Suvendu Adhikari: ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ; ಸುವೇಂದು ಅಧಿಕಾರಿ ವಿರುದ್ಧ ಗುಡುಗಿದ ಟಿಎಂಸಿ

Rahul Gandhi: ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ನಿರತರಾಗಿರುವ ಕಾರಣ ರಾಜ್ಯ ಕಾಂಗ್ರೆಸ್, ಸುವೇಂದು ಅಧಿಕಾರಿಯವರ ಅವಹೇಳನಕಾರಿ ಹೇಳಿಕೆ ಬಗ್ಗೆ ಇನ್ನೂ ಪ್ರತಿಕ್ರಿಯಿಸದಿದ್ದರೂ ಇಂಡಿಯಾ ಮೈತ್ರಿಕೂಟದಲ್ಲಿನ ಅದರ ಮಿತ್ರ ಪಕ್ಷ ತೃಣಮೂಲ,ಬಿಜೆಪಿ ಮತ್ತು ವಿಶೇಷವಾಗಿ ಕಾಂಗ್ರೆಸ್‌ನ ರಾಜ್ಯ ನಾಯಕರನ್ನು ಗುರಿಯಾಗಿಸಲು ಅವಕಾಶವನ್ನು ಬಳಸಿಕೊಂಡಿದೆ.

Suvendu Adhikari: ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ; ಸುವೇಂದು ಅಧಿಕಾರಿ ವಿರುದ್ಧ ಗುಡುಗಿದ ಟಿಎಂಸಿ
ಸುವೇಂದು ಅಧಿಕಾರಿ
Follow us
ರಶ್ಮಿ ಕಲ್ಲಕಟ್ಟ
|

Updated on: Jan 29, 2024 | 4:58 PM

ಕೋಲ್ಕತ್ತಾ ಜನವರಿ 29: ಲೋಕಸಭೆ ಚುನಾವಣೆಗೆ (Lok sabha Election) ಸೀಟು ಹಂಚಿಕೆ ಕುರಿತು ಜಟಾಪಟಿ ನಡೆಯುತ್ತಿರುವ ನಡುವೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಬಗ್ಗೆ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ (Suvendu Adhikari) ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಬಿಹಾರ ತಲುಪಿರುವ ಹೊತ್ತಲ್ಲಿ ಈ ವಿವಾದ ಉಂಟಾಗಿದೆ. ಜನವರಿ 14 ರಂದು ಮಣಿಪುರದಲ್ಲಿ ಆರಂಭವಾದ ಯಾತ್ರೆ ಗುರುವಾರ ಬಂಗಾಳವನ್ನು ಪ್ರವೇಶಿಸಿತ್ತು. ಎರಡು ದಿನಗಳ ವಿರಾಮದ ನಂತರ ಇಂದು ಮತ್ತೆ ಆರಂಭಗೊಂಡು ಬಿಹಾರ ತಲುಪಿದೆ. ಇದು ಈ ವಾರದ ಕೊನೆಯಲ್ಲಿ ಮತ್ತೆ ಬಂಗಾಳಕ್ಕೆ ಪ್ರವೇಶಿಸಲಿದೆ.

ಯಾತ್ರೆಯ ಪರಿಣಾಮದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧಿಕಾರಿ, ಗಾಂಧಿ ಅವರನ್ನು ಮೂರ್ಖ ಎಂದು ಸೂಚಿಸಲು ಅವಹೇಳನಕಾರಿ ಹೇಳಿಕೆಯನ್ನು ಬಳಸಿದರು. ಈ ಹಿಂದೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಹುಲ್ ಗಾಂಧಿಯನ್ನು ಅಪಹಾಸ್ಯ ಮಾಡಲು ‘ಒಲೆಯ ಮೇಲೆ ಕಲ್ಲಿದ್ದಲು’ ಹೇಳಿಕೆ ಬಳಸಿದ್ದು, ಇದನ್ನೇ ಸುವೇಂದು ಪುನರಾವರ್ತಿಸಿದ್ದಾರೆ. ರಾಹುಲ್ ಗಾಂಧಿ ಯಾರು?. ಕಲ್ಲಿದ್ದಲು ಒಲೆಯ ಮೇಲೆ ಹಾಕಿದ ನಂತರ ಚಹಾವನ್ನು ಬಿಸಿ ಮಾಡಬೇಕು ಎಂದು ಅವರು ಹೇಳುತ್ತಾರೆ. ಒಲೆಯ ಮೇಲೆ ಕಲ್ಲಿದ್ದಲು? ನಾನು ಈ ರೀತಿ ಏನನ್ನೂ ಕೇಳಿಲ್ಲ” ಎಂದಿದ್ದಾರೆ ಬಿಜೆಪಿ ನಾಯಕ.

