ಮತ್ತೊಂದು ‘ಭ್ರಷ್ಟಾಚಾರದ ಗೋಪುರ’ ಧ್ವಂಸಕ್ಕೆ ದಿನಗಣನೆ: 20 ಕೋಟಿ ರೂ ವೆಚ್ಚ, ಆ. 28ಕ್ಕೆ ಮುಹೂರ್ತ ಫಿಕ್ಸ್, ಇಂಚಿಂಚೂ ಮಾಹಿತಿ ನಿಮಗಾಗಿ!

Supertech twin towers demolition: ಕಟ್ಟಡದ ಕೆಡುವುದರ ಸವಾಲುಗಳು ವಿಭಿನ್ನವಾಗಿವೆ. ಇದು ಭೌತಶಾಸ್ತ್ರ ಮತ್ತು ಗಣಿತದ ಸಂಯೋಜನೆಯಾಗಿದೆ. ಅವಳಿ ಗೋಪುರ ಕೆಡವಿದಾಗ, 60 ಪ್ಲೋರ್ ಎತ್ತರದವರೆಗೂ ಧೂಳು ಎದ್ದೇಳಲಿದೆ.

ಮತ್ತೊಂದು ‘ಭ್ರಷ್ಟಾಚಾರದ ಗೋಪುರ’ ಧ್ವಂಸಕ್ಕೆ ದಿನಗಣನೆ:  20 ಕೋಟಿ ರೂ ವೆಚ್ಚ, ಆ. 28ಕ್ಕೆ ಮುಹೂರ್ತ ಫಿಕ್ಸ್, ಇಂಚಿಂಚೂ ಮಾಹಿತಿ ನಿಮಗಾಗಿ!
ಮತ್ತೊಂದು ‘ಭ್ರಷ್ಟಾಚಾರದ ಗೋಪುರ’ ಧ್ವಂಸಕ್ಕೆ ದಿನಗಣನೆ: 20 ಕೋಟಿ ರೂ ವೆಚ್ಚ, ಆ. 28ಕ್ಕೆ ಮುಹೂರ್ತ, ಇಂಚಿಂಚೂ ಮಾಹಿತಿ ನಿಮಗಾಗಿ!
Follow us
S Chandramohan
| Updated By: ಸಾಧು ಶ್ರೀನಾಥ್​

Updated on: Aug 24, 2022 | 8:06 PM

ನಮ್ಮ ದೇಶದಲ್ಲಿ ಮತ್ತೊಂದು ಎತ್ತರದ ಕಟ್ಟಡದ ಧ್ವಂಸಕ್ಕೆ ದಿನಗಣನೆ ಆರಂಭವಾಗಿದೆ. ಆಗಸ್ಟ್ 28ರಂದು ಉತ್ತರ ಪ್ರದೇಶದ ನೋಯ್ಡಾದ ಸೂಪರ್ ಟೆಕ್ ಅಪೆಕ್ಸ್ ಮತ್ತು ಸಿಯಾನಿ ಅವಳಿ ಗೋಪುರಗಳನ್ನು ಸ್ಪೋಟಕಗಳನ್ನು ಬಳಸಿ ಧ್ವಂಸ ಮಾಡಲಾಗುತ್ತೆ. ಇದಕ್ಕೆ ಈಗ ಭರದಿಂದ ಸಿದ್ದತೆ ನಡೆಸಲಾಗುತ್ತಿದೆ. ಕಟ್ಟಡ ಧ್ವಂಸಕ್ಕೂ 20 ಕೋಟಿ ರೂಪಾಯಿ ವೆಚ್ಚವಾಗಲಿದೆ. ಹಾಗಾದರೇ, ಧ್ವಂಸವಾಗುವ ಕಟ್ಟಡದ ಮೌಲ್ಯ ಎಷ್ಟು? ಅವಳಿ ಗೋಪುರಗಳನ್ನು ಧ್ವಂಸ ಮಾಡುತ್ತಿರುವುದು ಏಕೆ? ಇದರ ಪೂರ್ಣ ವಿವರ ಇಲ್ಲಿದೆ

