ಪಾಕ್ ದಾಳಿಗೆ ಯತ್ನ: ಡ್ರೋನ್, ಕ್ಷಿಪಣಿ ಎಫ್‌-16 ಯುದ್ಧ ವಿಮಾನ ಧ್ವಂಸಗೊಳಿಸಿದ ಭಾರತೀಯ ಸೇನಾಪಡೆ

ಆಪರೇಷನ್ ಸಿಂಧೂರ ಸಮರದ ಮಧ್ಯೆ ಪಾಕಿಸ್ತಾನ ಗಡಿಯಲ್ಲಿ ಭಾರತದ ಮೇಲೆ ದಾಳಿ ಮಾಡುವ ದುಸ್ಸಾಹಸದಲ್ಲಿದೆ. ಜಮ್ಮು ವಿಮಾನ ನಿಲ್ದಾಣದ ಬಳಿ ಪಾಕ್‌ ಡ್ರೋನ್‌ಗಳ ಮೂಲಕ ದಾಳಿ ಮಾಡಲು ಯತ್ನಿಸಿದೆ. ಪಾಕಿಸ್ತಾನದ 8 ಮಿಸೈಲ್‌ಗಳನ್ನ ಭಾರತ ಹೊಡೆದುರುಳಿಸಿದೆ. ಇನ್ನು ಪಾಕಿಸ್ತಾನದ ಫೈಟರ್​ ಜಟ್​​ ಎಫ್​​16 ಅನ್ನು ಭಾರತೀಯ ಸೇನಾಪಡೆ ಉಡೀಸ್ ಮಾಡಿದೆ ಎಂದು ವರದಿಯಾಗಿದೆ.

ಪಾಕ್ ದಾಳಿಗೆ ಯತ್ನ:  ಡ್ರೋನ್, ಕ್ಷಿಪಣಿ ಎಫ್‌-16 ಯುದ್ಧ ವಿಮಾನ ಧ್ವಂಸಗೊಳಿಸಿದ ಭಾರತೀಯ ಸೇನಾಪಡೆ
Swarm Drone Attack By Pakistan

Updated on: May 08, 2025 | 9:57 PM

ನವದೆಹಲಿ, (ಮೇ 08): ಪ್ರತೀಕಾರವಾಗಿ ಪಾಕಿಸ್ತಾನ (Pakistan), ಭಾರತೀಯ ಸೇನಾ (Indian Air Force) ನೆಲೆಯನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಲು ಮುಂದಾಗಿದೆ. ಆದರೆ ಭಾರತ, ಪಾಕ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಜಮ್ಮು ವಾಯುನೆಲೆ, ಜೈಸಲ್ಮೇರ್‌, ಪಠಾಣ್‌ಕೋಟ್‌, ಅಖ್ನೂರ್‌, ರಾಜೌರಿ,ಪೂಂಚ್‌, ತಂಗಹಾರ್‌, ಸೇರಿದಂತೆ ಗಡಿ ಸಮೀಪದ ಹಲವಾರು ಪ್ರದೇಶಗಳ ಮೇಲೆ ಪಾಕಿಸ್ತಾನ ಡ್ರೋನ್‌ ದಾಳಿಗೆ ಯತ್ನಿಸಿದೆ.  ಆದ್ರೆ, ಇದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಅಲ್ಲದೇ ಪಾಕಿಸ್ತಾನದ​ ಫೈಟರ್​ ಜೆಟ್​ ಎಫ್‌-16 ಅನ್ನು ಭಾರತೀಯ ಸೇನಾಪಡೆ ಧ್ವಂಸಗೊಳಿಸಿದೆ. ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರಮುಖವಾಗಿ ಚನಿ ಹಿಮತ್‌, ಆರ್‌ಎಸ್‌ ಪುರ, ಜಮ್ಮುವಿನ 3 ಕಡೆಯಲ್ಲಿ ಪಾಕಿಸ್ತಾನ ಡ್ರೋನ್‌ ದಾಳಿಗೆ ಯತ್ನ ಮಾಡಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್‌ನಿಂದ ಗುಂಡಿನ ದಾಳಿ ಕೂಡ ಮುಂದುವರಿದಿದೆ. ಈ ಬಿಗುವಿನ ವಾತಾವರಣದಲ್ಲಿ ಜಮ್ಮುವಿನಾದ್ಯಂತ ವಾಯು ದಾಳಿ ಸೈರನ್‌ ಮೊಳಗಿದೆ.

