ಎಚ್ಚರ, ಎಚ್ಚರ… ಮರುಸೋಂಕಿಗೆ ಒಳಗಾದರೆ ಅಪಾಯ ಹೆಚ್ಚು!

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 30, 2020 | 11:52 AM

ಅಧ್ಯಯನದ ಪ್ರಕಾರ ಮರುಸೋಂಕಿಗೆ ಸಿಲುಕುವ ಸಾಧ್ಯತೆ ಆರೋಗ್ಯ ಕಾರ್ಯಕರ್ತರಲ್ಲಿ ಮೂರುಪಟ್ಟು ಅಧಿಕವಾಗಿದ್ದು ಕೊರೊನಾ ಸೋಂಕಿತರೊಂದಿಗೆ ಅತಿ ಹೆಚ್ಚು ಸಂಪರ್ಕದಲ್ಲಿರುವವರಿಗೂ ಅಪಾಯವಿದೆ.

ಎಚ್ಚರ, ಎಚ್ಚರ... ಮರುಸೋಂಕಿಗೆ ಒಳಗಾದರೆ ಅಪಾಯ ಹೆಚ್ಚು!
ಸಾಂದರ್ಭಿಕ ಚಿತ್ರ
Follow us on

ಗುವಾಹತಿ: ಕೊರೊನಾ ಸೋಂಕಿನ ತೀವ್ರತೆಗೆ ಸಂಬಂಧಿಸಿದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹಾಗೂ ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಜಂಟಿಯಾಗಿ ನಡೆಸಿರುವ ಅಧ್ಯಯನದಲ್ಲಿ ಕುತೂಹಲಕಾರಿ ಅಂಶವೊಂದು ಬೆಳಕಿಗೆ ಬಂದಿದೆ.

ಮರುಸೋಂಕು ಹೆಚ್ಚು ಅಪಾಯಕಾರಿ!
ಕೊರೊನಾ ಸೋಂಕಿಗೆ ಮೊದಲ ಬಾರಿ ತುತ್ತಾಗುವವರಿಗಿಂತ ಅಧಿಕ ಅಪಾಯ ಮರು ಸೋಂಕಿಗೆ ಒಳಗಾಗುವವರಿಗೆ ಇದೆ ಎಂಬ ಸಂಗತಿ ಈ ಅಧ್ಯಯನದಲ್ಲಿ ಬಯಲಾಗಿದೆ. ವೈದ್ಯಕೀಯವಾಗಿ ಎರಡು ಅಥವಾ ಮೂರನೇ ಬಾರಿ ಸೋಂಕಿಗೆ ತುತ್ತಾಗುವವರನ್ನು ಗುಣಪಡಿಸುವುದು ಸವಾಲಾಗಿದೆ ಎಂದು ತಿಳಿದುಬಂದಿದೆ.

ಈ ಅಧ್ಯಯನವನ್ನು ಗಾಯತ್ರಿ ಗೊಗಾಯ್, ಮೊಂದಿತಾ ಬರ್ಗೋಹೈನ್, ಅನೂಪ್ ದಾಸ್, ಬಿಸ್ವಜ್ಯೋತಿ ಬರ್ಕಕೋಟಿ ಹಾಗೂ ಮಂದಾಕಿನಿ ದಾಸ್ ಎಂಬ ತಜ್ಞರು ನಡೆಸಿದ್ದು ಪರೀಕ್ಷೆಗೆ ಒಳಪಡಿಸಿದ ಮಾದರಿಗಳಲ್ಲಿ ಮರುಸೋಂಕಿಗೆ ಒಳಗಾದವರಿಗೆ ಗುಣವಾಗಲು ಹೆಚ್ಚು ಸಮಯ ಬೇಕು ಎಂಬ ವಿಚಾರ ಗೊತ್ತಾಗಿದೆ.

ಸಂಪರ್ಕದಲ್ಲಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ
ಅಧ್ಯಯನದ ಪ್ರಕಾರ ಮರುಸೋಂಕಿಗೆ ಸಿಲುಕುವ ಸಾಧ್ಯತೆ ಆರೋಗ್ಯ ಕಾರ್ಯಕರ್ತರಲ್ಲಿ ಮೂರುಪಟ್ಟು ಅಧಿಕವಾಗಿದ್ದು ಕೊರೊನಾ ಸೋಂಕಿತರೊಂದಿಗೆ ಅತಿ ಹೆಚ್ಚು ಸಂಪರ್ಕದಲ್ಲಿರುವವರಿಗೂ ಅಪಾಯ ಹೆಚ್ಚಿದೆ ಎನ್ನಲಾಗಿದೆ.

ಇದನ್ನೂ ಓದಿ: ಕೊರೊನಾ.. ರಾಜ್ಯದಲ್ಲಿ ಯಾವ ವಯಸ್ಸಿನ ಜನರು ಸೋಂಕಿಗೆ ಹೆಚ್ಚು ಬಲಿಯಾಗಿದ್ದಾರೆ..?