ಆಗಸ್ಟ್ 28ರ ಮಧ್ಯಾಹ್ನ 2.30ಕ್ಕೆ ಅವಳಿ ಗೋಪುರ ಧ್ವಂಸ

ಉತ್ತರ ಪ್ರದೇಶದ ನೋಯ್ಡಾದ ಸೂಪರ್‌ಟೆಕ್ ಅವಳಿ ಗೋಪುರಗಳನ್ನು ಆಗಸ್ಟ್ 28 ರಂದು ಮಧ್ಯಾಹ್ನ 2.30 ಕ್ಕೆ ನೇರವಾಗಿ ಕೆಡವಲು ಸಿದ್ದತೆಗಳು ನಡೆದಿವೆ. ಆಧುನಿಕ ಎಂಜಿನಿಯರಿಂಗ್, ಸುಧಾರಿತ ತಂತ್ರಜ್ಞಾನ ಮತ್ತು ವಿಜ್ಞಾನದ ನಿಯಮವನ್ನು ಬಳಸಿಕೊಂಡು ಅಕ್ರಮವಾಗಿ ನಿರ್ಮಿಸಿರುವ ಎತ್ತರದ ಅವಳಿ ಗೋಪುಗಳನ್ನು ಕೆಡವಲಾಗುತ್ತದೆ.

ಒಂದಾನೊಂದು ಕಾಲದಲ್ಲಿ ಸ್ವಂತ ಸೂರು ಹೊಂದುವ ನೂರಾರು ಜನರ ಕನಸಿನ ಕೂಸಾಗಿದ್ದ, ಈಗ ‘ಭ್ರಷ್ಟಾಚಾರದ ಗೋಪುರ’ ಎಂದೇ ಕರೆಸಿಕೊಳ್ಳುವ ಐತಿಹಾಸಿಕ ಯೋಜನೆಗೆ 3,500 ಕೆಜಿ ಸ್ಫೋಟಕಗಳನ್ನು ಬಳಸಿ ಧ್ವಂಸ ಮಾಡಲಾಗುತ್ತೆ. ಈಗಾಗಲೇ ಅವಳಿ ಗೋಪುರಗಳಾದ ಅಪೆಕ್ಸ್ ಮತ್ತು ಸಿಯಾನಿ ಕಟ್ಟಡಗಳ ಕಾಲಂಗಳಲ್ಲಿ 3,700 ಕೆಜಿ ಸ್ಪೋಟಕಗಳನ್ನು ಬರೋಬ್ಬರಿ 9,400 ತೂತು ಕೊರೆದು ಅವುಗಳಲ್ಲಿ ಸ್ಪೋಟಕಗಳನ್ನು ಇಡಲಾಗಿದೆ.

ಆಗಸ್ಟ್ 28ರಂದು ಮಧ್ಯಾಹ್ನ 2.30ಕ್ಕೆ ಕೇವಲ 9 ರಿಂದ 15 ಸೆಕೆಂಡ್ ಗಳಲ್ಲಿ ಅವಳಿ ಗೋಪುರಗಳು ಧರೆಗುರುಳಲಿವೆ. ಅವಳಿ ಗೋಪುರಗಳು ನೂರು ಮೀಟರ್ ಗಿಂತ ಹೆಚ್ಚು ಎತ್ತರ ಇದ್ದು, ದೆಹಲಿಯ ಪ್ರಸಿದ್ದ ಕುತುಬ್‌ ಮಿನಾರ್ ಗಿಂತ ಹೆಚ್ಚು ಎತ್ತರ ಇವೆ. ನೋಯ್ಡಾ ಅಭಿವೃದ್ದಿ ಪ್ರಾಧಿಕಾರದಿಂದ ಯಾವುದೇ ಅನುಮತಿಯನ್ನು ಪಡೆಯದೇ ಈ ಅವಳಿ ಗೋಪುರಗಳನ್ನು ನಿರ್ಮಿಸಲಾಗಿತ್ತು. ಒಂದು ಗೋಪುರದಿಂದ ಮತ್ತೊಂದು ಗೋಪುರಕ್ಕೆ 9 ಮೀಟರ್ ಅಂತರ ಮಾತ್ರ ಇದೆ. ಇದು ನಿಯಮದ ಉಲಂಘನೆ. ನ್ಯಾಷನಲ್ ಬಿಲ್ಡಿಂಗ್ ಕೋಡ್ ಉಲಂಘಿಸಿ ಈ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿತ್ತು.

