Justice MR Shah: ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಎಂಆರ್​ ಶಾ ಅವರಿಗೆ ಹೃದಯಾಘಾತ; ದೆಹಲಿಗೆ ಏರ್​ಲಿಫ್ಟ್​

| Updated By: ಸುಷ್ಮಾ ಚಕ್ರೆ

Updated on: Jun 16, 2022 | 4:27 PM

ಎಂ.ಆರ್​. ಶಾ ಅವರ ಆರೋಗ್ಯದ ಕುರಿತು ಸುಪ್ರೀಂ ಕೋರ್ಟ್ ಅಧಿಕಾರಿಗಳು ಗೃಹ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಏರ್ ಆಂಬುಲೆನ್ಸ್ ಮೂಲಕ ದೆಹಲಿಗೆ ಕರೆತರಲಾಗುತ್ತಿದೆ.

Justice MR Shah: ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಎಂಆರ್​ ಶಾ ಅವರಿಗೆ ಹೃದಯಾಘಾತ; ದೆಹಲಿಗೆ ಏರ್​ಲಿಫ್ಟ್​
ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿ ಎಂಆರ್​ ಶಾ
Image Credit source: NDTV
Follow us on

ನವದೆಹಲಿ: ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಎಂ.ಆರ್. ಶಾ ( ಮುಖೇಶ್ ಕುಮಾರ್ ರಸಿಕ್​ ಭಾಯ್ ಶಾ) ಅವರಿಗೆ ಹಿಮಾಚಲ ಪ್ರದೇಶದಲ್ಲಿ ಹೃದಯಾಘಾತ ಉಂಟಾಗಿದ್ದು, ತಕ್ಷಣ ದೆಹಲಿಗೆ ಏರ್​ಲಿಫ್ಟ್​ ಮಾಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಎಂ.ಆರ್​. ಶಾ (Justice MR Shah) ಅವರ ಆರೋಗ್ಯದ ಕುರಿತು ಸುಪ್ರೀಂ ಕೋರ್ಟ್ ಅಧಿಕಾರಿಗಳು ಗೃಹ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಏರ್ ಆಂಬುಲೆನ್ಸ್ (Airlift) ಮೂಲಕ ದೆಹಲಿಗೆ ಕರೆತರಲಾಗುತ್ತಿದೆ. ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುವುದು.

ಮುಖೇಶ್‌ಕುಮಾರ್ ರಸಿಕ್‌ಭಾಯ್ ಷಾ 1958ರ ಮೇ 16ರಂದು ಜನಿಸಿದ್ದರು. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿರುವ ಅವರು ಪಾಟ್ನಾ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿಯೂ ಹೌದು. ಅವರು ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿಗಳೂ ಆಗಿದ್ದರು.

ಇದನ್ನೂ ಓದಿ
Agnipath Scheme: ಅಗ್ನಿಪಥ್​ ಯೋಜನೆ ಕುರಿತ ವದಂತಿಗಳೇನು; ಸರ್ಕಾರ ನೀಡಿದ ಸ್ಪಷ್ಟನೆಯೇನು?
Amarnath Yatra: ಅಮರನಾಥ ಯಾತ್ರೆಗೆ ಹೆಸರು ನೋಂದಾಯಿಸುವುದು ಹೇಗೆ? ಏನೇನು ನಿರ್ಬಂಧಗಳಿವೆ?
ಹೈದರಾಬಾದ್: ಒಂದೇ ಗೋತ್ರದವರನ್ನು ಮದುವೆಯಾಗಿದ್ದಕ್ಕೆ ಬೆದರಿಕೆ, ಬಹಿಷ್ಕಾರ; ಪೊಲೀಸರ ಮೊರೆ ಹೋದ ದಂಪತಿ

ಇದನ್ನೂ ಓದಿ: ಕರ್ನಾಟಕ ನೂತನ ಲೋಕಾಯುಕ್ತ ನ್ಯಾಯಮೂರ್ತಿಗಳಾಗಿ ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ನೇಮಕ

ಎಂ.ಅರ್​ ಶಾ ಅವರು 2023ರ ಮೇ 15ರಂದು ನಿವೃತ್ತರಾಗಲಿದ್ದಾರೆ. ಅವರು 1982ರ ಜುಲೈ 19ರಂದು ವಕೀಲರಾಗಿ ವೃತ್ತಿ ಆರಂಭಿಸಿದರು. ಗುಜರಾತ್ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡಿದರು. 2004ರ ಮಾರ್ಚ್​ 4ರಂದು ಗುಜರಾತ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. 2005ರ ಜೂನ್ 22ರಂದು ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು.

ಅವರು 2018ರ ಆಗಸ್ಟ್ 12ರಂದು ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅವರು 2018 ರಲ್ಲಿ ಭಾರತದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:20 pm, Thu, 16 June 22