Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಚೀಟಿ ಎಣಿಕೆಗೆ ಕೋರಿದ್ದ ಅರ್ಜಿ ಸುಪ್ರೀಂಕೋರ್ಟ್​ನಲ್ಲಿ ವಜಾ

Supreme Court judgement on EVM and VVPAT matching: ಇವಿಎಂ ಮತಗಳನ್ನು ಪೂರ್ಣವಾಗಿ ವಿವಿಪ್ಯಾಟ್ ಚೀಟಿಗಳಿಂದ ಕ್ರಾಸ್ ವೆರಿಫಿಕೇಶನ್ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಒಂದು ವ್ಯವಸ್ಥೆಯನ್ನು ಕರುಡಾಗಿ ಅನುಮಾನಿಸಬಾರದು. ರಚನಾತ್ಮಕ ಸಲಹೆಗಳಿದ್ದರೆ ನೀಡಿ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲಾ ಸ್ತಂಭಗಳ ನಡುವೆ ವಿಶ್ವಾಸ ಇರುವುದು ಅವಶ್ಯಕವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಸಿಂಬಲ್ ಲೋಡಿಂಗ್ ಯೂನಿಟ್ ಅನ್ನು ಸೀಲ್ ಮಾಡಿ 45 ದಿನ ಇಡುವಂತೆಯೂ ಮತ್ತು ಅಭ್ಯರ್ಥಿಗಳ ಮನವಿ ಮೇರೆಗೆ ವಿಪ್ಯಾಟ್ ವೆರಿಫಿಕೇಶನ್ ಮಾಡಲು ಅವಕಾಶ ನೀಡುವಂತೆಯೂ ಕೋರ್ಟ್ ಆದೇಶಿಸಿದೆ.

ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಚೀಟಿ ಎಣಿಕೆಗೆ ಕೋರಿದ್ದ ಅರ್ಜಿ ಸುಪ್ರೀಂಕೋರ್ಟ್​ನಲ್ಲಿ ವಜಾ
ಸುಪ್ರೀಂಕೋರ್ಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 26, 2024 | 11:28 AM

ನವದೆಹಲಿ, ಏಪ್ರಿಲ್ 26: ಇವಿಎಂ ಮೆಷೀನ್​ನಲ್ಲಿ ಬಿದ್ದ ಮತಗಳನ್ನು ಸಂಪೂರ್ಣವಾಗಿ ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನ ಮತ್ತು ದೀಪಂಕರ್ ದತ್ತಾ ಅವರು ಈ ಆದೇಶ ನೀಡಿದ್ದಾರೆ. ಏಪ್ರಿಲ್ 18ರಂದು ಸುಪ್ರೀಂ ನ್ಯಾಯಪೀಠ ಈ ಅರ್ಜಿಗಳ ವಿಚಾರಣೆ ಮುಕ್ತಾಯಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಮೊನ್ನೆ (ಏಪ್ರಿಲ್ 24) ಚುನಾವಣಾ ಆಯೋಗದಿಂದ ಕೆಲ ಅಂಶಗಳ ಬಗ್ಗೆ ಸ್ಪಷ್ಟೀಕರಣ ಪಡೆಯಲು ವಿಚಾರಣೆ ನಡೆಸಿತ್ತು. ಇದೀಗ ನ್ಯಾಯಪೀಠ ತನ್ನ ತೀರ್ಪು ನೀಡಿದ್ದು, ಇವಿಎಂ ಮತ್ತು ವಿವಿಪ್ಯಾಟ್ ಪೂರ್ಣ ತಾಳೆಯಾಗಬೇಕೆನ್ನುವ ಮನವಿಯನ್ನು ತಿರಸ್ಕರಿಸಲು ನಿರ್ಧರಿಸಿದೆ.

‘ವಿವಿಧ ದೃಷ್ಟಿಕೋನ ಇರಬೇಕೆನ್ನುವುದು ಮುಖ್ಯ ಹೌದು. ಆದರೆ, ಒಂದು ವ್ಯವಸ್ಥೆಯನ್ನು ಕುರುಡಾಗಿ ಅನುಮಾನಿಸುವುದು ತಪ್ಪಾಗುತ್ತದೆ. ನ್ಯಾಯಾಂಗವಾಗಲೀ, ಶಾಸಕಾಂಗವಾಗಲೀ ಅರ್ಥಗರ್ಭಿತ ಟೀಕೆಗಳು ಬೇಕಾಗುತ್ತದೆ. ಪ್ರಜಾತಂತ್ರದ ಎಲ್ಲಾ ಸ್ತಂಭಗಳ ನಡುವೆ ವಿಶ್ವಾಸ ಇರುವುದು ಅಗತ್ಯ. ಈ ರೀತಿ ನಂಬಿಕೆ ಮತ್ತು ಸಹಕಾರದ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಪ್ರಜಾತಂತ್ರದ ಧ್ವನಿಯನ್ನು ಬಲಪಡಿಸಬಹುದು,’ ಎಂದು ನ್ಯಾಯಮೂರ್ತಿ ದೀಪಂಕರ್ ದತ್ತಾ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಬನ್ನಿ, ನಿಮ್ಮ ನಾಯಕನ ಆಯ್ಕೆ ಮಾಡಿ: ಮತದಾನದ ಬಳಿಕ ಸುಧಾಮೂರ್ತಿ ಸಂದೇಶ