ಈ ಅವಳಿ ಗೋಪುರದ ಪಕ್ಕದ ಎಮರಾಲ್ಡ್ ಕೋರ್ಟ್ ಅಪಾರ್ಟ್ ಮೆಂಟ್ ನಿವಾಸಿಗಳು ಆಕ್ರಮ ಗೋಪುರ ನಿರ್ಮಾಣದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್ ಆಕ್ರಮ, ಕಾನೂನು ಬಾಹಿರ ಅವಳಿ ಗೋಪುರ ನಿರ್ಮಾಣಕ್ಕೆ ಆದೇಶ ನೀಡಿದೆ. ಅವಳಿ ಗೋಪುರಗಳ ಕೆಡುವುವಾಗ ಉಂಟಾಗುವ ಶಾಕ್‌ವೇವ್‌ಗಳು ಮತ್ತು ಸ್ಫೋಟದ ನಂತರದ ಪರಿಣಾಮಗಳಿಂದ ಯಾವುದೇ ಆಸ್ತಿ ಅಥವಾ ಮಾನವ ಜೀವಗಳಿಗೆ ಹಾನಿಯಾಗದಂತೆ ತಡೆಯಲು ಪೊಲೀಸರು ಮಾರ್ಗಗಳ ನೈರ್ಮಲ್ಯೀಕರಣ ಮತ್ತು ವಿಸ್ತರಣೆಗಳನ್ನು ಒಳಗೊಂಡಂತೆ ಎಲ್ಲಾ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಯೋಜನೆಗಾಗಿ ಮೀಸಲಾದ ನಕ್ಷೆಯನ್ನು ಹಾಕಲಾಗಿದೆ.

ನೋಯ್ಡಾದ ಉಪ ಪೊಲೀಸ್ ಆಯುಕ್ತ (ಡಿಸಿಪಿ), ಗಣೇಶ್ ಸಹಾ, “ಆಗಸ್ಟ್ 28 ರಂದು ಯಾವುದೇ ಅಹಿತಕರ ಘಟನೆ ನಡೆದರೆ, ಸುರಕ್ಷಿತ ಮಾರ್ಗವನ್ನು ಒದಗಿಸುವುದು, ಪರಿಣಾಮ ಪ್ರದೇಶವನ್ನು ಸುತ್ತುವರಿಯುವುದು ಮತ್ತು ಸ್ಟ್ಯಾಂಡ್‌ಬೈ ತುರ್ತು ವ್ಯವಸ್ಥೆಗಳು ಸೇರಿದಂತೆ ಎಲ್ಲಾ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಾವು ಸಿದ್ಧರಿದ್ದೇವೆ. ರಸ್ತೆಗಳ ತಿರುವು ವ್ಯವಸ್ಥೆ, ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ನಾವು ಸಿದ್ಧರಿದ್ದೇವೆ. ಡಿ-ಡೇ ದಿನದಂದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ಇರುವುದಿಲ್ಲ ಎಂದು ಹೇಳಿದ್ದಾರೆ.

ಎಮರಾಲ್ಡ್ ಕೋರ್ಟ್ ಸೊಸೈಟಿಯನ್ನು ಪ್ರವೇಶಿಸುತ್ತಿದ್ದಂತೆ, ಹಾನಿ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವುದನ್ನು ಕಾಣಬಹುದು. ಧೂಳಿನ ಕಣಗಳನ್ನು ತಡೆಗಟ್ಟಲು ಕಟ್ಟಡಗಳ ಮೇಲೆ ಹಸಿರು ಕಾರ್ಪೆಟ್‌ನ ದಪ್ಪ ಪದರ, ನಿವಾಸಿಗಳ ಕಲ್ಯಾಣ ಸಂಘ (RWA) ನಿವಾಸಿಗಳಿಗೆ ಮಾಡಬೇಕಾದ ಮತ್ತು ಮಾಡಬಾರದ ಮಾರ್ಗಸೂಚಿಗಳನ್ನು ಹಾಕುವುದು, ಅವಳಿ ಗೋಪುರಗಳ ಸುತ್ತಲೂ ಕಂದಕಗಳು ಮತ್ತು ದೊಡ್ಡ ಕಂಟೇನರ್‌ಗಳನ್ನು ಅವಶೇಷಗಳು ಅಡ್ಡಲಾಗಿ ಹರಡುವುದನ್ನು ತಡೆಯಲು ಹಾಕಲಾಗಿದೆ.

