Sukanta Majumdar: ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಐಸಿಯುನಲ್ಲಿ, ಅವರಿಗೆ ವಿಶ್ರಾಂತಿ ಅಗತ್ಯವಿದೆ: ಸುವೇಂದು ಅಧಿಕಾರಿ
ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಸುವೇಂದು ಅಧಿಕಾರಿ, ಸುಕಾಂತ್ ಮಜುಂದಾರ್ ಐಸಿಯುನಲ್ಲಿದ್ದಾರೆ. ಎದೆ, ಪಕ್ಕೆಲುಬುಗಳು, ಬೆನ್ನಿನಲ್ಲಿ ನೋವು ಇದೆ. ಡ್ರಿಪ್ ಹೊರತುಪಡಿಸಿ ಅವರಿಗೆ ಏನನ್ನೂ ನೀಡುತ್ತಿಲ್ಲ.ನಮ್ಮ ಯುವ ನಾಯಕ. ಬೇಗ ಚೆತರಿಸಿಕೊಳ್ಳಲಿ. ಅವರಿಗೆ 10-12 ಗಂಟೆಗಳ ವಿಶ್ರಾಂತಿ ಬೇಕು. ಆಸ್ಪತ್ರೆಗಳು ವಿಶ್ವಾಸಾರ್ಹವಾಗಿವೆ. ಎಲ್ಲವು ಸರಿಯಾಗುತ್ತದೆ. ಬಿಜೆಪಿ ಸಂಸದರಿಗೆ ಈಗ ವಿಶ್ರಾಂತಿ ಬೇಕಾಗಿದೆ ಎಂದಿದ್ದಾರೆ.
ಕೋಲ್ಕತ್ತಾ ಫೆಬ್ರುವರಿ 15: ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ( Sukanta Majumdar) ಕೊಲ್ಕತ್ತಾದ ಅಪೋಲೊ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಧವಾರ ಸಂದೇಶಖಾಲಿಯಲ್ಲಿ(Sandeshkhali protest) ಪ್ರತಿಭಟನೆ ನಡೆಸುತ್ತಿದ್ದಾಗ ಬಿದ್ದು ಅವರು ಪ್ರಜ್ಞೆ ಕಳೆದುಕೊಂಡರು. ತಕ್ಷಣವೇ ಅವರನ್ನು ಬಸಿರ್ಹತ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಮಧ್ಯಾಹ್ನ 5:30ರ ಸುಮಾರಿಗೆ ಅವರನ್ನು ಕೋಲ್ಕತ್ತಾದ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ರಾಜ್ಯಪಾಲ ಸಿ.ವಿ.ಆನಂದ ಬೋಸ್ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ (Suvendu Adhikari) ಗುರುವಾರ ಆಸ್ಪತ್ರೆಗೆ ಭೇಟಿ ಆರೋಗ್ಯ ವಿಚಾರಿಸಿದ್ದಾರೆ. ಸುಕಾಂತರಿಗೆ ವಿಶ್ರಾಂತಿ ಅಗತ್ಯವಿದೆ. ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ಸುವೇಂದು ಹೇಳಿದ್ದಾರೆ.
ಸದ್ಯ ಸುಕಾಂತ್ ಮಜುಂದಾರ್ ಐಸಿಯುನಲ್ಲಿದ್ದಾರೆ. ಎದೆ, ಪಕ್ಕೆಲುಬುಗಳು, ಬೆನ್ನಿನಲ್ಲಿ ನೋವು ಇದೆ. ಡ್ರಿಪ್ ಹೊರತುಪಡಿಸಿ ಅವರಿಗೆ ಏನನ್ನೂ ನೀಡುತ್ತಿಲ್ಲ.“ನಮ್ಮ ಯುವ ನಾಯಕ. ಬೇಗ ಚೆತರಿಸಿಕೊಳ್ಳಲಿ. ಅವರಿಗೆ 10-12 ಗಂಟೆಗಳ ವಿಶ್ರಾಂತಿ ಬೇಕು. ಆಸ್ಪತ್ರೆಗಳು ವಿಶ್ವಾಸಾರ್ಹವಾಗಿವೆ. ಎಲ್ಲವು ಸರಿಯಾಗುತ್ತದೆ. ಬಿಜೆಪಿ ಸಂಸದರಿಗೆ ಈಗ ವಿಶ್ರಾಂತಿ ಬೇಕಾಗಿದೆ.ಇಂದು ಮಧ್ಯಾಹ್ನ 12 ಗಂಟೆಯ ಮೊದಲು ಯಾರೂ ಭೇಟಿ ಮಾಡಲು ಬರಬೇಡಿ ಎಂದು ಸುವೇಂದು ಮನವಿ ಮಾಡಿದ್ದಾರೆ.