ಸಿಂಬಲ್ ಲೋಡಿಂಗ್ ಯೂನಿಟ್​ಗೆ ಸೀಲ್

ಸುಪ್ರೀಂಕೋರ್ಟ್​ನ ದ್ವಿಸದಸ್ಯ ನ್ಯಾಯಪೀಠ ಈ ವೇಳೆ ಎರಡು ಮಹತ್ವದ ನಿರ್ದೇಶನ ನೀಡಿದೆ. ಇವಿಎಂ ಮೆಷೀನ್​ಗಳಲ್ಲಿ ಚಿಹ್ನೆ ನಮೂದಾದ ಬಳೀಕ ಸಿಂಬಲ್ ಲೋಡಿಂಗ್ ಯೂನಿಟ್ ಅನ್ನು ಸೀಲ್ ಮಾಡಬೇಕು. ಈ ಯೂನಿಟ್ ಅನ್ನು ಕನಿಷ್ಠ 45 ದಿನಗಳವರೆಗೆ ರಕ್ಷಿಸಿ ಇಡಬೇಕು ಎಂದು ಕೋರ್ಟ್ ಆದೇಶಿಸಿದೆ.

ಫಲಿತಾಂಶ ಘೋಷಣೆ ಬಳಿಕ ಬರ್ನ್ಟ್ ಮೆಮೊರಿ ಪರಿಶೀಲನೆ

ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಅಭ್ಯರ್ಥಿಗಳು ವಿವಿಪ್ಯಾಟ್ ಕ್ರಾಸ್ ವೆರಿಫಿಕೇಶನ್​ಗೆ ಮನವಿ ಮಾಡಿದರೆ ಇವಿಎಂ ಮೆಷೀನ್​ನಲ್ಲಿರುವ ಮೈಕ್ರೋಕಂಟ್ರೋಲ್​ನಲ್ಲಿನ ಬರ್ನ್ಟ್ ಮೆಮೊರಿಯನ್ನು ತಂತ್ರಜ್ಞರ ತಂಡವೊಂದು ಪರಿಶೀಲನೆ ನಡೆಸಲು ಅವಕಾಶ ಕೊಡಬೇಕು. ಇದರ ವೆಚ್ಚವನ್ನು ಅಭ್ಯರ್ಥಿಯೇ ಭರಿಸಬೇಕಾಗುತ್ತದೆ. ಒಂದು ವೇಳೆ ಇವಿಎಂ ತಿರುಚಲಾಗಿರುವುದು ಗೊತ್ತಾದರೆ ಅಭ್ಯರ್ಥಿಗೆ ಆ ಹಣ ರೀಫಂಡ್ ಮಾಡಬಹುದು ಎಂದೂ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವಿಭಿನ್ನವಾಗಿ ಮತದಾನ ಜಾಗೃತಿ ಮೂಡಿಸಿದ ‘ಪೆಟ್ರೋಲ್ ಅಂಕಲ್’! ವಿಡಿಯೋ ನೋಡಿ

ಈಗ ಹೇಗಿದೆ ಮತ ಎಣಿಕೆ ವ್ಯವಸ್ಥೆ?

ಇವಿಎಂನಲ್ಲಿ ಮತ ಹಾಕಿದಾಗ ವಿವಿಪ್ಯಾಟ್ ಸ್ಲಿಪ್ ಬರುವ ವ್ಯವಸ್ಥೆ ಇದೆ. ಆದರೆ, ವಿವಿಪ್ಯಾಟ್​ನಿಂದ ಬರುವ ಚೀಟಿಗಳನ್ನು ಪೂರ್ಣವಾಗಿ ಎಣಿಸಲಾಗುವುದಿಲ್ಲ. ಒಂದು ವಿಧಾನಸಭಾ ಕ್ಷೇತ್ರದ ಐದು ಆಯ್ದ ಎವಿಎಂಗಳನ್ನು ಪೂರ್ಣವಾಗಿ ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡಿ ಕ್ರಾಸ್ ವೆರಿಫೈ ಮಾಡಲಾಗುತ್ತಿದೆ. ದೇಶಾದ್ಯಂತ ಎಲ್ಲಾ ಇವಿಎಂ ಮೆಷೀನ್​ಗಳಿಗೂ ಈ ಕ್ರಾಸ್ ವೆರಿಫಿಕೇಶನ್ ಆಗಬೇಕು ಎಂಬುದು ಅರ್ಜಿದಾರರ ಮನವಿಯಾಗಿತ್ತು. ಆದರೆ, ಈ ಕೋರಿಕೆಯನ್ನು ಕೋರ್ಟ್ ಪುರಸ್ಕರಿಸಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:54 am, Fri, 26 April 24

ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