ಕಟ್ಟಲು 70 ಕೋಟಿ ಖರ್ಚು, ಮಾರಿದ್ದರೇ 1,198 ಕೋಟಿ ರೂ

ಸೂಪರ್ ಟೆಕ್ ಕಂಪನಿಯು ಈ ಅವಳಿ ಗೋಪುರಗಳನ್ನು ನಿರ್ಮಾಣ ಮಾಡಲು 70 ಕೋಟಿ ರೂಪಾಯಿ ಖರ್ಚು ಮಾಡಿದೆ. ಈ ಅವಳಿ ಗೋಪುರಗಳಲ್ಲಿ 915 ಫ್ಲ್ಯಾಟ್ ಗಳಿದ್ದವು. 20 ಕಮರ್ಷಿಯಲ್ ಅಂಗಡಿಗಳಿದ್ದವು. ಈ ಅವಳಿ ಗೋಪುರಗಳ ಪಕ್ಕದಲ್ಲೇ ಎಮರಾಲ್ಡ್ ಕೋರ್ಟ್ ಎಂಬ ಅಪಾರ್ಟ್ ಮೆಂಟ್ ಇದೆ. ಈ ಅಪಾರ್ಟ್ ಮೆಂಟ್ ನಲ್ಲಿ ಪ್ರತಿ ಚದರ ಅಡಿಗೆ 7,500 ರೂಪಾಯಿ ಬೆಲೆ ಇದೆ. ಅವಳಿ ಗೋಪುರದ ಒಂದು ಪ್ಲ್ಯಾಟ್ ಅನ್ನು 1.13 ಕೋಟಿ ರೂಪಾಯಿಗೆ ಮಾರಬಹುದಾಗಿತ್ತು.

ಹೀಗೆ 915 ಪ್ಲ್ಯಾಟ್ ಹಾಗೂ ಕಮರ್ಷಿಯಲ್ ಅಂಗಡಿಗಳನ್ನು ಮಾರಿದ್ದರೇ, ಸೂಪರ್ ಟೆಕ್ ಕಂಪನಿಗೆ ಬರೋಬ್ಬರಿ 1,198 ಕೋಟಿ ರೂಪಾಯಿ ಹಣ ಸಿಗುತ್ತಿತ್ತು. ಫ್ಲ್ಯಾಟ್ ಖರೀದಿದಾರರಿಂದ 180 ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡಲಾಗಿತ್ತು. 633 ಪ್ಲ್ಯಾಟ್ ಗಳನ್ನು ಖರೀದಿದಾರರು ಹಣ ನೀಡಿ ಬುಕ್ ಮಾಡಿದ್ದರು. ಪ್ಲ್ಯಾಟ್ ಖರೀದಿದಾರರಿಗೆ ಶೇ.12ರ ಬಡ್ಡಿದರವನ್ನು ಸೇರಿಸಿ ಅವರ ಹಣವನ್ನು ವಾಪಸ್ ನೀಡಲು ಸುಪ್ರೀಂಕೋರ್ಟ್, ಸೂಪರ್ ಟೆಕ್ ಕಂಪನಿಗೆ ಆದೇಶಿಸಿದೆ.