#WATCH | Kolkata: West Bengal Opposition leader Suvendu Adhikari reached Apollo Hospital to enquire about West Bengal BJP President Sukanta Majumdar’s health. (14.02)
(Source: Office of Suvendu Adhikari) pic.twitter.com/kMKzJ6TlnH
— ANI (@ANI) February 15, 2024
ಈ ಬಗ್ಗೆ ಮಾತನಾಡಿದ ಬಿಜೆಪಿ ನಾಯಕ ಶಮಿಕ್ ಭಟ್ಟಾಚಾರ್ಯ, ‘ವೈದ್ಯರ ಜತೆ ಮಾತುಕತೆ ನಡೆಸಲಾಗಿದೆ. ಗಾಯ ಎಷ್ಟು ಆಳವಾಗಿದೆ ಎಂದು ನೋಡಲು ಅವರನ್ನು CT ಸ್ಕ್ಯಾನ್‌ಗೆ ಕರೆದೊಯ್ಯಲಾಯಿತು. ಎದೆ, ಪಕ್ಕೆಲುಬು, ಸೊಂಟದಲ್ಲಿ ಗಾಯಗಳಾಗಿವೆ. ಅವರು ಆಘಾತಕ್ಕೊಳಗಾಗಿದ್ದಾರೆ ಎಂದಿದ್ದಾರೆ.
ಕಾರಿನಿಂದ ಬಿದ್ದು ಗಾಯಗೊಂಡ ಸುಕಾಂತ ಮಜುಂದಾರ್
ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಅವರು ಸಂದೇಶಖಾಲಿ ಪ್ರತಿಭಟನೆಯ ನಡುವೆ ಕಾರಿನಿಂದ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಮಜುಂದಾರ್ ಬ್ಯಾಲೆನ್ಸ್ ಕಳೆದುಕೊಂಡು ನಿಂತಿದ್ದ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ. ಮೊದಲಿಗೆ ಅವರನ್ನು ಬಸಿರ್‌ಹತ್ ಮಲ್ಟಿ ಫೆಸಿಲಿಟಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: Sandeshkhali Protest: ಸಂದೇಶಖಾಲಿ ಪ್ರತಿಭಟನೆ: ಲಾಠಿ ಚಾರ್ಜ್ ವೇಳೆ ಬಂಗಾಳ ಬಿಜೆಪಿ ಮುಖ್ಯಸ್ಥರಿಗೆ ಗಾಯ
ಟಿಎಂಸಿ ನಾಯಕ ಶಾಜಹಾನ್ ಶೇಖ್ ಮತ್ತು ಅವರ ಸಹಚರರು ತಮ್ಮ ವಿರುದ್ಧ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಸಂದೇಶಖಾಲಿಯಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೂ ಮೊದಲು, ಸ್ಥಳೀಯರು, ವಿಶೇಷವಾಗಿ ಮಹಿಳೆಯರು, ಸಂದೇಶಖಾಲಿಯಲ್ಲಿ ಕೈಯಲ್ಲಿ ಚಪ್ಪಲಿಗಳನ್ನು ಹಿಡಿದು ಮೆರವಣಿಗೆ ನಡೆಸಿದರು. ಭೂ ಪಡಿತರ ಹಂಚಿಕೆ ಹಗರಣ ಮತ್ತು ಆಪಾದಿತ ಅತ್ಯಾಚಾರ ಘಟನೆಗಳಲ್ಲಿ ಟಿಎಂಸಿ ನಾಯಕ ಷಹಜಹಾನ್ ಶೇಖ್ ಅವರನ್ನು ಬಂಧಿಸುವಂತೆ ಅವರು ಒತ್ತಾಯಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