ಅಸ್ಸಾಂನ ಧುಬ್ರಿಯಲ್ಲಿ ನಡೆದ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು ಭ್ರಷ್ಟಾಚಾರದ ಕುರಿತು ಶರ್ಮಾ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಸ್ಸಾಂ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿಯಾಗಿದ್ದು, ಕಲ್ಲಿದ್ದಲು, ಚಹಾ ಸೇರಿದಂತೆ ಎಲ್ಲಾ ವ್ಯವಹಾರಗಳಲ್ಲಿ ಕಡಿತ ಹೊಂದಿದ್ದಾರೆ ಎಂದು ಆರೋಪಿಸಿದ ರಾಹುಲ್ , “ನೀವು ಬೆಳಿಗ್ಗೆ ಎದ್ದ ನಂತರ ಚಹಾ ತಯಾರಿಸಲು ಕಲ್ಲಿದ್ದಲು ಒಲೆಯ ಮೇಲೆ ಇಟ್ಟಾಗ ಕಲ್ಲಿದ್ದಲಿನಿಂದ ಬರುವ ಲಾಭ ನಿಮ್ಮ ಮುಖ್ಯಮಂತ್ರಿಗೆ ಹೋಗುತ್ತದೆ, ನೀವು ಕುಡಿಯುವ ಚಹಾ, ಅದರ ತೋಟಗಳು ನಿಮ್ಮ ಮುಖ್ಯಮಂತ್ರಿಗೆ ಸೇರಿವೆ ಎಂದಿದ್ದರು.

ಯಾತ್ರೆಯಲ್ಲಿ ನಿರತರಾಗಿರುವ ಕಾರಣ ರಾಜ್ಯ ಕಾಂಗ್ರೆಸ್, ಸುವೇಂದು ಅಧಿಕಾರಿಯವರ ಅವಹೇಳನಕಾರಿ ಹೇಳಿಕೆ ಬಗ್ಗೆ ಇನ್ನೂ ಪ್ರತಿಕ್ರಿಯಿಸದಿದ್ದರೂ ಇಂಡಿಯಾ ಮೈತ್ರಿಕೂಟದಲ್ಲಿನ ಅದರ ಮಿತ್ರ ಪಕ್ಷ ತೃಣಮೂಲ,ಬಿಜೆಪಿ ಮತ್ತು ವಿಶೇಷವಾಗಿ ಕಾಂಗ್ರೆಸ್‌ನ ರಾಜ್ಯ ನಾಯಕರನ್ನು ಗುರಿಯಾಗಿಸಲು ಅವಕಾಶವನ್ನು ಬಳಸಿಕೊಂಡಿದೆ.