ಆದರೆ, ಈಗ ಈ ನತದೃಷ್ಟ ಅವಳಿಗೋಪುರವನ್ನೇ ಕೇವಲ 10 ರಿಂದ 15 ಸೆಕೆಂಡ್ ಗಳಲ್ಲೇ ಕೆಡವಲಾಗುತ್ತೆ. ಅವಳಿ ಗೋಪುರ ಕೆಡವಲು ಅಂದಾಜು 20 ಕೋಟಿ ರೂಪಾಯಿ ವೆಚ್ಚವಾಗಲಿದೆ, ಪ್ರತಿ ಚದರ ಅಡಿ ನಿರ್ಮಾಣಕ್ಕೆ ಸರಾಸರಿ 933 ರೂಪಾಯಿ ವೆಚ್ಚವಾಗಿತ್ತು . ಈಗ ಕೆಡವಲು ಪ್ರತಿ ಚದರಡಿಗೆ ಸರಾಸರಿ 237 ರೂಪಾಯಿ ವೆಚ್ಚ ಮಾಡಬೇಕಾಗಿದೆ. ಸೂಪರ್ ಟೆಕ್ ರಿಯಲ್ ಎಸ್ಟೇಟ್ ಕಂಪನಿಯು ಈಗಾಗಲೇ ಆರ್ಥಿಕವಾಗಿ ದಿವಾಳಿಯಾಗಿದೆ. ಕಂಪನಿಯ ಬಳಿ ಈ ಅವಳಿ ಗೋಪುರ ಕೆಡವಲು ಹಣ ನೀಡಲು ಕೂಡ ಹಣ ಇಲ್ಲ. ಸೂಪರ್ ಟೆಕ್ ಕಂಪನಿಯು ನಾಲ್ಕೂವರೆ ಕೋಟಿ ರೂಪಾಯಿಯಿಂದ ಐದೂವರೆ ಕೋಟಿ ರೂಪಾಯಿ ಹಣವನ್ನು ಮಾತ್ರ ಎಡಿಫೈಸ್ ಇಂಜಿನಿಯರಿಂಗ್ ಕಂಪನಿಗೆ ನೀಡುತ್ತಿದೆ. ಉಳಿದ ಹಣವನ್ನು ಅವಳಿ ಗೋಪುರದ ಕಬ್ಬಿಣ, ಸ್ಟೀಲ್, ಅವಶೇಷಗಳ ಮಾರಾಟದಿಂದ ಸಂಗ್ರಹಿಸಿಕೊಳ್ಳಲು ಎಡಿಫೈಸ್ ಕಂಪನಿಯು ನಿರ್ಧರಿಸಿದೆ. ಅಪೆಕ್ಸ್ ಟವರ್ ನಲ್ಲಿ 32ಪ್ಲೋರ್ ಗಳಿದ್ದರೇ, ಸಿಯಾನಿ ಟವರ್ ನಲ್ಲಿ 29 ಪ್ಲೋರ್ ಗಳನ್ನು ನಿರ್ಮಾಣ ಮಾಡಲಾಗಿತ್ತು.

ಅಕ್ಕಪಕ್ಕದ ಅಪಾರ್ಟ್ ಮೆಂಟ್ ನಿವಾಸಿಗಳ ತೆರವು

ಅವಳಿ ಗೋಪುರದ ಸ್ಪೋಟಕಗಳನ್ನು ಬಳಸಿ ಕೆಡವಲು ಸಿದ್ಧತೆಗಳು ಭರದಿಂದ ಸಾಗಿವೆ. ಸುತ್ತಮುತ್ತಲಿನ ನಿವಾಸಿಗಳು ಆಗಸ್ಟ್ 28 ರಂದು ಬೆಳಿಗ್ಗೆ 7 ಗಂಟೆಯ ಮೊದಲು ಈ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರ ಆಗಬೇಕು. ಹಲವಾರು ನಿವಾಸಿಗಳು ಈಗಾಗಲೇ ಹೊರಟಿದ್ದಾರೆ ಮತ್ತು ಸ್ಫೋಟದ ನಂತರದ ಆಘಾತಗಳಿಂದ ಹಾನಿಯಾಗದಂತೆ ತಡೆಯಲು ಅನೇಕರು ತಮ್ಮ ಬೆಲೆಬಾಳುವ ವಸ್ತುಗಳನ್ನು, ವಿಶೇಷವಾಗಿ ವಿದ್ಯುತ್ ಉಪಕರಣಗಳನ್ನು ಪ್ಯಾಕ್ ಮಾಡುತ್ತಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ಚಿನ ನಿವಾಸಿಗಳು ನಾವು ಹೆದರುವುದಿಲ್ಲ, ಆದರೆ ತಮ್ಮ ಕಿಟಕಿಯ ಗಾಜುಗಳಿಗೆ ಹಾನಿಯಾಗುವ ಸಾಧ್ಯತೆಯ ಬಗ್ಗೆ ಮತ್ತು ಮನೆಗಳಿಗೆ ಭಾರಿ ಧೂಳು ಹರಿಯುವ ಬಗ್ಗೆ ಸ್ವಲ್ಪ ಆತಂಕವಿದೆ ಎಂದಿದ್ದಾರೆ.