ಇದನ್ನೂ ಓದಿ: ದೇಶದೊಳಗೆ ನುಗ್ಗಲು ಬಂದ ಪಾಕಿಸ್ತಾನದ ಮೇಲೆ ಭಾರತ ದಾಳಿ; ಲಾಹೋರ್​ನಲ್ಲಿ ವಾಯು ರಕ್ಷಣಾ ವ್ಯವಸ್ಥೆ ಧ್ವಂಸ

ಜಮ್ಮು ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಲು ಪಾಕಿಸ್ತಾನ ವಿಫಲ ಪ್ರಯತ್ನ ನಡೆಸಿದ್ದು,, ಎಸ್ -400 ಹಲವಾರು ಪಾಕ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಪಾಕಿಸ್ತಾನದಿಂದ ಕಳುಹಿಸಲಾದ ಕ್ಷಿಪಣಿ, ಡ್ರೋನ್‌ಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ.  ಇನ್ನು ಪಾಕಿಸ್ತಾನದ 1 ಎಫ್‌-16, 2 ಜೆಎಫ್‌-17 ಫೈಟರ್ ಜೆಟ್‌ಗಳನ್ನು ಉಡೀಸ್ ಮಾಡಿದೆ. ಈ ಘಟನೆಯಿಂದ ಜಮ್ಮುವಿನಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ
ಜಮ್ಮುವಿನಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭಾರತ
ಸ್ಥಳಾಂತರಗೊಂಡವರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಸರ್ಕಾರ
ಪಾಕಿಸ್ತಾನ ದಾಳಿಯನ್ನು ನಿಲ್ಲಿಸದಿದ್ದರೆ ಭಾರತ ಉತ್ತರ ಕೊಡುತ್ತಲೇ ಇರುತ್ತದೆ
ರಕ್ಷಣೆ ಮಾಡಿ: ಭಾರತದ ಏಟಿಗೆ ಗೋಳೋ ಅಂತ ಅತ್ತ ಪಾಕ್ ಎಂಪಿ, ವಿಡಿಯೋ ನೋಡಿ

ಸಾಂಬಾ ರಾಷ್ಟ್ರೀಯ ಹೆದ್ದಾರಿ ಗುರಿಯಾಗಿಸಿ ಪಾಕ್​​ ಕ್ಷಿಪಣಿ, ಡ್ರೋನ್​ ದಾಳಿಗೆ ಯತ್ನಿಸುತ್ತಿದ್ದು, ಅದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಇನ್ನು ಶ್ರೀನಗರದ ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಶ್ರೀನಗರದ ಏರ್‌ಪೋರ್ಟ್‌ನಲ್ಲಿ ಏರ್‌ ಡಿಫೆನ್ಸ್‌ ಸಿಸ್ಟಮ್‌ ಆ್ಯಕ್ಟೀವ್​ ಆಗಿದೆ.

ಇನ್ನು ಪಂಜಾಬ್‌ನ ಹೋಸಿಯಾರ್‌ಪುರದ ಮೇಲೂ ಪಾಕಿಸ್ತಾನದಿಂದ ಡ್ರೋನ್‌ ದಾಳಿಗೆ ಯತ್ನಿಸಿದೆ. ಆದ್ರೆ, ಇದನ್ನು ಭಾರತ ಸೇನೆ ವಿಫಲಗೊಳಿಸಿದೆ. ಇನ್ನು ಪಾಕಿಸ್ತಾನದ ಎರಡು ಜೆಎಪ್‌-17 ಯುದ್ಧ ವಿಮಾನಗಳನ್ನ ಸಹ ಹೊಡೆದುರುಳಿಸುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಪಾಕ್​ ದಾಳಿಯನ್ನು ವಿಫಲಗೊಳಿಸಿದ ಭಾರತದ ಸುದರ್ಶನ ಚಕ್ರ S-400: ಇದರ ತಾಕತ್ತಿನ ಬಗ್ಗೆ ತಿಳಿದುಕೊಳ್ಳಲೇಬೇಕು

ಒಟ್ಟಿನಲ್ಲಿ ಪಾಕಿಸ್ತಾನ  ಭಾರದತ ವಿವಿದೆಡೆ ನಡೆಸಿದ ವಾಯು ದಾಳಿ ಯತ್ನ ವಿಫಲಗೊಂಡಿದೆ. ಹೀಗಾಗಿ ಪಠಾಣ್‌ಕೋಟ್‌, ಜೈಸಲ್ಮೇರ್‌ ಸೇರಿದಂತೆ ಭಾರತದ ಎಲ್ಲಾ ವಾಯುನೆಲೆ ಸುರಕ್ಷಿತವಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 9:30 pm, Thu, 8 May 25