Supreme Court: ಪತಿ-ಪತ್ನಿಯ ನಡುವೆ ಪರಸ್ಪರ ಒಪ್ಪಿಗೆ ಇದ್ದಲ್ಲಿ ವಿಚ್ಛೇದನಕ್ಕೆ ಆದೇಶಿಸಬಹುದು, 6 ತಿಂಗಳು ಕಾಯುವ ಅಗತ್ಯವಿಲ್ಲ : ಸುಪ್ರೀಂ

|

Updated on: May 01, 2023 | 3:09 PM

ವಿಚ್ಛೇದನ ಪಡೆಯುವ ದಂಪತಿಗಳು ಆರು ತಿಂಗಳು ಕಾಯುವ ಅವಶ್ಯಕತೆ ಇಲ್ಲ ಎಂದು ಸುಪ್ರೀಂ ತೀರ್ಪುನ್ನು ನೀಡಿದೆ. ವಿಚ್ಛೇದನ ಪಡೆಯಲು ಬಯಸುವ ಯಾವುದೇ ವ್ಯಕ್ತಿಯು ಒಟ್ಟಾಗಿ ಬದಕಲು ಸಾಧ್ಯವಿಲ್ಲ ಎಂದಾಗ ಒತ್ತಾಯ ಪೂರಕವಾಗಿ ಕಾನೂನಿನ ನಿಯಮದ ಪ್ರಕಾರ 6 ತಿಂಗಳು ಒಟ್ಟಿಗೆ ಇರಬೇಕು ಎಂಬುದು ಇನ್ನೂ ಮುಂದೆ ಇರುವುದಿಲ್ಲ.

Supreme Court: ಪತಿ-ಪತ್ನಿಯ ನಡುವೆ ಪರಸ್ಪರ ಒಪ್ಪಿಗೆ ಇದ್ದಲ್ಲಿ ವಿಚ್ಛೇದನಕ್ಕೆ ಆದೇಶಿಸಬಹುದು, 6 ತಿಂಗಳು ಕಾಯುವ ಅಗತ್ಯವಿಲ್ಲ : ಸುಪ್ರೀಂ
ಸುಪ್ರೀಂ ಕೋರ್ಟ್​
Follow us on

ದೆಹಲಿ: ಸುಪ್ರೀಂ ಕೋರ್ಟ್ (Supreme Court)​ ಒಂದು ಮಹತ್ವದ ತೀರ್ಪುನ್ನು ನೀಡಿದೆ. ವಿಚ್ಛೇದನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಮಹತ್ವದ ತೀರ್ಪು ನೀಡಿದೆ. ವಿಚ್ಛೇದನ ಪಡೆಯುವ ದಂಪತಿಗಳು ಆರು ತಿಂಗಳು ಕಾಯುವ ಅವಶ್ಯಕತೆ ಇಲ್ಲ ಎಂದು ಸುಪ್ರೀಂ ತೀರ್ಪುನ್ನು ನೀಡಿದೆ. ವಿಚ್ಛೇದನ ಪಡೆಯಲು ಬಯಸುವ ಯಾವುದೇ ವ್ಯಕ್ತಿಯು ಒಟ್ಟಾಗಿ ಬದಕಲು ಸಾಧ್ಯವಿಲ್ಲ ಎಂದಾಗ ಒತ್ತಾಯ ಪೂರಕವಾಗಿ ಕಾನೂನಿನ ನಿಯಮದ ಪ್ರಕಾರ 6 ತಿಂಗಳು ಒಟ್ಟಿಗೆ ಇರಬೇಕು ಎಂಬುದು ಇನ್ನೂ ಮುಂದೆ ಇರುವುದಿಲ್ಲ. ಕಾನೂನು ನಿಯಮದ ಪ್ರಕಾರ ವಿಚ್ಛೇದನ ನೀಡಬಹುದು ಎಂದು ಹೇಳಿದೆ. ಸುಪ್ರೀಂ ಪರಿಚ್ಛೇದ 142ರ ಅಡಿಯಲ್ಲಿ ಅಧಿಕಾರವನ್ನು ಹೊಂದಿದೆ ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಎಎಸ್ ಓಕಾ, ವಿಕ್ರಮ್ ನಾಥ್ ಮತ್ತು ಜೆಕೆ ಮಹೇಶ್ವರಿ ಅವರನ್ನು ಒಳಗೊಂಡ ಸಂವಿಧಾನ ಪೀಠ ಹೇಳಿದೆ.

ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯುವ ಪತಿ ಮತ್ತು ಪತ್ನಿಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಕಳುಹಿಸದೆ ಪ್ರತ್ಯೇಕವಾಗಿ ವಾಸಿಸಲು ಅವಕಾಶ ನೀಡಬಹುದು ಎಂದು ನ್ಯಾಯಾಲಯ ಹೇಳಿದೆ. ಪರಸ್ಪರ ಒಪ್ಪಿಗೆ ಇದ್ದರೆ, ವಿಚ್ಛೇದನಕ್ಕೆ ಕಡ್ಡಾಯವಾಗಿ 6 ​​ತಿಂಗಳ ಕಾಯುವ ಅವಶ್ಯಕತೆ ಇಲ್ಲ ಎಂದು  ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠ ಹೇಳಿದೆ.

2014ರಲ್ಲಿ ಶಿಲ್ಪಾ ಸೈಲೇಶ್ ಸಲ್ಲಿಸಿದ್ದ ಪ್ರಮುಖ ಅರ್ಜಿ ಸೇರಿದಂತೆ ಐದು ಅರ್ಜಿಗಳ ತೀರ್ಪನ್ನು 2022ರ ಸೆಪ್ಟೆಂಬರ್ 29ರಂದು ಪೀಠ ಕಾಯ್ದಿರಿಸಿತ್ತು. ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸುವಾಗ, ಸಾಮಾಜಿಕ ಬದಲಾವಣೆಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ಕೆಲವೊಮ್ಮೆ ಕಾನೂನು ತರುವುದು ಸುಲಭ, ಆದರೆ ಅದರೊಂದಿಗೆ ಸಮಾಜವನ್ನು ಬದಲಾಯಿಸಲು ಮನವೊಲಿಸುವುದು ಕಷ್ಟ ಎಂದು ಹೇಳಿತ್ತು.

ಇದನ್ನೂ ಓದಿ:Supreme Court: ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಹತ್ಯೆ ಪ್ರಕರಣ: ಅರ್ಜಿಯ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ಈ ಹಿಂದಿನ ಕಾನೂನು ಪ್ರಕಾರ ವಿಚ್ಛೇದನ ಪಡೆಯುವ ದಂಪತಿಗಳು, ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದ್ದಂತೆ 6 ತಿಂಗಳು ಜತೆಗೆಯಾಗಿ ಒಂದೇ ಮನೆಯಲ್ಲಿ ಜೀವನ ನಡೆಸಬೇಕಿತ್ತು. ಇದು ಕಾನೂನಿನ ನಿಮಯದ ಜತೆಗೆ ಇಬ್ಬರ ನಡುವೆ ಒಂದು ಹೊಂದಾಣಿಕೆಯಾಗಿ ಜತೆಯಾಗಿ ಜೀವನ ನಡೆಸುತ್ತಾರೆ ಎನ್ನುವ ಕಾಳಜಿಗೆ ಈ ರೀತಿಯ ಕಾನೂನುಗಳನ್ನು ಮಾಡಿತ್ತು, ಆದರೆ ಈಗ ಒತ್ತಡದ ಆಧಾರದಲ್ಲಿ ಜೀವನ ನಡೆಸುವ ಅಗತ್ಯ ಇಲ್ಲ ಎಂದು ಆದೇಶವನ್ನು ಸುಪ್ರೀಂ ನೀಡಿದೆ.

Published On - 11:43 am, Mon, 1 May 23