ಎಮರಾಲ್ಡ್ ಕೋರ್ಟ್ ಮತ್ತು ಎಟಿಎಸ್ ಸೊಸೈಟಿಗಳಲ್ಲಿ 5 ಸಾವಿರ ಜನರು ವಾಸಿಸುತ್ತಿದ್ದಾರೆ. ಈಗ 5 ಸಾವಿರ ಜನರು ಆಗಸ್ಟ್ 28ರಂದು ಬೇರೆಡೆಗೆ ಹೋಗುತ್ತಿದ್ದಾರೆ. ಎಮರಾಲ್ಡ್ ಕೋರ್ಟ್ ಮತ್ತು ಎಟಿಎಸ್ ಸೊಸೈಟಿಯ ನಿವಾಸಿಗಳಿಗೆ ಡೆಮಾಲಿಷನ್ ಕಂಪನಿಯಾದ ಎಡಿಫೈಸ್‌ನಿಂದ ಸ್ಫೋಟದಿಂದಾಗಿ ಆಗುವ ರಚನಾತ್ಮಕ ಹಾನಿಗಳಿಗೆ ಪರಿಹಾರದ ಭರವಸೆ ನೀಡಲಾಗಿದೆ.

ಅಕ್ಕಪಕ್ಕದ ಕಟ್ಟಡ ಹಾನಿಗೆ 100 ಕೋಟಿ ರೂ ವಿಮೆ

ಎಡಿಫೈಸ್ ಇಂಜಿನಿಯರಿಂಗ್‌ ಕಂಪನಿಯು ಸೂಪರ್ ಟೆಕ್‌ ಕಂಪನಿಯ ಅವಳಿ ಗೋಪುರಗಳನ್ನು ಕೆಡವುವ ಹೊಣೆಗಾರಿಕೆ ಹೊತ್ತುಕೊಂಡಿದೆ. ಈ ಕಂಪನಿಗೆ ಈ ಹಿಂದೆ ಕೇರಳದಲ್ಲಿ ಇದೇ ರೀತಿಯ ದೊಡ್ಡ ಕಟ್ಟಡಗಳನ್ನು ಕೆಡವಿದ ಅನುಭವ ಇದೆ. ಎಡಿಫೈಸ್ ಇಂಜಿನಿಯರಿಂಗ್ ಕಂಪನಿಯ ಪಾಲುದಾರ ಉತ್ಕರ್ಷ್ ಮೆಹ್ತಾ ಅವರು ಹೇಳುವ ಪ್ರಕಾರ, ಅವಳಿ ಗೋಪುರದ ಪಕ್ಕದಲ್ಲೇ ಇರುವ ಎಮರಾಲ್ಡ್ ಕೋರ್ಟ್ ಮತ್ತು ಎಟಿಎಸ್‌ ಅಪಾರ್ಟ್ ಮೆಂಟ್‌ಗಳಿಗೆ ಏನಾದರೂ ಹಾನಿ ಸಂಭವಿಸಿದರೇ, 100 ಕೋಟಿ ರೂಪಾಯಿ ವಿಮೆಯನ್ನು ಮಾಡಿಸಲಾಗಿದೆ.

ಎಮರಾಲ್ಡ್ ಕೋರ್ಟ್ ಮತ್ತು ಎಟಿಎಸ್ ಎರಡೂ ಸೊಸೈಟಿಗಳ ಮೇಲೆ ಸ್ಫೋಟದಿಂದಾಗಿ ಮೇಲಾಧಾರ ಹಾನಿಗಾಗಿ ನಾವು ರೂ 100 ಕೋಟಿ ವಿಮೆಯನ್ನು ಹೊಂದಿದ್ದೇವೆ. ಗಾಜು ಒಡೆಯುವುದು ಸೇರಿದಂತೆ ಯಾವುದೇ ಸಣ್ಣ ಹಾನಿಯನ್ನು ತಕ್ಷಣವೇ ಸರಿಪಡಿಸಲಾಗುವುದು. ರೂ 100 ಕೋಟಿ ವಿಮೆಯ ಜೊತೆಗೆ, ಆಸ್ತಿಯ ಕೆಳಗಿರುವ ಗ್ಯಾಸ್ ಪೈಪ್‌ಲೈನ್‌ಗೆ ಯಾವುದೇ ಹಾನಿಗೆ ನಾವು ರೂ 2.5 ಕೋಟಿ ವಿಮೆಯನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ. ಪ್ರತಿಯೊಂದು ಕಟ್ಟಡದ ಕೆಡುವವ ಸವಾಲುಗಳು ವಿಭಿನ್ನವಾಗಿವೆ ಎಂದು ಹೇಳಿದ ಮೆಹ್ತಾ, ಇದು ಭೌತಶಾಸ್ತ್ರ ಮತ್ತು ಗಣಿತ ಎರಡರ ಸಂಯೋಜನೆಯಾಗಿದೆ ಎಂದು ಹೇಳಿದರು.

