುವಾಗಲೂ ಕೂಡ ರಾಜ್ಯದ ಹಲವೆಡೆ ಗಲಾಟೆ, ಸಂಘರ್ಷ ಉಂಟಾಗಿದೆ. ಸುಮಾರು ಏಳು ಮತಗಟ್ಟೆಗಳಲ್ಲಿ ಇವಿಎಂಗಳಿಗೂ ಹಾನಿಯಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ರಾಜೇಶ್​ ಅಗರ್​​ವಾಲ್​ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

ಚುರ್​ಚಾಂದ್​ ಜಿಲ್ಲೆಯ ತಿಪೈಮುಖ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ರಾಜ್ಯ ಪೊಲೀಸ್ ಸಿಬ್ಬಂದಿ ನವೋರೆಮ್ ಇಬೋಚೌಬಾ ಎಂಬುವರು ಗುಂಡೇಟಿನಿಂದ ಮೃತಪಟ್ಟಿದ್ದರು. ಇವರು   ತಾವು ಕೈಯಲ್ಲಿ ಹಿಡಿದಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ತಮಗೇ ಫೈರಿಂಗ್​ ಮಾಡಿಕೊಂಡು  ಮೃತಪಟ್ಟಿದ್ದಾಗಿ ತಿಳಿದುಬಂದಿತ್ತು. ಅಂದು ಹೆಚ್ಚಾಗಿ ಗಲಾಟೆಗಳೆಲ್ಲ ನಡೆದಿದ್ದು ಚುರ್​ಚಾಂದ್​ಪುರ್​ ಜಿಲ್ಲೆಯಲ್ಲಿಯೇ ಆಗಿತ್ತು. ಕಾಕ್ವಾ ಪ್ರದೇಶದಲ್ಲಿರುವ ಮತಗಟ್ಟೆಯೊಂದರಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಗಲಾಟೆ ನಡೆಸಿದ್ದರು.  ಇದರಲ್ಲಿ ಯಾರಿಗೂ ಗಾಯವಾಗಿರಲಿಲ್ಲ. ಕೀರಾವೋ ವಿಧಾನಸಭೆ ಕ್ಷೇತ್ರದಲ್ಲಿ ನ್ಯಾಷನಲ್​ ಪೀಪಲ್ಸ್ ಪಾರ್ಟಿ ಅಭ್ಯರ್ಥಿಯ ವಾಹನವೊಂದಕ್ಕೆ ಹಾನಿಯಾಗಿತ್ತು. ಎಲ್ಲ ಪ್ರಕರಣಗಳ ಸಂಬಂಧ ಪೊಲೀಸರು ಎಫ್​ಐಆರ್ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: Video: ರಷ್ಯಾದ ಯುದ್ಧ ಟ್ಯಾಂಕ್​​ಗಳಿಗೆ ಜೋತು ಬೀಳುತ್ತಿರುವ ಉಕ್ರೇನ್​ ನಾಗರಿಕರು; ಸೇನೆಯನ್ನು ತಡೆಯಲು ಇನ್ನಿಲ್ಲದ ಪ್ರಯತ್ನ

Published On - 9:51 am, Wed, 2 March 22

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್