ಬೀದಿ ನಾಯಿಗಳು ಕಚ್ಚಿದ್ರೆ ಸರ್ಕಾರವೇ ಪರಿಹಾರ ನೀಡಬೇಕು: ಸುಪ್ರೀಂ
ಬೀದಿ ನಾಯಿ ಕಡಿತದಿಂದ ಸಾವು ಅಥವಾ ಗಾಯಗಳಾದಲ್ಲಿ ಸರ್ಕಾರವೇ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಮಕ್ಕಳು ಮತ್ತು ವೃದ್ಧರ ಮೇಲಿನ ದಾಳಿಗಳಿಗೆ ಯಾರು ಹೊಣೆ ಎಂದು ಪ್ರಶ್ನಿಸಿದ ನ್ಯಾಯಾಲಯ, ನಾಯಿ ಪೋಷಕರು ತಮ್ಮ ಮನೆಯಲ್ಲಿಯೇ ಅವುಗಳನ್ನು ನೋಡಿಕೊಳ್ಳಬೇಕು ಎಂದಿದೆ. ಮಾನವನ ಸುರಕ್ಷತೆಗೆ ಆದ್ಯತೆ ನೀಡಿ, ಹೊಣೆಗಾರಿಕೆ ನಿಗದಿಪಡಿಸುವ ಕಠಿಣ ಕ್ರಮಗಳ ಬಗ್ಗೆ ನ್ಯಾಯಪೀಠ ಸೂಚಿಸಿದೆ.

ನವದೆಹಲಿ, ಜನವರಿ 13: ಬೀದಿನಾಯಿ(Stray Dog)ಗಳ ಕಡಿತದಿಂದ ಜೀವ ಕಳೆದುಕೊಂಡವರ ಕುಟುಂಬಕ್ಕೆ ಹಾಗೂ ಗಾಯಗೊಂಡವರಿಗೆ ಸರ್ಕಾರವೇ ಪರಿಹಾರ ನೀಡಬೇಕೆಂದು ಸುಪ್ರೀಂಕೋರ್ಟ್ ಹೇಳಿದೆ. ಬೀದಿ ನಾಯಿಗಳಿಂದ ಮಕ್ಕಳು ಮತ್ತು ವೃದ್ಧ ಸಾವನ್ನಪ್ಪಿದರೆ ಅಥವಾ ಗಾಯಗೊಂಡರೆ ಯಾರು ಹೊಣೆಗಾರರಾಗಬೇಕು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿತು.
9 ವರ್ಷದ ಮಗುವಿನ ಸಾವನ್ನು ಉಲ್ಲೇಖಿಸಿ, ನಾಯಿ ಪ್ರಿಯರ ಸಂಘಟನೆಗಳು ಪೋಷಿಸುವ ಬೀದಿ ನಾಯಿಗಳಿಂದ 9 ವರ್ಷದ ಮಗು ಸಾವನ್ನಪ್ಪಿದರೆ ಯಾರು ಹೊಣೆಗಾರರಾಗಬೇಕು ಎಂದು ನ್ಯಾಯಪೀಠ ಪ್ರಶ್ನಿಸಿತು. ನ್ಯಾಯಾಲಯವು ಕಣ್ಣು ಮುಚ್ಚಿ ಎಲ್ಲವೂ ನಡೆಯಲು ಬಿಡಬೇಕೇ ಎಂದು ನ್ಯಾಯಾಲಯ ಕೇಳಿತ್ತು.
ಕೇವಲ ನಾಯಿಯ ಮೇಲಷ್ಟೇ ಕನಿಕರವೇಕೆ?, ಮಾನವನ ಮೇಲಿನ ದಾಳಿಗಳ ಮೇಲೆ ಏಕೆ ಮಾತನಾಡುತ್ತಿಲ್ಲ. ಹೊಣೆಗಾರಿಕೆಗಾಗಿ ಕಠಿಣ ಚೌಕಟ್ಟನ್ನು ಸ್ಥಾಪಿಸುವ ಬಗ್ಗೆ ಯೋಚಿಸುತ್ತಿರುವುದಾಗಿ ಪೀಠ ಸೂಚಿಸಿದೆ. ನಾಯಿ ಕಡಿತದಿಂದ ಉಂಟಾಗುವ ಸಾವುಗಳು ಮತ್ತು ಗಾಯಗಳಿಗೆ ರಾಜ್ಯವು ಪರಿಹಾರವನ್ನು ಪಾವತಿಸಬೇಕು. ನಾಯಿ ಮಾಲೀಕರು ಮತ್ತು ಅವುಗಳನ್ನು ಪ್ರತಿನಿಧಿಸುವ ಸಂಸ್ಥೆಗಳ ಮೇಲೆಯೂ ಜವಾಬ್ದಾರಿ ಇದ್ದು ಪರಿಹಾರ ನಿಗದಿಪಡಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಮತ್ತಷ್ಟು ಓದಿ: ಬೀದಿನಾಯಿ ನಿಯಂತ್ರಣಕ್ಕೆ ಏನೆಲ್ಲ ಕ್ರಮ?: ಸುಪ್ರೀಂಗೆ ವರದಿ ಸಲ್ಲಿಸಿದ ಕರ್ನಾಟಕ
ಜನರು ನಾಯಿಗಳಿಗೆ ಆಹಾರ ನೀಡಲು ಅಥವಾ ಆರೈಕೆ ಮಾಡಲು ಬಯಸಿದರೆ, ಅವರು ಅದನ್ನು ತಮ್ಮ ಸ್ವಂತ ಆವರಣದಲ್ಲಿ ಮಾಡಬೇಕು ಅಥವಾ ತಮ್ಮ ಸ್ವಂತ ಮನೆಯಲ್ಲಿಯೇ ಸಾಕಬೇಕು ಮತ್ತು ತಮ್ಮ ಸ್ವಂತ ಮನೆಯಲ್ಲಿಯೇ ಆಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಪೀಠವು ಹೇಳಿದೆ. ಅವುಗಳನ್ನು ಸುತ್ತಾಡಲು ಮತ್ತು ತೊಂದರೆ ಉಂಟುಮಾಡಲು ಏಕೆ ಬಿಡಬೇಕು ಎಂದು ಪ್ರಶ್ನಿಸಲಾಯಿತು.
ಈ ವಿಷಯದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಚಾರಣೆ ನಡೆಸುವಾಗ ಗಂಭೀರ ಪ್ರಶ್ನೆಗಳನ್ನು ಎತ್ತುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಹಿಂದಿನ ವಿಚಾರಣೆಯ ಸಮಯದಲ್ಲಿ, ನಾಯಿಗಳ ಮೇಲಿನ ಕ್ರೌರ್ಯವನ್ನು ಚಿತ್ರಿಸುವ ವೀಡಿಯೊಗಳನ್ನು ವೀಕ್ಷಿಸಲು ನಿರಾಕರಿಸಿದ್ದನ್ನು ನ್ಯಾಯಾಲಯ ನೆನಪಿಸಿಕೊಂಡಿತು, ಮಕ್ಕಳು ಮತ್ತು ವೃದ್ಧರ ಮೇಲೆ ನಾಯಿಗಳು ದಾಳಿ ಮಾಡುವ ವೀಡಿಯೊಗಳು ಸಹ ಇವೆ ಎಂಬುದನ್ನು ಗಮನಿಸಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