ತೃಣಮೂಲ ನಾಯಕ ಹಾಗೂ ವಕ್ತಾರ ಕುನಾಲ್‌ ಘೋಷ್‌ ಅವರು ‘ರಾಹುಲ್‌ ಗಾಂಧಿಯನ್ನು ಗುರಿಯಾಗಿಸಲು ಅವರು ಯಾವ ಭಾಷೆ ಬಳಸುತ್ತಿದ್ದಾರೆ. ರಾಜಕೀಯದಲ್ಲಿ ಇಂತಹ ಅಸಭ್ಯ ವರ್ತನೆ ನಿಲ್ಲಬೇಕು. ಬಿಜೆಪಿಯ ಪಿಂಪ್‌ಗಳಂತೆ ವರ್ತಿಸುವ ರಾಜ್ಯ ಕಾಂಗ್ರೆಸ್‌ ನಾಯಕರು ಎಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ? ಇಷ್ಟು ಕೀಳು ಮಟ್ಟಕ್ಕೆ ಇಳೀತೀರಾ? ಸುವೇಂದು ಅವರ ರಾಜಕೀಯಕ್ಕೆ ಈಗ ನಾಚಿಕೆಯೇ ಇಲ್ಲ.ಈ ರೋಗಗ್ರಸ್ತ ಭಾಷೆಯನ್ನು ನಾನು ಪ್ರತಿಭಟಿಸುತ್ತೇನೆ ಎಂದಿದ್ದಾರೆ

ಒಮ್ಮೆ ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿಯವರ ನಂಬಿಕಸ್ಥರಾಗಿದ್ದ ಸುವೇಂದು ಅಧಿಕಾರಿಯನ್ನು ತೃಣಮೂಲ ಕಾಂಗ್ರೆಸ್ ದೇಶದ್ರೋಹಿ ಎಂದಿತ್ತು.

ಇದನ್ನೂ ಓದಿ:Bharat Jodo Nyay Yatra: ವೃದ್ಧಾಪ್ಯ ವೇತನ ಕೊಡಿಸಿ ಎಂದು ರಾಹುಲ್ ಗಾಂಧಿ ಮುಂದೆ ಕಣ್ಣೀರಿಟ್ಟ 105 ವರ್ಷದ ನಾನಿಬಾಲಾ 

ಇಂಡಿಯಾ ಮೈತ್ರಿಕೂಟದಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಅವರ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಹಗ್ಗ ಜಗ್ಗಾಟದ ಹಿನ್ನೆಲೆಯಲ್ಲಿ ತೃಣಮೂಲ ನಾಯಕನ ಈ ಹೇಳಿಕೆ ಬಂದಿದೆ. ಬಂಗಾಳದಲ್ಲಿ ತಮ್ಮ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತದೆ ಮತ್ತು ಚುನಾವಣೆಯ ನಂತರ ಮೈತ್ರಿ ಕುರಿತು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಮಮತಾ ಹೇಳಿದ್ದಾರೆ. ಆಗಿನಿಂದ ಕಾಂಗ್ರೆಸ್ ಡ್ಯಾಮೇಜ್ ಕಂಟ್ರೋಲ್ ಮೋಡ್‌ನಲ್ಲಿದೆ.

ಸೀಟು ಹಂಚಿಕೆಯ ಬಿಕ್ಕಟ್ಟಿಗೆ ತೃಣಮೂಲ ನಾಯಕತ್ವವು ಪಕ್ಷದ ಲೋಕಸಭೆಯ ನಾಯಕ ಅಧೀರ್ ರಂಜನ್ ಚೌಧರಿ ಅವರ ನೇತೃತ್ವದಲ್ಲಿ ಸ್ಥಳೀಯ ಕಾಂಗ್ರೆಸ್ ಘಟಕವನ್ನು ಪದೇ ಪದೇ ದೂಷಿಸಿದೆ. ಪಕ್ಷವು ಈ ಹಿಂದೆಯೂ ಸಹ ಚೌಧರಿ ಅವರನ್ನು “ಬಿಜೆಪಿ ಏಜೆಂಟ್” ಎಂದು ಆರೋಪಿಸಿದೆ.ಚೌಧರಿ ಅವರು ಬ್ಯಾನರ್ಜಿ ಅವರನ್ನು “ಅವಕಾಶವಾದಿ” ಎಂದು ಕರೆದಿದ್ದು, ಸೀಟು ಹಂಚಿಕೆಯ ಭಾಗವಾಗಿ ತೃಣಮೂಲದ ಎರಡು  ಸ್ಥಾನಗಳ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್