AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICSE Board Results 2021: 6 ವರ್ಷದ ಅಂಕ ಆಧರಿಸಿ 12ನೇ ತರಗತಿ ಫಲಿತಾಂಶ; ತಾತ್ವಿಕ ಒಪ್ಪಿಗೆ ನೀಡಿದ ಸುಪ್ರೀಂಕೋರ್ಟ್

CISCE Board Class 12 Result 2021: ಕಳೆದ ಆರು ವರ್ಷದ ಫಲಿತಾಂಶ ಆಧಾರದ ಮೇಲೆ 12 ನೇ ತರಗತಿ ಫಲಿತಾಂಶ ಪ್ರಕಟ ಮಾಡುವ ಬಗ್ಗೆ ಯೋಜಿಸಲಾಗಿದೆ. ಈ ಬಗ್ಗೆ ಜೂನ್ 21ರಂದು ಸುಪ್ರೀಂ ಕೋರ್ಟ್ ವಿಸ್ತೃತ ಆದೇಶ ನೀಡಲಿದೆ.

ICSE Board Results 2021: 6 ವರ್ಷದ ಅಂಕ ಆಧರಿಸಿ 12ನೇ ತರಗತಿ ಫಲಿತಾಂಶ; ತಾತ್ವಿಕ ಒಪ್ಪಿಗೆ ನೀಡಿದ ಸುಪ್ರೀಂಕೋರ್ಟ್
ಪ್ರಾತಿನಿಧಿಕ ಚಿತ್ರ
TV9 Web
| Updated By: ganapathi bhat

Updated on:Jun 17, 2021 | 3:57 PM

Share

ದೆಹಲಿ: ಈ ಮೊದಲ 6 ವರ್ಷದ ಫಲಿತಾಂಶ ಆಧರಿಸಿ 12ನೇ ತರಗತಿ ಫಲಿತಾಂಶ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ತಾತ್ವಿಕ ಒಪ್ಪಿಗೆ ಸೂಚಿಸಿದೆ. CBSE ಹಾಗೂ ICSE ಪರೀಕ್ಷಾ ಫಲಿತಾಂಶಗಳ ಮಾನದಂಡಕ್ಕೆ ಸುಪ್ರೀಂ ಕೋರ್ಟ್ ತಾತ್ವಿಕ ಒಪ್ಪಿಗೆ ನೀಡಿದೆ. ICSE ಪರ ವಕೀಲರು, ಸುಪ್ರೀಂ ಕೋರ್ಟ್‌ಗೆ ತಮ್ಮ ನಿಲುವು ತಿಳಿಸಿದ್ದರು.

ಈ ಬಗ್ಗೆ ಜೂನ್ 21ರಂದು ಸುಪ್ರೀಂ ಕೋರ್ಟ್ ವಿಸ್ತೃತ ಆದೇಶ ನೀಡಲಿದೆ. ICSE ಯಿಂದ ಕಳೆದ ಆರು ವರ್ಷದ ಫಲಿತಾಂಶ ಆಧಾರದ ಮೇಲೆ 12 ನೇ ತರಗತಿ ಫಲಿತಾಂಶ ಪ್ರಕಟ ಮಾಡುವ ಬಗ್ಗೆ ಯೋಜಿಸಲಾಗಿದೆ. ಸುಪ್ರೀಂ ಕೋರ್ಟ್ ಗೆ ICSE ಪರ ವಕೀಲರು ತಮ್ಮ ನಿಲುವು ತಿಳಿಸಿದ್ದಾರೆ. CBSE, ICSE ಪರೀಕ್ಷಾ ಫಲಿತಾಂಶಗಳ ಮಾನದಂಡಕ್ಕೆ ಸುಪ್ರೀಂ ಕೋರ್ಟ್ ತಾತ್ವಿಕ ಒಪ್ಪಿಗೆ ನೀಡಿದೆ. ಈ ಬಗ್ಗೆ ಜೂನ್ 21 ರಂದು ವಿಸ್ತೃತ ಆದೇಶ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದೆ.

ಸಿಬಿಎಸ್​ಇ 12ನೇ ತರಗತಿಯ ಫಲಿತಾಂಶ ಜುಲೈ 31ರ ಹಾಗೆ ಪ್ರಕಟವಾಗುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಫಲಿತಾಂಶಕ್ಕೆ ಸಂಬಂಧಿಸಿದಂತೆ ಅಂಕ ಪರಿಗಣನೆಯ ಮಾನದಂಡದ ಕುರಿತು ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡುತ್ತಿರುವ ಸಿಬಿಎಸ್​ಇ ಬೋರ್ಡ್​, 12ನೇ ತರಗತಿ ಮಕ್ಕಳ ಅಂಕವನ್ನು 11ನೇ ತರಗತಿ ಮತ್ತು 10ನೇ ತರಗತಿ ಪರೀಕ್ಷಾ ಫಲಿತಾಂಶದ ಸಹಾಯದೊಂದಿಗೆ ನಿರ್ಧರಿಸುವುದಾಗಿ ತಿಳಿಸಿತ್ತು. ಅಲ್ಲದೇ, ಒಟ್ಟಾರೆ ಫಲಿತಾಂಶಕ್ಕೆ 12ನೇ ತರಗತಿ ಮಕ್ಕಳ ಈ ಹಿಂದಿನ ಪೂರ್ವ ಸಿದ್ಧತಾ ಪರೀಕ್ಷೆಗಳ ಅಂಕವೂ ಪರಿಗಣಿಸಲ್ಪಡುತ್ತದೆ ಎಂದು ಮಾಹಿತಿ ನೀಡಿತ್ತು.

ಈ ಪೈಕಿ ಶೇ.40ರಷ್ಟು ಅಂಕವು 12ನೇ ತರಗತಿಯಲ್ಲಿ ನಡೆಸಲಾದ ಬೇರೆ ಪರೀಕ್ಷೆಗಳ ಆಧಾರದಿಂದ ಪರಿಗಣಿಸಲ್ಪಟ್ಟರೆ ಶೇ.60ರಷ್ಟು ಅಂಕವು 11 ಹಾಗೂ 10ನೇ ತರಗತಿಯ ಪರೀಕ್ಷೆಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸುಪ್ರೀಂಕೋರ್ಟ್​ಗೆ ತಿಳಿಸಲಾಗಿತ್ತು. ನ್ಯಾಯಮೂರ್ತಿ ಎ ಎಂ ಖಾನ್​ವಿಲ್ಕರ್ ಹಾಗೂ ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ಪೀಠವು ಬೋರ್ಡ್​ನ ಅಭಿಪ್ರಾಯವನ್ನು ಇಂದು (ಜೂನ್ 17) ಆಲಿಸುತ್ತಿದ್ದು, ಶೀಘ್ರದಲ್ಲಿ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ: Karnataka PUC Result 2021: ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ತಡೆ

ಜುಲೈ ತಿಂಗಳ 3ನೇ ವಾರದಲ್ಲಿ ಎಸ್ಎಸ್ಎಲ್​ಸಿ ಪರೀಕ್ಷೆ, ಹೇಗಿದೆ ಗೊತ್ತಾ ಶಿಕ್ಷಣ ಇಲಾಖೆ ತಯಾರಿ

Published On - 3:37 pm, Thu, 17 June 21

ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್