ಸ್ಫೋಟಕಗಳನ್ನು ಇಟ್ಟಿರುವ ಎಲ್ಲಾ ಮಹಡಿಗಳು, ಕಾಲಮ್‌ಗಳು ಸೇರಿದಂತೆ, ಕಟ್ಟಡವು ನಿರೀಕ್ಷಿಸಿದ ರೀತಿಯಲ್ಲಿ ಬೀಳುವುದನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಮುಚ್ಚಲಾಗಿದೆ. ಎಮರಾಲ್ಡ್ ಕೋರ್ಟ್, ಎಟಿಎಸ್ ಹೌಸಿಂಗ್ ಸೊಸೈಟಿಗಳಲ್ಲಿರುವ ಕಾರ್ ಗಳನ್ನು ಆಗಸ್ಟ್ 28ರಂದು ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತೆ. ಆಗಸ್ಟ್ 28 ರಂದು ಅವಳಿ ಗೋಪುರ ಧ್ವಂಸವಾಗುವ ಸಮಯದಲ್ಲಿ 5 ಸಾವಿರ ಜನರನ್ನು ಬೇರೆಡೆಗೆ ಹೋಗಲು ಈಗಾಗಲೇ ಸೂಚಿಸಲಾಗಿದೆ. ಈ ಪ್ರದೇಶದಲ್ಲಿ ಬೀಡಾಡಿ ದನ, ನಾಯಿ ಓಡಾಡದಂತೆ ಹಿಡಿದು ಬೇರೆಡೆಗೆ ತೆಗೆದುಕೊಂಡು ಹೋಗಲಾಗಿದೆ. ಈ ಪ್ರದೇಶದಲ್ಲಿ ಜನರು ಓಡಾಡದಂತೆ ನಿರ್ಬಂಧ ವಿಧಿಸಲಾಗಿದೆ. ರಸ್ತೆಗಳಲ್ಲಿ ವಾಹನ ಸಂಚಾರವನ್ನು ಆಗಸ್ಟ್ 28ರ ಅರ್ಧ ದಿನ ಬಂದ್ ಮಾಡಲಾಗುತ್ತೆ. ಕಂಟ್ರೋಲ್ ಒಳಮುಖ ಕುಸಿತದ ಟೆಕ್ನಿಕ್ ಬಳಸಿ ಅವಳಿ ಗೋಪುರ ಅಪೆಕ್ಸ್ ಮತ್ತು ಸಿಯಾನಿ ಕಟ್ಟಡಗಳನ್ನು ಕೆಡವಲಾಗುತ್ತೆ. ಇದರಿಂದ 55 ಸಾವಿರ ಟನ್ ಅವಶೇಷಗಳು ಉತ್ಪತ್ತಿಯಾಗಲಿವೆ.

ನೂರು ಮಂದಿ ಕಾರ್ಮಿಕರು ಅವಳಿ ಗೋಪುರ ಧ್ವಂಸ ಕಾರ್ಯಾಚರಣೆಯಲ್ಲಿ ಭಾಗಿ:

ಅವಳಿ ಗೋಪುರದ ಧ್ವಂಸವಾದ ಬಳಿಕ 35 ಸಾವಿರ ಕ್ಯೂಬಿಕ್ ಮೀಟರ್ ಅವಶೇಷ ಸೃಷ್ಟಿಯಾಗಲಿದೆ. ಇದನ್ನು 5 ರಿಂದ 6 ಹೆಕ್ಟೇರ್ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಹಾಕಲಾಗುತ್ತೆ. ಅವಶೇಷಗಳನ್ನು ವೈಜ್ಞಾನಿಕವಾಗಿ, ನಿಯಮ ಪ್ರಕಾರವೇ ವಿಲೇವಾರಿ ಮಾಡಲಾಗುತ್ತೆ. ಅವಳಿ ಗೋಪುರ ಕೆಡವಿದಾಗ, 60 ಪ್ಲೋರ್ ಎತ್ತರದವರೆಗೂ ಧೂಳು ಎದ್ದೇಳಲಿದೆ. ಅಕ್ಕ ಪಕ್ಕದ ಪ್ರದೇಶಗಳನ್ನು ಧೂಳು, ಮಾಲಿನ್ಯದಿಂದ ಕಾಪಾಡಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಡಿಫೈಸ್ ಇಂಜಿನಿಯರಿಂಗ್ ಕಂಪನಿಯು ಹೇಳಿದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